newsics.com
ಬಿಗ್ ಬಾಸ್ʼನಿಂದ ಹೆಚ್ಚು ಜನಪ್ರಿಯರಾಗಿರುವ ಆ್ಯಂಕರ್ ಚೈತ್ರಾ ವಾಸುದೇವನ್ ಅವರು ತಮ್ಮ ದಾಂಪತ್ಯಕ್ಕೆ ವಿಚ್ಛೇದನ ನೀಡಿರುವುದು ಗೊತ್ತೇ ಈದೆ. ಚೈತ್ರಾ ಅನೌನ್ಸ್ ಮಾಡಿದ ಬಳಿಕ ಈ ಬಗ್ಗೆ ಸಾಕಷ್ಟು ಚರ್ಚೆಗಳು ಸೋಷಿಯಲ್ ಮೀಡಿಯಾದಲ್ಲಿ ನಡೆಯಿತು. ಈ ಬಗ್ಗೆ ಚೈತ್ರಾ ಅವರೇ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಚೈತ್ರಾ ಡಿವೋರ್ಸ್ ಅನೌನ್ಸ್ ಮಾಡುವುದಕ್ಕೂ ಮುಂಚೆಯೇ ನಾವು ಬೇರೆ ಬೇರೆಯಾಗಿದ್ದೆವು. ನಾವು ಮಾಡಿರುವುದನ್ನು ಆ ದೇವರು ನೋಡ್ತಿರುತ್ತಾನೆ. ಕರ್ಮ ಗೊತ್ತಿರುತ್ತದೆ. ಯಾರ್ಯಾರು ಏನೇನು ಕರ್ಮಗಳನ್ನು ಮಾಡಿರುತ್ತಾರೋ, ಅದೆಲ್ಲವೂ ಒಂದಲ್ಲ ಒಂದು ದಿನ ಬಂದೇ ಬರುತ್ತದೆ. ನೀನು ಒಳ್ಳೆಯವಳೇ ಆಗಿದ್ದರೆ, ನಿನಗೆ ಒಳ್ಳೆಯದೇ ಆಗುತ್ತದೆ. ಯಾರ ಬಗ್ಗೆ ಎಲ್ಲಿಯೂ ಕಂಪ್ಲೇಂಟ್ ಮಾಡಬೇಡ ಎಂದೇ ಅಪ್ಪ ಅಮ್ಮ ಹೇಳಿದ್ದರು. ಅದರಂತೆ, ಸಾರ್ವಜನಿಕವಾಗಿ ಗುರುತಿಸಿಕೊಂಡಿದ್ದರಿಂದ ಡಿವೋರ್ಸ್ ಆಗಿದೆ. ಡಿವೋರ್ಸ್ ಬಗ್ಗೆ, ನನ್ನ ವೈಯಕ್ತಿಕ ವಿಚಾರಗಳ ಬಗ್ಗೆ ಎಲ್ಲಿಯೂ ನಾನು ಓಪನ್ ಆಗಿ ಮಾತನಾಡಿಲ್ಲ. ನಮ್ಮ ಜೀವನದಲ್ಲಿ ಯಾರೇ ಬಂದು ಹೋಗ್ತಾರೆ ಅಂದರೂ ಅಲ್ಲೊಂದು ಕಾರಣ ಇದ್ದೇ ಇರುತ್ತದೆ. ಕೆಲವರು ನಿಮಗೆ ಒಳ್ಳೆಯ ಮೆಮೊರಿಯಾಗಿ ಉಳಿತಾರೆ. ಕೆಲವರು ಖುಷಿಕೊಡ್ತಾರೆ, ಇನ್ನು ಕೆಲವರು ಹೀಗೆ ಮಾಡಬಾರ್ದು ಅಂತ ಕೇಳಿಕೊಡ್ತಾರೆ. ಅದೇ ರೀತಿ ನಮ್ಮ ಬ್ಯಾಚ್‌ನಲ್ಲಿಯೇ ನನ್ನದೇ ಬಹುಬೇಗ ಮದುವೆ ಆಗಿದ್ದು. ಇವಾಗ ಮದುವೆಯಾಗಿ ಎಲ್ಲರಿಗೂ ಮಕ್ಕಳಿದ್ದಾರೆ. ಆದರೆ, ನನ್ನ ಜೀವನದಲ್ಲಿ ಹಾಗಾಗಲಿಲ್ಲ. ಮುಂದಿನ ದಿನಗಳಲ್ಲಿ ಟ್ರೂ ಲವ್ ಹುಡುಕಾಟದಲ್ಲಿದ್ದೇನೆ ಎಂದಿದ್ದಾರೆ.
ಚೈತ್ರಾ ವಾಸುದೇವನ್ ನಿರೂಪಕಿಯಾಗಿ, ಇವೆಂಟ್ ಮ್ಯಾನೇಜರ್ ಆಗಿ ಗುರುತಿಸಿಕೊಂಡು, ಬಿಗ್‌ಬಾಸ್ ಸೀಸನ್ 7ರಲ್ಲಿಯೂ ಸ್ಪರ್ಧಿಯಾಗಿದ್ದವರು . ಮೂಲತಃ ಕುಂದಾಪುರದ ಚೈತ್ರಾ, 2017ರಲ್ಲಿಯೇ ಸತ್ಯ ನಾಯ್ಡು ಎಂಬುವವರ ಜತೆಗೆ ಬಾಳ ಬಂಧನಕ್ಕೆ ಅಡಿಯಿಟ್ಟಿದ್ದರು. ಕಷ್ಟಪಟ್ಟುಕೊಂಡೇ ಐದೂವರೆ ವರ್ಷ ಸಂಸಾರ ನಡೆಸಿದರೂ, ಇಬ್ಬರ ನಡುವೆ ಹೊಂದಾಣಿಕೆ ಮೂಡಲಿಲ್ಲ. ಆದರೆ, 2023ರಲ್ಲಿ ಆ ಮದುವೆ ಡಿವೋರ್ಸ್ ಮೂಲಕ ಇಬ್ಭಾಗವಾಯ್ತು. ಸದ್ಯ ಅಪ್ಪನ ಅಮ್ಮನ ಜತೆಗೆ ಚೈತ್ರಾ ವಾಸಿಸುತ್ತಿದ್ದಾರೆ.