newsics.com
ಜಾನ್ವಿ ಕಪೂರ್ ಮುಟ್ಟಿನ ಬಗ್ಗೆ ಮಾತನಾಡಿದ್ದಾರೆ. ಮಹಿಳೆಯರ ಮುಟ್ಟಿನ ನೋವನ್ನು ನಿರ್ಲಕ್ಷಿಸುವ ಪುರುಷರನ್ನು ನಟಿ ಜಾನ್ವಿ ಕಪೂರ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ನೋವನ್ನು ಯಾವ ಪುರುಷರು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಜಾನ್ವಿ ಕಪೂರ್, ಮುಟ್ಟಿನ ನೋವು ಮಹಿಳೆಯರ ಮೇಲೆ ಹೇಗೆ ವಿಭಿನ್ನವಾಗಿ ಪರಿಣಾಮ ಬೀರುತ್ತದೆ ಎಂದು ಮಾತನಾಡಿದ್ದಾರೆ. ಕೆಲವು ಪುರುಷರು ಅದನ್ನು ಹೇಗೆ ನೋಡುತ್ತಾರೆ ಎಂಬುದರ ಕುರಿತು ಜಾನ್ವಿ ಕಪೂರ್ ಮಾತನಾಡಿದರು.
ಈ ಬಗ್ಗೆ ಮಾತನಾಡಿದ ಜಾನ್ವಿ ಕಪೂರ್, ಮುಟ್ಟಿನ ಸಮಯದಲ್ಲಿ ಮಹಿಳೆಯರ ಮನಸ್ಥಿತಿ ಬದಲಾವಣೆ ಮತ್ತು ನೋವಿನ ಬಗ್ಗೆ ಮಾತನಾಡಿದರು. ಮುಟ್ಟಿನ ಸಂದರ್ಭ ಹಲವಾರು ಭಾವೋದ್ವೇಗಗಳು ಬರುತ್ತವೆ. ಮುಟ್ಟಿನ ಸಮಯದಲ್ಲಿ ಭಾವನೆಗಳು ಬದಲಾಗುತ್ತವೆ. ಸಿಟ್ಟು, ನೋವು, ಹತಾಶೆ ಇರುತ್ತವೆ ಎಂದು ಜಾನ್ವಿ ಕಪೂರ್ ಹೇಳಿದ್ದಾರೆ.
ಹೆಚ್ಚಿನ ಸಂದರ್ಭಗಳಲ್ಲಿ ನಮ್ಮ ಮನಸ್ಥಿತಿ ಬದಲಾಗಲು ಕೇವಲ ಒಂದು ನಿಮಿಷ ಸಾಕು. ಏಕೆಂದರೆ ನಮ್ಮ ಹಾರ್ಮೋನುಗಳು ಆ ರೀತಿ ಬದಲಾಗುತ್ತಿರುತ್ತವೆ. ನಾವು ಅನುಭವಿಸುವ ನೋವು ನಮಗಷ್ಟೇ ಗೊತ್ತು. ಒಂದು ವೇಳೆ ಪುರುಷರು ಮುಟ್ಟಿನ ನೋವು ಮತ್ತು ಮನಸ್ಥಿತಿಯ ಬದಲಾವಣೆಗಳನ್ನು ಅನುಭವಿಸಿದರೆ ಅವರಿಂದ ಒಂದು ನಿಮಿಷವೂ ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಪುರುಷರಿಗೆ ಮುಟ್ಟು ಆದರೆ ಎಂತಹ ಪರಮಾಣು ಯುದ್ಧ ನಡೆಯುತ್ತಿತ್ತು ಎಂದು ಹೇಳಿದ್ದಾರೆ.
ಕೆಲಸದ ವಿಚಾರಕ್ಕೆ ಬಂದರೆ, ಜಾನ್ವಿ ಕಪೂರ್ ಕೊನೆಯ ಬಾರಿಗೆ ‘ದೇವರ – ಭಾಗ 1’ ಚಿತ್ರದಲ್ಲಿ ಕಾಣಿಸಿಕೊಂಡರು. ಈಗ ಅವರು ವರುಣ್ ಧವನ್ ಅಭಿನಯದ ‘ಸನ್ನಿ ಸಂಸ್ಕರಿ ಕಿ ತುಳಸಿ ಕುಮಾರಿ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ‘ಪರಮ್ ಸುಂದರಿ’ ಚಿತ್ರವನ್ನೂ ಸಹ ಮಾಡುತ್ತಿದ್ದಾರೆ. ಮಾರ್ಚ್ 27, 2027 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ರಾಮ್ ಚರಣ್ ಅವರ ‘ಪೆಡ್ಡಿ’ ಚಿತ್ರದಲ್ಲಿ ನಟಿ ಕೂಡ ಕಾಣಿಸಿಕೊಳ್ಳಲಿದ್ದಾರೆ . https://www.newsics.com/2025/04/20/i-never-liked-boys-my-age-i-liked-older-guys-rakshit-shetty/