Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Hatred for lover ಪ್ರಿಯಕರನ ಮೇಲಿನ ದ್ವೇಷ: ಜ್ಯೋತಿಷಿ‌ ಮಾತು ಕೇಳಿ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ್ದ ಟೆಕ್ಕಿ!
ಕರ್ನಾಟಕದೇಶಪ್ರಮುಖ

Hatred for lover ಪ್ರಿಯಕರನ ಮೇಲಿನ ದ್ವೇಷ: ಜ್ಯೋತಿಷಿ‌ ಮಾತು ಕೇಳಿ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ್ದ ಟೆಕ್ಕಿ!

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಬೆಂಗಳೂರೂ ಸೇರಿ ದೇಶದ ಹಲವು ಖಾಸಗಿ ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿದ್ದ ಪ್ರಕರಣ ಸಂಬಂಧ ಆರೋಪಿ ರೆನೆ ಜೋಶಿಲ್ದಾನ ವಿಚಾರಣೆ ನಡೆಸಿದ ಉತ್ತರ ಸೆನ್ ವಿಭಾಗದ ಪೊಲೀಸರು ವಾಪಸ್ ಗುಜರಾತ್‌ಗೆ ಬಿಟ್ಟು ಬಂದಿದ್ದಾರೆ.

ಈ ನಡುವೆ ಬೆಂಗಳೂರು ಉತ್ತರ ವಿಭಾಗ ಡಿಸಿಪಿ ನೇಮಗೌಡ ಅವರ ನೇತೃತ್ವದಲ್ಲಿ ನಡೆದ ವಿಚಾರಣೆಯಲ್ಲಿ ಆರೋಪಿ ಅಸ್ಪಷ್ಟ ಹಾಗೂ ವಿಚಿತ್ರ ಹೇಳಿಕೆಗಳನ್ನು ನೀಡಿದ್ದಾಳೆ.

ಜ್ಯೋತಿಷಿ‌ ಮಾತು ಕೇಳಿ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ್ದಾಗಿ ರೆನೆ ಜೋಶಿಲ್ದಾ ಹೇಳಿದ್ದಾಳೆ.

ಹೀಗಾಗಿ ರೆನೆ ಜೋಶಿಲ್ದಾ ಪ್ರಿಯಕರ ಪ್ರಭಾಕರ್‌ಗೂ ನೋಟಿಸ್ ಕೊಟ್ಟು ವಿಚಾರಣೆ ನಡೆಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಮತ್ತೊಂದೆಡೆ ಚೆನ್ನೈಗೆ ತೆರಳಿರುವ ಪೊಲೀಸರು, ಅಲ್ಲಿನ ಸಿಸಿಬಿ ತಂಡದಿಂದ ರೆನಿ ಕೇಸ್‌ಗೆ ಸಂಬಂಧಿಸಿದ ಸಂಪೂರ್ಣ ದಾಖಲೆಗಳನ್ನು ನೀಡಲು ಮನವಿ ಮಾಡಿದ್ದಾರೆ. ಮೊದಲು ಚೆನೈ ಸಿಸಿಬಿ ಅಧಿಕಾರಿಗಳು ಆರೋಪಿಯ ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡಿದ್ದರು. ಹೀಗಾಗಿ ತನಿಖೆಗೆ ಅಗತ್ಯ ದಾಖಲೆ ನೀಡಲು ಅವರ ಬಳಿ ಮನವಿ ಮಾಡಿದ್ದಾರೆ.

ಮೂಲತಃ ಗುಜರಾತ್‌ನವಳಾಗಿರುವ ರೆನೆ ಜೋಶಿಲ್ದಾ ಚೆನ್ನೈ ಏರ್ಪೋರ್ಟ್ ರಸ್ತೆಯ ಲುಮಿನಾ ಬ್ಲಾಕ್‌ನಲ್ಲಿ ವಾಸವಾಗಿದ್ದಳು. ಅಲ್ಲಿ ಬಿಇ ಎಲೆಕ್ಟ್ರಿಕಲ್ ವಿದ್ಯಾಭ್ಯಾಸ ಮುಗಿಸಿದ್ದಳು. ಹೀಗೆ 2023ರಲ್ಲಿ ಬೆಂಗಳೂರಿಗೆ ಬಂದಿದ್ದಳು. ಯಮಲೂರಿನ ಖಾಸಗಿ ಕಂಪನಿಯಲ್ಲಿ ಸೀನಿಯರ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಳು.

ರೋಬೋಟಿಕ್ ಇಂಜಿನಿಯರಿಂಗ್‌ ಹಿನ್ನೆಲೆ ಹೊಂದಿದ ರೆನಿಗೆ ತಾಂತ್ರಿಕ ಜ್ಞಾನವೂ ಸಾಕಷ್ಟಿತ್ತು. 2023 ರಿಂದ 2024 ರವರೆಗೆ ಕೆಲಸ ನಿರ್ವಹಿಸಿದ ಅವಧಿಯಲ್ಲಿ ಸ್ನೇಹಿತೆಯ ಮೂಲಕ ಪ್ರಭಾಕರ್ ಪರಿಚಯವಾಗಿದ್ದು ನಂತರ ಪ್ರೇಮಕ್ಕೆ ತಿರುಗಿತ್ತು.

ಆದರೆ ಪ್ರಭಾಕರ್ ಮತ್ತೊಬ್ಬಳನ್ನು ಮದುವೆಯಾದ ನಂತರ ರೆನಿ ತನ್ನ ಪ್ರೇಮ ವೈಫಲ್ಯಕ್ಕೆ ಪ್ರತೀಕಾರವಾಗಿ ಇಮೇಲ್ ಬಾಂಬ್ ಬೆದರಿಕೆ ಕಳುಹಿಸಿದ್ದಾಳೆ.

ಇದಕ್ಕೂ ಮುನ್ನ ಆಕೆ ಜ್ಯೋತಿಷಿಯೊಬ್ಬರನ್ನು ಭೇಟಿಯಾಗಿ ಪ್ರೇಮ ವೈಫಲ್ಯದ ಬಗ್ಗೆ ಸಮಾಲೋಚನೆ ನಡೆಸಿದ್ದಳು ಎನ್ನಲಾಗಿದೆ. ಆಗ, ಪ್ರಭಾಕರ್ ಹೆಸರಿಗೆ ಮಸಿ ಬಳಿಯುವಂತೆ ಏನಾದರೂ ಮಾಡು ಎಂದು ಜ್ಯೋತಿಷಿ ಸಲಹೆ ನೀಡಿದ್ದರು. ನಂತರ ಯುವತಿ ಬಾಂಬ್ ಬೆದರಿಕೆ ಹಾಕುವಂಥ ಕೃತ್ಯಕ್ಕೆ ಕೈಹಾಕಿದ್ದಳು ಎನ್ನಲಾಗಿದೆ.

ವರ್ಷಕ್ಕೆ 34 ಲಕ್ಷ ರೂ. ಪ್ಯಾಕೇಜ್ ಸ್ಯಾಲರಿ ಇದ್ದರೂ ಅದನ್ನು ಬಿಟ್ಟು ದ್ವೇಷಕ್ಕೆ ಡಾರ್ಕ್ ವೆಬ್ ಮೂಲಕ ಇಡೀ ದೇಶಾದ್ಯಂತ ಖಾಸಗಿ ಶಾಲೆಗಳಿಗೆ ಇಮೇಲ್ ಬೆದರಿಕೆ ಹಾಕಿದ್ದಾಳೆ. ಹೀಗಾಗಿ ದೇಶಾದ್ಯಂತ ಬರೋಬ್ಬರಿ 30 ಕ್ಕೂ ಹೆಚ್ಚು ಪ್ರಕರಣಗಳು ಆರೋಪಿತೆ ರೆನಿ ಮೇಲಿದ್ದು, ದೆಹಲಿ ಪೊಲೀಸರು ವಶಕ್ಕೆ ಪಡೆಯಲಿದ್ದಾರೆಂಬ ಮಾಹಿತಿ ಲಭ್ಯವಾಗಿದೆ‌.

ತನ್ನ ಗುರುತು ಪತ್ತೆಯಾಗದಂತೆ ಪ್ರಭಾಕರ್‌ನ ಇ-ಮೇಲ್ ಐಡಿಯನ್ನು ಬಳಸಿ ಬೆದರಿಕೆ ಸಂದೇಶ ಕಳುಹಿಸಿದ್ದಾಳೆ ಎಂಬ ವಿಚಾರವೂ ವಿಚಾರಣೆಯಲ್ಲಿ ಹೊರಬಂದಿದೆ. VPN ಸೇವೆ, ವರ್ಚುವಲ್ ನಂಬರ್ ಅಪ್ಲಿಕೇಶನ್ ಹಾಗೂ ಇಂಟರ್ನೆಟ್ ಸರ್ಚ್ ಮೂಲಕ ಪ್ಲಾನ್ ರೂಪಿಸಿದ್ದಾಗಿ ರೆನಿ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.

ದೂರಾದ ಪ್ರಿಯಕರನ ಹೆಸರಿಗೆ ಮಸಿ ಬಳಿಯಲು ಯತ್ನಿಸಿ, ಪ್ರಿಯಕರನ ಮೇಲೆ ಮಸಲತ್ತು ಮಾಡಲೆತ್ನಿಸಿ ಆಕೆ ತಾನೇ ತೋಡಿದ ಹಳ್ಳಕ್ಕೆ ತಾನೇ ಬಿದ್ದು ಇದೀಗ ಮಾಡಿದ್ದುಣ್ಣೋ ಮಹಾರಾಯ ಎಂಬಂತೆ ಒಂದು ಪೊಲೀಸ್ ಠಾಣೆಯಿಂದ ಮತ್ತೊಂದು ಠಾಣೆಗೆ ಅಲೆಯುತ್ತಾ ಜೈಲಿನಲ್ಲಿ ಬಂದಿಯಾಗಿ ವಿಚಾರಣೆ ಎದುರಿಸುವಂತಾಗಿದೆ.

ನಿನ್ನ ತೂಕ ಎಷ್ಟು?, ಯೂಟ್ಯೂಬರ್‌ ಪ್ರಶ್ನೆಗೆ ರೊಚ್ಚಿಗೆದ್ದ ನಟಿ ಗೌರಿ ಕಿಶನ್‍!; ಗೌರಿ ಬೆಂಬಲಕ್ಕೆ ನಿಂತ ಚಿತ್ರೋದ್ಯಮ

US VISA ಶುಗರ್, ಹಾರ್ಟ್ ಸಮಸ್ಯೆ, ಬೊಜ್ಜಿದ್ದರೆ ಅಮೆರಿಕ ವೀಸಾ ಸಿಗದು!

TAGGED:Hatred for lover: Techie threatens schools with bombs after hearing astrologer's words
Share This Article
Facebook Twitter Copy Link Print
Previous Article ನಿನ್ನ ತೂಕ ಎಷ್ಟು?, ಯೂಟ್ಯೂಬರ್‌ ಪ್ರಶ್ನೆಗೆ ರೊಚ್ಚಿಗೆದ್ದ ನಟಿ ಗೌರಿ ಕಿಶನ್‍!; ಗೌರಿ ಬೆಂಬಲಕ್ಕೆ ನಿಂತ ಚಿತ್ರೋದ್ಯಮ
Next Article ನಮ್ಮ ಮೆಟ್ರೋ ಇನ್ನು ನಮ್ಮದಲ್ಲ? ಕೇಂದ್ರದ ಆಸ್ತಿ, ರಾಜ್ಯದ ಕೈತಪ್ಪಿದ ಸಂಪೂರ್ಣ ನಿಯಂತ್ರಣ!: ಹೈಕೋರ್ಟ್ ಮಹತ್ವದ ತೀರ್ಪು

Popular Posts

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

You Might Also Like

ಕರ್ನಾಟಕಪ್ರಮುಖ

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read
ಕರ್ನಾಟಕಪ್ರಮುಖ

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read
ಕರ್ನಾಟಕಪ್ರಮುಖ

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read
ಕರ್ನಾಟಕಪ್ರಮುಖ

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?