newsics.com
ಬೆಂಗಳೂರು: 1981 ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದ ಬಿಹಾರದ ಚಂಪಾರಣ್ ಜಿಲ್ಲೆಯವರಾಗಿದ್ದ ಓಪ್ರಕಾಶ್ ಅವರನ್ನು ಹೆಂಡತಿ ಪಲ್ಲವಿ ಚಾಕುವಿನಿಂದ ಎಂಟರಿಂದ ಹತ್ತು ಬಾರಿ ಇರಿದು ಭೀಕರವಾಗಿ ಹತ್ಯೆ ಮಾಡಿದ್ದಾರೆ.
ಹತ್ಯೆಗೆ ಬಳಸಿದ್ದ ಚಾಕು ಮನೆಯಲ್ಲೇ ಸಿಕ್ಕಿದ್ದು, ಓಂಪ್ರಕಾಶ್ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೋಕೋ ಟೀಂ ಹಾಗೂ ಹೆಚ್ ಎಸ್ ಆರ್ ಲೇಔಟ್ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಪತ್ನಿ ಪಲ್ಲವಿ ಹಾಗೂ ಪುತ್ರಿ ಕೃತಿಯನ್ನು ವಶಕ್ಕೆ ಪಡೆದಿದ್ದಾರೆ.
ದಾಂಡೇಲಿಯಲ್ಲಿದ್ದ ಆಸ್ತಿಯನ್ನು ಓಂಪ್ರಕಾಶ್ ಅವರು ತಮ್ಮ ತಂಗಿಗೆ ನೀಡಿದ್ದರಿಂದ ಪತ್ನಿ ಪಲ್ಲವಿ ಆಕ್ರೋಶಗೊಂಡಿದ್ದರು. ಕೆಲವೊಮ್ಮೆ ಮಾನಸಿಕ ಸ್ಥಿಮಿತವನ್ನೂ ಕಳೆದುಕೊಳ್ಳುತ್ತಿದ್ದರು ಎನ್ನಲಾಗಿದೆ. ಗಂಡನೇ ತನ್ನನ್ನು ಕೊಲ್ಲಬಹುದೆಂದು ಭಾವಿಸಿ ಈ ಕೊಲೆ ಮಾಡಿರುವುದಾಗಿ ಪಲ್ಲವಿ ಹೇಳಿದ್ದಾರೆನ್ನಲಾಗಿದೆ.
ಈ ಕೊಲೆ ಮಾಡುವ ವೇಳೆ ಓಂಪ್ರಕಾಶ್ ಸೊಸೆ ಮನೆಯ ಮೂರನೇ ಮಹಡಿಯಲ್ಲಿದ್ದರು ಎಂದು ಹೇಳಲಾಗಿದೆ.
20 ವರ್ಷದಿಂದ ಜಗಳ:
ಇಬ್ಬರ ನಡುವೆ ಆಗಾಗ ಗಲಾಟೆಯಾಗುತ್ತಿತ್ತಂತೆ. ಸುಮಾರು 20 ವರ್ಷಗಳಿಂದ ಇಬ್ಬರ ನಡುವೆಲ ಮನಸ್ಥಾಪ ಉಂಟಾಗಿತ್ತು. ಮಾತ್ರವಲ್ಲ, ಕೆಲವು ತಿಂಗಳ ಹಿಂದೆ ಓಂ ಪ್ರಕಾಶ್ ಮನೆ ಮುಂದೆ ಪತ್ನಿ ಧರಣಿ ಕೂಡ ಮಾಡಿದ್ದರು. HSR ಲೇಔಟ್ ಬಳಿ ಇರುವ ಮನೆ ಮುಂದೆ ತನ್ನ ಗಂಡನ ವಿರುದ್ಧ ಧರಣಿ ಮಾಡಿದ್ದರು. ನಂತರ ಇದರ ಬಗ್ಗೆ ಹೆಚ್ಎಸ್ಆರ್ ಲೇಔಟ್‌ನಲ್ಲಿ ದೂರು ಸಹ ದಾಖಲಾಗಿತ್ತು.
ಅಷ್ಟೇ ಅಲ್ಲ ಪತಿಯ ವಿರುದ್ಧ ವಿವಿಧ ಠಾಣೆಗಳಲ್ಲಿ ಹಾಗೂ ಪ್ರೆಸಿಡೆಂಟ್ ಆಫ್ ಇಂಡಿಯಾ, ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ, ಹಾಗೂ ಕೆಲವು ಉನ್ನತಮಟ್ಟದಲ್ಲಿ ಸಂಸ್ಥೆಗಳಿಗೆ ಕೂಡ ಓಂಪ್ರಕಾಶ್ ಪತ್ನಿ ಗಂಡನ ವಿರುದ್ಧ ದೂರು ನೀಡಿದ್ದರು. ಇಬ್ಬರ ನಡುವೆ ವೈ ಮನಸು ಇರುವ ಕಾರಣ ಗಂಡನೇ ನನ್ನನ್ನ ಕೊಲೆ ಮಾಡುತ್ತಾನೆ ಎಂದು ಭಾವಿಸಿ ಪತಿಯನ್ನು ಕೊಲೆ ಮಾಡಿದ್ದಾರೆ.
ವಿಡಿಯೋ ಕಾಲ್:
ಗಂಡನನ್ನು ಕೊಲೆ ಮಾಡಿ ಬಳಿಕ ಐಪಿಎಸ್ ಹೆಂಡತಿ ಒಬ್ಬರಿಗೆ ವಿಡಿಯೋ ಕಾಲ್ ಮಾಡಿ ಗಂಡನ ಮೃತದೇಹವನ್ನು ತೋರಿಸಿದ್ದಾರೆ. ಅಷ್ಟೇ ಅಲ್ಲ, ವಿಡಿಯೋ ಕಾಲ್ ನಲ್ಲಿ I have finished the monster (ನಾನು ರಾಕ್ಷಸನನ್ನು ಮುಗಿಸಿದ್ದೇನೆ) ಎಂದು ಐಪಿಎಸ್ ಒಬ್ಬರ ಪತ್ನಿಗೆ ಕರೆ ಮಾಡಿ ಜತೆ ಮಾಹಿತಿ ಹಂಚಿಕೊಂಡಿದ್ದಾರೆ.
ನಿವೃತ್ತ ಡಿಜಿ ಓಂಪ್ರಕಾಶ್ ಹತ್ಯೆಗೆ ಆಸ್ತಿ ವಿವಾದವೇ ಕಾರಣವಾ? ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದ್ದೇನು?
ಮದರಂಗಿ ಹಾಕಿಸಿಕೊಂಡು ಬರುವೆ ಅಂತ ಬ್ಯೂಟಿಪಾರ್ಲರ್‌ಗೆ ಹೋದ ವಧು ನಾಪತ್ತೆ
Health tips ಹುಬ್ಬು ಸರಿಪಡಿಸಲು ಥ್ರೆಡಿಂಗ್ ಮಾಡಿಸಿಕೊಳ್ತೀರಾ ? ಹಾಗಾದ್ರೆ ಎಚ್ಚರವಹಿಸಿ
Janhvi Kapoor ಗಂಡಸರು ಮುಟ್ಟಾದ್ರೆ ನ್ಯೂಕ್ಲಿಯರ್ ವಾರ್ ಆಗುತ್ತೆ: ಜಾನ್ವಿ ಕಪೂರ್ ಸೆನ್ಸೇಷನಲ್ ಹೇಳಿಕೆ