Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಈ ವಾರ ಸುದೀಪ್ ಮಾರ್ಕ್ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿರುವ ಕಾರಣ ಬಿಗ್ ಬಾಸ್ ಕನ್ನಡ 12ರಲ್ಲಿ ಶನಿವಾರವೇ ಅನಿರೀಕ್ಷಿತ ಎಲಿಮಿನೇಷನ್ ನಡೆದಿದೆ. ಮನೆಯವರಿಗೆ ಶಾಕ್ ನೀಡಿ ಒಬ್ಬರನ್ನು ಹೊರಹಾಕಲಾಗಿದೆ.
ಈ ವಾರ ಡಬಲ್ ಎಲಿಮಿನೇಷನ್ ನಡೆಯಲಿದೆ ಎಂದು ಬಿಗ್ ಬಾಸ್ ಮೊದಲೇ ಘೋಷಣೆ ಮಾಡಿದ್ದರು. ಎಲ್ಲರೂ ಭಾನುವಾರ ಈ ಎಲಿಮಿನೇಷನ್ ನಡೆಯುತ್ತದೆ ಎಂದುಕೊಂಡಿದ್ದರು. ಆದರೆ ಶನಿವಾರವೇ ಒಂದು ಎಲಿಮಿನೇಷನ್ ನಡೆದಿದೆ. ಸೂರಜ್ ಅವರು ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ.
ಬಿಗ್ ಬಾಸ್ನಲ್ಲಿ ಈ ವಾರ ಕಾವ್ಯಾ ಹೊರತುಪಡಿಸಿ ಉಳಿದ 10 ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಈ ಪೈಕಿ ಹಂತ ಹಂತವಾಗಿ ಒಬ್ಬೊಬ್ಬರನ್ನು ಸೇವ್ ಮಾಡುತ್ತಾ ಬರಲಾಯಿತು. ಮೊದಲು ಭಾಗ್ಯಲಕ್ಷ್ಮೀ ತಂಡದವರು ಬಂದು ಗಿಲ್ಲಿಯನ್ನು ಸೇವ್ ಮಾಡಿದರು. ಆ ಬಳಿಕ ಪ್ರೇಮ್ ಅವರು ಬಂದು, ಅಶ್ವಿನಿ ಅವರನ್ನು ಸೇವ್ ಮಾಡಿದರು. ನಂತರ ಚಟುವಟಿಕೆ ನೀಡಲಾಗಿತ್ತು. ಇದರಲ್ಲಿ ರಘು ಸೇವ್ ಆದರು.