newsics.com
ಲಂಡನ್: ಭಾರತದ ಮಾಜಿ ಎಡಗೈ ಸ್ಪಿನ್ನರ್ ದಿಲೀಪ್ ದೋಷಿ (77) ಲಂಡನ್‌ನಲ್ಲಿ ಸೋಮವಾರ ಹೃದಯಾಘಾತದಿಂದ ನಿಧನರಾದರು.
1979 ರಿಂದ 1983 ರವರೆಗೆ 33 ಟೆಸ್ಟ್ ಮತ್ತು 15 ಏಕದಿನ ಪಂದ್ಯಗಳನ್ನು ಆಡಿದ್ದರು. ದೋಶಿ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್, ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ದೋಷಿ ಪ್ರತಿನಿಧಿಸಿದ್ದರು.
ಕ್ರಿಕೆಟ್ ಜಗತ್ತಿನಲ್ಲಿ ಗೌರವಾನ್ವಿತ, ವಿಶಿಷ್ಟ ಮತ್ತು ಪ್ರಮುಖ ವ್ಯಕ್ತಿಯಾಗಿದ್ದ ದಿಲೀಪ್ ದೋಷಿ ಅವರ ನಿಧನದಿಂದ ತೀವ್ರ ನೋವು ಮತ್ತು ದುಃಖವಾಗಿದೆ ಎಂದು ಹೇಳಿದೆ.
ಅವರು ಕ್ರೀಡಾ ಮನೋಭಾವ, ಬದ್ಧತೆ ಮತ್ತು ಶ್ರೇಷ್ಠತೆಯ ಶ್ರೀಮಂತ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ. ದಂತಕಥೆ ಎಡಗೈ ಸ್ಪಿನ್ನರ್ ಭಾರತೀಯ ಕ್ರಿಕೆಟ್ನ ಒಬ್ಬ ಪ್ರಮುಖ ವ್ಯಕ್ತಿಯಾಗಿದ್ದರು. ಅಪ್ರತಿಮ ಕೌಶಲ್ಯ ಮತ್ತು ಸಮರ್ಪಣೆಗೆ ಅವರು ಹೆಸರುವಾಸಿಯಾಗಿದ್ದರು ಎಂದು ಬಿಸಿಸಿಐ ಸಂತಾಪ ಸೂಚಿಸಿದೆ.
https://x.com/BCCI/status/1937210755784540638?t=D4U95cKUlwNFOdXDg0vh9A&s=19
Israel-Iran War ಇಸ್ರೇಲ್ ಜೊತೆ ಪ್ರಸ್ತುತ ಯಾವುದೇ ಕದನ ವಿರಾಮ ಒಪ್ಪಂದವಿಲ್ಲ – ಅಬ್ಬಾಸ್ ಅರಘ್ಚಿ ಸ್ಪಷ್ಟನೆ
Israel – Iran War ಇಸ್ರೇಲ್ ಮತ್ತು ಇರಾನ್ ಯುದ್ಧ ನಿಲ್ಲಿಸಲು ಒಪ್ಪಿಕೊಂಡಿವೆ – ಡೋನಾಲ್ಡ್ ಟ್ರಂಪ್