Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Singer Sonu Nigam ಗಾಯಕ ಸೋನು ನಿಗಮ್ ಅಸ್ವಸ್ಥ! ಅವರಿಗೇನಾಯ್ತು?
ಕರ್ನಾಟಕದೇಶಪ್ರಮುಖಮನರಂಜನೆ

Singer Sonu Nigam ಗಾಯಕ ಸೋನು ನಿಗಮ್ ಅಸ್ವಸ್ಥ! ಅವರಿಗೇನಾಯ್ತು?

Share
2 Min Read
SHARE

newsics.com / ನ್ಯೂಸಿಕ್ಸ್

ಭಾರತೀಯ ಚಿತ್ರರಂಗದ ಅದ್ಬುತ ಗಾಯಕರಲ್ಲಿ ಒಬ್ಬರಾದ ಸೋನು ನಿಗಮ್‌ ಅವರು ಸದ್ಯ ತೀವ್ರವಾದ ಆರೋಗ್ಯ ಸಮಸ್ಯೆಯನ್ನ ಎದುರಿಸುತ್ತಿದ್ದಾರೆ.

ಇತ್ತೀಚೆಗೆ ತಮ್ಮ ಅನಾರೋಗ್ಯದ ಕುರಿತು ಸ್ವತಃ ಸೋನು ನಿಗಮ್‌ ಅವರೇ ವಿಡಿಯೋವೊಂದರ ಮೂಲಕ ಆತಂಕಕಾರಿ ಮಾಹಿತಿಯನ್ನ ಹಂಚಿಕೊಂಡಿದ್ದಾರೆ.

ತಮಗೆ ತೀವ್ರವಾದ ನರಗಳ ಸಮಸ್ಯೆ ಎದುರಾಗಿದ್ದು, ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ, ಈ ಕಠಿಣ ಪರಿಸ್ಥಿತಿಯಲ್ಲೂ ತಾವು ಒಪ್ಪಿಕೊಂಡಿರುವ ಲೈವ್ ಶೋ ಅನ್ನ ರದ್ದುಗೊಳಿಸದೆ ನೋವನ್ನು ಸಹಿಸಿಕೊಂಡೇ ವೇದಿಕೆ ಏರಲು ಸಜ್ಜಾಗಿರುವುದು ಅವರ ವೃತ್ತಿಪರತೆಗೆ ಸಾಕ್ಷಿಯಾಗಿದೆ.

ಸೋನು ನಿಗಮ್‌ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಅವರ ದೇಹದ ನರಗಳು ಬ್ಲಾಕ್‌ ಆಗಿವೆ. ಕಳೆದ ಒಂದು ವಾರದಿಂದ ಅವರು ನಿರಂತರವಾಗಿ ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್‌ಗಳಂತಹ ವೈದ್ಯಕೀಯ ತಪಾಸಣೆಗಳಿಗೆ ಒಳಗಾಗುತ್ತಿದ್ದಾರೆ. ನೋವನ್ನ ನಿವಾರಿಸಲು ಮತ್ತು ನರಗಳ ಸಮಸ್ಯೆಯನ್ನ ಸರಿಪಡಿಸಲು ಹೈ-ಡೋಸ್‌ ಔಷಧಿಗಳನ್ನ ನೀಡಲಾಗುತ್ತಿದೆ. ಇದರೊಂದಿಗೆ ಅವರು ಅತ್ಯಂತ ನೋವಿನಿಂದ ಕೂಡಿರುವ ಫಿಸಿಯೋಥೆರಪಿ ಚಿಕಿತ್ಸೆಯನ್ನೂ ಪಡೆಯುತ್ತಿದ್ದಾರೆ. ಸದ್ಯಕ್ಕೆ ನೋವು ನಿವಾರಕ ಮಾತ್ರೆಗಳ ಸಹಾಯದಿಂದಲೇ ಅವರು ದಿನದೂಡುತ್ತಿದ್ದಾರೆ.

ನರಗಳನ್ನ ಸಡಿಲಗೊಳಿಸಲು ವೈದ್ಯರು ನೀಡಿರುವ ಪ್ರಬಲ ಔಷಧಿಗಳ ಪ್ರಭಾವ ಸೋನು ನಿಗಮ್‌ ಅವರ ಗಂಟಲಿನ ಮೇಲೂ ಬೀರಿದೆ. ಮಾತ್ರೆಗಳ ಕಾರಣದಿಂದಾಗಿ ತಮ್ಮ ಗಂಟಲು ಸ್ವಲ್ಪ ಭಾರವಾದಂತೆ ಅನಿಸುತ್ತಿದೆ ಹಾಗೂ ಧ್ವನಿಯಲ್ಲಿ ಏರುಪೇರಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಸಾಮಾನ್ಯವಾಗಿ ಒಬ್ಬ ಗಾಯಕನಿಗೆ ಲೈವ್‌ ಕಾರ್ಯಕ್ರಮ ಇರುವಾಗ ಧ್ವನಿಯಲ್ಲಿ ಸಣ್ಣ ವ್ಯತ್ಯಾಸವಾದರೂ ಆತಂಕ ಉಂಟಾಗುತ್ತದೆ. ಆದರೆ, ಸೋನು ನಿಗಮ್‌ ಅವರು ಈ ಯಾವುದೇ ಸವಾಲುಗಳಿಗೆ ಧೃತಿಗೆಡದೆ ಮುನ್ನಡೆಯುತ್ತಿದ್ದಾರೆ.

ತುಂಬಾ ದಿನಗಳ ನಂತರ ಮುಂಬೈನಲ್ಲಿ ಬೃಹತ್‌ ಲೈವ್‌ ಕಾನ್ಸರ್ಟ್‌ ಆಯೋಜನೆಯಾಗಿದೆ. ಮುಂಚಿತವಾಗಿಯೇ ಒಪ್ಪಿಕೊಂಡಿರುವ ಈ ಕಾರ್ಯಕ್ರಮವನ್ನ ಕೇವಲ ತಮ್ಮ ಅನಾರೋಗ್ಯದ ಕಾರಣಕ್ಕಾಗಿ ರದ್ದುಗೊಳಿಸಲು ಸೋನು ನಿಗಮ್‌ ಇಷ್ಟಪಟ್ಟಿಲ್ಲ. ಎಷ್ಟೇ ನೋವಿದ್ದರೂ, ಧ್ವನಿಯಲ್ಲಿ ಏರುಪೇರಾಗಿದ್ದರೂ ತಮಗಾಗಿ ಕಾಯುತ್ತಿರುವ ಅಭಿಮಾನಿಗಳನ್ನ ನಿರಾಸೆಗೊಳಿಸಬಾರ್ದು ಎನ್ನುವ ಕಾರಣಕ್ಕೆ ಅವರು ಸ್ಟೇಜ್‌ ಹತ್ತಲು ನಿರ್ಧರಿಸಿದ್ದಾರೆ.

ಸೋನು ನಿಗಮ್‌ ಅವರ ಈ ವಿಡಿಯೋ ಸೋಶಿಯಲ್‌ ಮೀಡಿಯಾಗಳಲ್ಲಿ ಭಾರೀ ವೈರಲ್‌ ಆಗುತ್ತಿದ್ದು, ಅವರ ಆರೋಗ್ಯದ ಸ್ಥಿತಿ ಕಂಡು ಅಭಿಮಾನಿಗಳಲ್ಲಿ ಆತಂಕ ಮೂಡಿದೆ. ಆದರೆ, ಅಷ್ಟೇ ಪ್ರಮಾಣದಲ್ಲಿ ಅವರ ಧೈರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗ್ತಿದೆ.

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

ಉದ್ಯೋಗಿಗಳ ಉತ್ತಮ ನಿದ್ದೆಗೆ ಹೈಟೆಕ್ ಹಾಸಿಗೆ ಗಿಫ್ಟ್ ನೀಡಿದ ಸಿಇಒ!

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

TAGGED:Singer Sonu Nigam is unwell! What happened to him?
Share This Article
Facebook Twitter Copy Link Print
Previous Article Body builder dies ಬಾಡಿ ಬಿಲ್ಡರ್ ಸುಶೀಲ್ ಕುಮಾರ್ ಹಠಾತ್ ಸಾವು! ಏನಾಗಿತ್ತು?

Popular Posts

Singer Sonu Nigam ಗಾಯಕ ಸೋನು ನಿಗಮ್ ಅಸ್ವಸ್ಥ! ಅವರಿಗೇನಾಯ್ತು?

2 Min Read

Body builder dies ಬಾಡಿ ಬಿಲ್ಡರ್ ಸುಶೀಲ್ ಕುಮಾರ್ ಹಠಾತ್ ಸಾವು! ಏನಾಗಿತ್ತು?

1 Min Read

PU topper lost her life ಜೀವ ಕಳೆದುಕೊಂಡ ಸೆಕೆಂಡ್ ಪಿಯು ಟಾಪರ್ ವಿದ್ಯಾರ್ಥಿನಿ! ಸಾವಿಗೇನು ಕಾರಣ?

1 Min Read

11 people died in Mysore jayadeva ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಒಂದೇ ದಿನ 11 ಮಂದಿ‌ ಸಾವು! ವೈದ್ಯಾಧಿಕಾರಿ ಹೇಳಿದ್ದೇನು?

2 Min Read

You Might Also Like

ಪ್ರಮುಖಮನರಂಜನೆ

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read
ಕರ್ನಾಟಕಪ್ರಮುಖ

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read
ಕರ್ನಾಟಕಪ್ರಮುಖ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read
ಕರ್ನಾಟಕಪ್ರಮುಖ

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?