newsics.com
ಮಂಗಳೂರು: ಮದುವೆಗೆ ದಿನ ಮೊದಲು ವಧುವೊಬ್ಬಳು ನಾಪತ್ತೆಯಾಗಿರುವ ಆಘಾತಕಾರಿ ಘಟನೆ ಮಂಗಳೂರಿನ ಬೋಳಾರ್‌ನಲ್ಲಿ ನಡೆದಿದೆ. 22 ವರ್ಷದ ಪಲ್ಲವಿ ಎಂಬ ವಧುವಿನ ಮದುವೆ ಏಪ್ರಿಲ್ 16 ರಂದು ನಿಗದಿಯಾಗಿತ್ತು. ಆದರೆ ಮದರಂಗಿ ಶಾಸ್ತ್ರದ ದಿನವೇ ಆಕೆ ಬ್ಯೂಟಿಪಾರ್ಲರ್‌ಗೆ ಹೋಗಿ ಮೆಹಂದಿ ಹಾಕಿಸಿಕೊಂಡು ಬರುವುದಾಗಿ ತನ್ನ ಅಮ್ಮನಿಗೆ ಹೇಳಿ ಮನೆಯಿಂದ ಒಬ್ಬಳೇ ಹೊರಗೆ ಹೋದವಳು ಮತ್ತೆ ವಾಪಸ್ ಬಂದಿಲ್ಲ. ಇದರಿಂದಾಗಿ ವಧು ಹಾಗೂ ವರನ ಮನೆಯವರು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ಏಪ್ರಿಲ್ 15ರಂದು ಈ ಘಟನೆ ನಡೆದಿದೆ.
ಆಕೆಯ ಫೋನ್‌ಗೆ ಕರೆ ಮಾಡಿದರೆ ಫೋನ್ ಸ್ವಿಚ್ಆಫ್ ಎಂದು ಬರುತ್ತಿದೆ. ಪಲ್ಲವಿಯ ಒಪ್ಪಿಗೆಯ ಮೇರೆಗೆಯೇ ಈ ಮದುವೆಯನ್ನು ನಿಗದಿ ಮಾಡಲಾಗಿತ್ತು. ಎಲ್ಲವೂ ಸರಿಯಾಗಿದ್ದರೆ ಏಪ್ರಿಲ್ 16 ರಂದು ಮದುವೆ ನಡೆಯಬೇಕಿತ್ತು. ಆದರೆ ವಧು ಮದುವೆಗೆ ದಿನ ಮೊದಲು ನಾಪತ್ತೆಯಾಗಿರುವುದು ಆಕೆಯ ಕುಟುಂಬದವರು ನೆಂಟರು ಹಾಗೂ ವರನ ಕಡೆಯವರಿಗೆ ತೀವ್ರ ಆಘಾತವುಂಟು ಮಾಡಿದೆ. ಘಟನೆಗೆ ಸಂಬಂಧಿಸಿದಂತೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿದ್ದು, ಆಕೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
22 ವರ್ಷದ ಯುವತಿ 5 ಅಡಿ ಎತ್ತರವಿದ್ದು, ಶ್ವೇತ ವರ್ಣವನ್ನು ಹೊಂದಿದ್ದಾರೆ. ಉದ್ದನೇಯ ತಲೆಕೂದಲು ಇದ್ದು, ಕನ್ನಡ, ತುಳು, ಇಂಗ್ಲೀಷ್, ಹಿಂದಿ ಭಾಷೆಯನ್ನು ಮಾತನಾಡುತ್ತಾರೆ. ಈಕೆಯ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕಿದರೆ ತಿಳಿಸುವಂತೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಇದು ಅವರ ಸಮುದಾಯವನ್ನು ತೀವ್ರ ಚಿಂತೆಗೀಡು ಮಾಡಿದ್ದು, ಪೊಲೀಸರು ವಿವಿಧ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ. ಆಕೆ ಆಕೆಯ ಇಚ್ಚೆಯಂತೆಯೇ ಹೋಗಿರಬಹುದೇ ಅಥವಾ ಇದರ ಹಿಂದೆ ಬೇರೆನಾದರೂ ಕೈವಾಡ ಇದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ಸ್ಮೈಲಿ ಫೇಸ್ ರೂಪದಲ್ಲಿ ಗೋಚರಿಸಲಿದೆ, ಚಂದ್ರ,ಶುಕ್ರ, ಶನಿ ಮಿಸ್ ಮಾಡಿಕೊಳ್ಳಬೇಡಿ