Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ತಿರುವನಂತಪುರಂ: ಹಾಸಿಗೆಯಲ್ಲಿ ಮೂತ್ರ ಮಾಡಿತು ಎಂಬ ಕಾರಣಕ್ಕೆ ಮಲತಾಯಿಯೊಬ್ಬಳು ಮಗುವಿನ ಗುಪ್ತಾಂಗವನ್ನು ಸುಟ್ಟು ಘಟನೆ ಕೇರಳದ ಕಾಂಜಿಕೋಡ್ ಬಳಿ ನಡೆದಿದೆ.
5 ವರ್ಷದ ಕಂದಮ್ಮ ಮಲಗಿದ್ದಾಗ ಗೊತ್ತಾಗದೇ ಹಾಸಿಗೆಯಲ್ಲಿ ಮೂತ್ರ ಮಾಡಿದೆ. ಇದೇ ಕಾರಣಕ್ಕೆ ಮಲತಾಯಿ ಮಗುವನ್ನು ಮನಬಂದಂತೆ ಹೊಡೆದು, ಥಳಿಸಿದ್ದಲ್ಲದೇ ಬಿಸಿ ಸೌಟಿನಿಂದ ಬರೆ ಕೊಟ್ಟಿದ್ದಾಳೆ. ಅಷ್ಟೇ ಅಲ್ಲ, ಸೌಟು ಕಾಯಿಸಿ ಮಗುವಿನ ಖಾಸಗಿ ಭಾಗಗಳನ್ನು ಸುಟ್ಟು ಕ್ರೌರ್ಯ ಮೆರೆದಿದ್ದಾಳೆ.
ಇಷ್ಟೆಲ್ಲ ನೋವು ಹಿಂಸೆ ಬಳಿಕವೂ ಮಗುವನ್ನು ಅಂಗನವಾಡಿಗೆ ಕಳುಹಿಸಿದ್ದಾಳೆ. ಅಂಗನವಾಅಡಿಗೆ ಹೋದ ಮಗು ಕುಳಿತುಕೊಳ್ಳಲಾಗದೇ ಕಷ್ಟಪಡುತ್ತಿತ್ತು. ಇದನ್ನು ಗಮನಿಸಿದ ಶಿಕ್ಷಕಿ ಮಗುವನ್ನು ಏನಾಯಿತು? ಎಂದು ವಿಚಾರಿಸಿದ್ದಾಳೆ. ಆಗ ಮಗು ವಿಷಯ ತಿಳಿಸಿದ್ದಾಳೆ. ಶಾಕ್ ಆದ ಶಿಕ್ಷಕಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಗುವಿಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗಿದೆ.
ಸದ್ಯ ಪೊಲೀಸರು ಮಗುವಿನ ಮಲತಾಯಿಯನ್ನು ಬಂಧಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
https://www.newsics.com/2026/01/10/siddaramaiah-throws-away-the-sweet-given-to-him-by-dkshi/