newsics.com
ಬೆಂಗಳೂರು: ಸಿಯಾಚಿನ್ ಯುದ್ಧಭೂಮಿಗೆ ಮೈಸೂರಿನ ವಲ್ಲಭಭಾಯಿ ನಗರದ ನಿವಾಸಿ ಸುಪ್ರಿತಾ ಆಯ್ಕೆಯಾಗಿದ್ದಾರೆ.
ಸುಪ್ರಿತಾ ಅವರು ಭಾರತೀಯ ವಾಯುಸೇನೆಯ ಕ್ಯಾಪ್ಟನ್ ಆಗಿದ್ದು, ಇದೀಗ ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್‌ನಲ್ಲಿ ಕರ್ತವ್ಯ ನಿರ್ವಹಿಸಲು ಆಯ್ಕೆಯಾಗಿದ್ದಾರೆ.
ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ತಲಕಾಡು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಎಸ್ಐ ತಿರುಮಲ್ಲೇಶ್ ಹಾಗೂ ನಿರ್ಮಲಾ ದಂಪತಿ ಪುತ್ರಿಯಾದ ಸುಪ್ರಿತಾ, ಸಿಯಾಚಿನ್‌ನಲ್ಲಿ ಕರ್ತವ್ಯ ನಿರ್ವಹಿಸಲು ಆಯ್ಕೆಯಾಗಿರುವ ಮೊದಲ ಮಹಿಳಾ ಯೋಧೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮೈಸೂರಿನ ಜೆಎಸ್ಎಸ್ ಕಾಲೇಜಿನಲ್ಲಿ ಎಲ್ಎಲ್ ಬಿ ಪದವಿ ಹಾಗೂ ಎನ್ಸಿಸಿ ಸರ್ಟಿಫಿಕೇಟ್ ಪಡೆದಿರುವ ಸುಪ್ರಿತಾ, 2021ರಲ್ಲಿ ಸೇನಾ ಪಡೆಯ ಲೆಫ್ಟಿನೆಂಟ್ ಆಗಿ ತರಬೇತಿ ಪಡೆದು ಭಾರತೀಯ ವಾಯುಪಡೆಗೆ ನಿಯೋಜನೆಯಾಗಿದ್ದರು.
2024ರಲ್ಲಿ ಅನಂತನಾಗ್, ಜಬ್ಬಾಲ್ಬರ್, ಲೇಹ್ನಲ್ಲಿ ಕರ್ತವ್ಯ ನಿರ್ವಹಣೆಯ ಬಳಿಕ ಕಠಿಣ ತರಬೇತಿಯಲ್ಲಿ ತೇರ್ಗಡೆಯಾಗಿ ಸಿಯಾಚಿನ್ ಯುದ್ಧ ಭೂಮಿಯ ಕಾರ್ಯಾಚರಣೆಗೆ ಆಯ್ಕೆಯಾಗಿದ್ದಾರೆ.
ಸಿಯಾಚಿನ್ ಪ್ರದೇಶದ ಒಡೆತನದ ಕುರಿತಂತೆ ಭಾರತ ಹಾಗು ಪಾಕಿಸ್ತಾನದ ನಡುವೆ ವಿವಾದವಿದೆ. ಎರಡೂ ರಾಷ್ಟ್ರಗಳು ಈ ಪ್ರದೇಶ ತಮಗೆ ಸೇರಿದ್ದೆಂದು ವಾದಿಸುತ್ತವೆ.
1984 ರಲ್ಲಿ ಭಾರತ “ಆಪರೇಷನ್ ಮೇಘದೂತ್” ಎಂಬ ಸೇನಾ ಕಾರ್ಯಾಚರಣೆ ನಡೆಸಿ ಸಿಯಾಚಿನ್ ನೀರ್ಗಲ್ಲು ಹಾಗು ಅದರ ಉಪನದಿಗಳ ಮೇಲೆ ಹತೋಟಿ ಪಡೆಯಿತು.
ಸಿಯಾಚಿನ್ ಪ್ರದೇಶದಲ್ಲಿ ಯುದ್ಧದಲ್ಲಿ ಮಡಿದವರಿಗಿಂತ ಅಲ್ಲಿನ ಕಠಿಣ ಹವಾಮಾನದಿಂದಾಗಿ ಹೆಚ್ಚು ಜನ ಮಡಿದಿದ್ದಾರೆ.
ಇಂತಹ ಕಠಿಣ ಪ್ರದೇಶದಲ್ಲಿ ಕಾರ್ಯನಿರ್ವಹಿಸಲು ಮೈಸೂರಿನ ಯುವತಿ ಆಯ್ಕೆಯಾಗಿದ್ದಾರೆ.
ಮುಂದಿನ 5 ದಿನ ರಾಜ್ಯದಲ್ಲಿ ಮಳೆ ಜತೆಗೆ ಶೀತಗಾಳಿ ಬೀಸುವ ಸಾಧ್ಯತೆ; ಹಲವೆಡೆ ರೆಡ್ ಅಲರ್ಟ್
ಪುನರ್ವಸತಿ ಕೇಂದ್ರದಿಂದಲೇ ಬಾಲಕಿ ಅಪಹರಣ, ಬಾಯ್ ಫ್ರೆಂಡ್ ಜತೆ ಎಸ್ಕೇಪ್ ಶಂಕೆ, ವಿಡಿಯೊ ನೋಡಿ
ರಾಯಭಾರ ಕಚೇರಿ ಮೇಲೆ ದಾಳಿ… ಪಾಕಿಸ್ತಾನದ ಧ್ವಜ ಸುಡಲು ಮುಂದಾದ ಅಫ್ಘನ್ಸ್!
ಮೀಸಲಾತಿ ಬಳಿಕ ಕೆಲಸದ ಅವಧಿ ವಿಸ್ತರಣೆ ವಿವಾದ… ಸರ್ಕಾರದ ವಿರುದ್ಧ ಐಟಿ ಉದ್ಯೋಗಿಗಳು ಅಸಮಾಧಾನ!