newsics.com
ಗುರುತೇಜ್ ಶೆಟ್ಟಿ ನಿರ್ದೇಶನದ ಕಿರಣ್ ರಾಜ್ ಅಭಿನಯದ ‘ರಾನಿ‘ ಸಿನಿಮಾದ ‘ಹವಾಮಾನವೆ ಸುಂದರ ಸುಂದರ’ ಎಂಬ ಹಾಡು ಶುಕ್ರವಾರ ಬಿಡುಗಡೆಗೊಂಡಿದ್ದು, ತನ್ನ ಮಾಧುರ್ಯದಿಂದಾಗಿ ಎಲ್ಲರನ್ನೂ ಸೆಳೆಯುತ್ತಿದೆ.
ನಾಯಕ ನಟ ಕಿರಣ್ ರಾಜ್, ನಾಯಕಿ ರಾಧ್ಯಾ ಅಭಿನಯಿಸಿರುವ ಈ ಹಾಡಿನಲ್ಲಿ ಖ್ಯಾತ ನಟ ಧರ್ಮಣ್ಣ ಹಾಗೂ ಇತರರೂ ಇದ್ದಾರೆ.
ಪ್ರಕೃತಿ ಸೌಂದರ್ಯದ ಮಡಿಲಲ್ಲಿ ಮಧುರವಾಗಿ ತೇಲಿಬರುವ ಈ ಹಾಡನ್ನು ಪ್ರಮೋದ್ ಮರವಂತೆ ಬರೆದಿದ್ದು, ಕುನಾಲ್ ಗಾಂಜವಾಲ, ಹಂಸಿಕಾ ಅಯ್ಯರ್ ಹಾಡಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ.
https://www.instagram.com/reel/C9IHtfEoTrl/?igsh=MTlrbDM5enF6NXB3NA==
https://www.instagram.com/invites/contact/?igsh=1k6gkaz5kqres&utm_content=ul41diw
ಗಿರೀಶ್ ಹೆಗ್ಡೆ ನಿರ್ಮಾಣದ ಈ ಸಿನಿಮಾದಲ್ಲಿ ಸಮೀಕ್ಷಾ ಹಾಗೂ ಅಪೂರ್ವ ಕೂಡ ನಾಯಕಿಯರಾಗಿದ್ದಾರೆ. ನಟ ರವಿಶಂಕರ್, ಸುಜಯ್ ಶಾಸ್ತ್ರಿ ಮೊದಲಾದವರು ನಟಿಸಿದ್ದಾರೆ.
ಈ ಚಿತ್ರ ಆಗಸ್ಟ್ 30ರಂದು ಬಿಡುಗಡೆಗೊಳ್ಳಲಿದೆ.
‘ಗಿಣಿರಾಮ’ ತಂಡ ನನಗೆ ಭಾರೀ ಕಷ್ಟ ಕೊಡ್ತು, ಶೂಟಿಂಗ್ ವಾತಾವರಣ ಚೆನ್ನಾಗಿರಲಿಲ್ಲ… ಕಿರುತೆರೆ ನಟಿ ನಯನಾ ನೋವು