Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Good News ಗುಡ್ ನ್ಯೂಸ್: 10 ಲಕ್ಷ ಮೆಟ್ರಿಕ್‌ ಟನ್‌ ಮಾವು ಇಳುವರಿ ನಿರೀಕ್ಷೆ!
ಕರ್ನಾಟಕ

Good News ಗುಡ್ ನ್ಯೂಸ್: 10 ಲಕ್ಷ ಮೆಟ್ರಿಕ್‌ ಟನ್‌ ಮಾವು ಇಳುವರಿ ನಿರೀಕ್ಷೆ!

Share
2 Min Read
SHARE

newsics.com

ಈ ಬಾರಿ ಮಾವು ಬೆಳೆಯ ಮೇಲೆ ನಿರೀಕ್ಷೆ ಇಟ್ಟುಕೊಳ್ಳಲಾಗಿದ್ದು, ಕಳೆದ ಬಾರಿಗಿಂತಲೂ ಹೆಚ್ಚಿನ ಅದಾಯ ಬರಲಿದೆ ಎನ್ನಲಾಗಿದೆ‌. ಹೌದು, ಮಾವು ಬೆಳೆಗಾರರು ಈ ಬಾರಿ ಕೊಂಚ ಖುಷಿಯಾಗಿದ್ದಾರೆ. ಜಿಗಿಹುಳು ಉಪಟಳವೂ ಕಡಿಮೆಯಿದ್ದು, ಮರಗಳಲ್ಲಿ ಭರ್ಜರಿ ಹೂವು ಬಿಟ್ಟು ಕಾಯಿಕಟ್ಟಲು ಆರಂಭಿಸಿರುವುದರಿಂದ ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದಾರೆ.

ಇದಕ್ಕೆ ಪೂರಕವೆಂಬಂತೆ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ, ಇದು ಏರು ಹಂಗಾಮು ಅಥವಾ ಇಳಿ ಹಂಗಾಮು ಎಂದು ಅಂದಾಜಿಸಲು ಸಾಧ್ಯವಾಗುತ್ತಿಲ್ಲ. ಆದರೆ, ಗುಣಮಟ್ಟದ ಮಾವು ಸಿಗಲಿದ್ದು, ರಾಜ್ಯದಲ್ಲಿ 9 ರಿಂದ 10 ಲಕ್ಷ ಮೆಟ್ರಿಕ್‌ ಟನ್‌ ಇಳುವರಿ ನಿರೀಕ್ಷಿಸಬಹುದು ಎಂದಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಾವಿನ ಮರಗಳು ಬೇಗನೆ ಹೂವು ಬಿಟ್ಟಿದ್ದವು. ಇದರಿಂದ ಬೆಳೆಗಾರರು ಕೂಡ ಬಂಪರ್‌ ಬೆಳೆಯ ನಿರೀಕ್ಷೆಯಲ್ಲಿದ್ದರು. ಆದರೆ, ಫೆಬ್ರವರಿಯಲ್ಲಿ ಸುರಿದ ಮಳೆಗೆ ಹೂವು ಮತ್ತು ಕಾಯಿ ಉದುರಿ ತೊಂದರೆ ಆಗಿತ್ತು. ಹಾಗಾಗಿ ಈ ಬಾರಿ ಬಂಪರ್‌ ಅಲ್ಲದಿದ್ದರೂ 9 ರಿಂದ 10 ಲಕ್ಷ ಮೆಟ್ರಿಕ್‌ ಟನ್‌ ಇಳುವರಿ ಸಿಗಲಿದೆ. ಸಾಮಾನ್ಯವಾಗಿ ಇಳಿ ಹಂಗಾಮಿನಲ್ಲಿ ಮಾವಿನ ಇಳುವರಿ 6 ಲಕ್ಷದಿಂದ 7 ಲಕ್ಷ ಮೆಟ್ರಿಕ್‌ ಟನ್‌ ಇದ್ದರೆ, ಏರು ಹಂಗಾಮಿನಲ್ಲಿ 12 ರಿಂದ 15 ಲಕ್ಷ ಮೆಟ್ರಿಕ್‌ ಟನ್‌ ಇಳುವರಿ ಇರುತ್ತದೆ.

ಈ ಬಾರಿ ಬಿಸಿಲಿನ ಬೇಗೆ ಹೆಚ್ಚಾಗಿದ್ದು, ಸ್ವಲ್ಪ ಮಟ್ಟಿಗೆ ಮಾವು ಇಳುವರಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಆದರೆ, ಮಾವು ಬೆಳೆಯನ್ನು ಹೆಚ್ಚಾಗಿ ಬಾಧಿಸುವ ಜಿಗಿಹುಳು ಉಪಟಳ ಕಡಿಮೆಯಿದೆ. ರೋಗಗಳು ಕೂಡ ಕಡಿಮೆಯಿದೆ. ಏಪ್ರಿಲ್‌- ಮೇ ತಿಂಗಳಲ್ಲಿ ಆಲಿಕಲ್ಲು ಮಳೆ, ಬಿರುಗಾಳಿ ಸಹಿತ ಮಳೆ ಅಥವಾ ಹೆಚ್ಚಿನ ಗಾಳಿ ಬಾಧಿಸದಿದ್ದರೆ ಉತ್ತಮ ಇಳುವರಿ ಬೆಳೆಗಾರರ ಕೈಸೇರಲಿದೆ. ಏಪ್ರಿಲ್‌ 3ನೇ ವಾರ ಇಲ್ಲವೇ ಕೊನೆಯ ವಾರದಲ್ಲಿ ಹೆಚ್ಚಿನ ಮಾವಿನ ಹಣ್ಣು ಮಾರುಕಟ್ಟೆ ಪ್ರವೇಶಿಸಲಿದೆ ಎಂದು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ನಾಗರಾಜ್‌ ಹೇಳಿದ್ದಾರೆ.

ರಾಜ್ಯದಲ್ಲಿ ಕೋಲಾರ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ಧಾರವಾಡ, ಬೆಳಗಾವಿ ಸೇರಿ 31 ಜಿಲ್ಲೆಗಳಲ್ಲಿ 1.49 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಈ ಪೈಕಿ ಕೋಲಾರದಲ್ಲಿ 3.5 ಲಕ್ಷ ಮೆಟ್ರಿಕ್‌ ಟನ್‌ಗೂ ಹೆಚ್ಚು ಇಳುವರಿ ಬರುವ ಸಾಧ್ಯತೆ ಇದೆ. ರಾಮನಗರದಲ್ಲಿ ಅಂದಾಜು 2.1 ಲಕ್ಷ ಮೆಟ್ರಿಕ್‌ ಟನ್‌, ಚಿಕ್ಕಬಳ್ಳಾಪುರದಲ್ಲಿ 1.10 ಲಕ್ಷ ಮೆಟ್ರಿಕ್‌ ಟನ್‌, ಬೆಳಗಾವಿ 45 ಸಾವಿರ ಮೆಟ್ರಿಕ್‌ ಟನ್‌, ಬೆಂಗಳೂರು ಗ್ರಾಮಾಂತರ 40 ರಿಂದ 45 ಸಾವಿರ ಮೆಟ್ರಿಕ್‌ ಟನ್‌, ಹಾವೇರಿ 42 ಸಾವಿರ ಮೆಟ್ರಿಕ್‌ ಟನ್‌, ಧಾರವಾಡ 70ರಿಂದ 75 ಸಾವಿರ ಮೆಟ್ರಿಕ್‌ ಟನ್‌, ಉತ್ತರ ಕನ್ನಡ 35ರಿಂದ 37 ಸಾವಿರ, ಚಿಕ್ಕಮಗಳೂರು 30 ಸಾವಿರ ಮೆಟ್ರಿಕ್‌ ಟನ್‌ ಇಳುವರಿಯಾಗುವ ಸಾಧ್ಯತೆ ಇದೆ. ಹೀಗೆ ಒಟ್ಟಾರೆ ರಾಜ್ಯದಲ್ಲಿ 9 ರಿಂದ 10 ಲಕ್ಷ ಮೆಟ್ರಿಕ್‌ ಟನ್‌ ಇಳುವರಿ ನಿರೀಕ್ಷಿಸಬಹುದು ಎಂದು ಮಾವು ನಿಗಮದ ಮೂಲಗಳು ತಿಳಿಸಿವೆ.

Secret marriage ಸೋದರ ಸಂಬಂಧಿ ಜೊತೆ ರಹಸ್ಯ ಮದುವೆ, ಬ್ರೇಕಪ್;ಆತ್ಮಹತ್ಯೆಗೆ ಶರಣಾದ ಯುವತಿ

TAGGED:Good news for mango loversmango season will begin in a few dayswhat is the current price?
Share This Article
Facebook Twitter Copy Link Print
Previous Article Secret marriage ಸೋದರ ಸಂಬಂಧಿ ಜೊತೆ ರಹಸ್ಯ ಮದುವೆ, ಬ್ರೇಕಪ್;ಆತ್ಮಹತ್ಯೆಗೆ ಶರಣಾದ ಯುವತಿ
Next Article harassment ಯುವತಿಯ ಖಾಸಗಿ ಭಾಗ ಸ್ಪರ್ಶಿಸಿ ಲೈಂಗಿಕ ಕಿರುಕುಳ ನೀಡಿದ ಕಾಮುಕರು

Popular Posts

New Big Boss ಶೀಘ್ರದಲ್ಲೇ ಬರಲಿದೆ ಹೊಸ ಬಿಗ್ ಬಾಸ್!

2 Min Read

DK announcement ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ನೂತನ ಸಿಎಂ ಡಿಕೆ 6 ಭರ್ಜರಿ ಘೋಷಣೆ

3 Min Read

ಮನೆ ನಿರ್ಮಾಣ,ಮೊದಲ ಸುದ್ದಿಗೋಷ್ಠಿಯಲ್ಲಿ ಸಿಎಂ ಡಿಕೆಶಿ ಮಹತ್ವದ 6 ಘೋಷಣೆ

2 Min Read

ತಮಿಳುನಾಡು ಉಪಚುನಾವಣೆ; ಕಾಂಗ್ರೆಸ್‌ಗೆ ರಾಜ್ಯಸಭಾ ಸ್ಥಾನ ಬಿಟ್ಟುಕೊಟ್ಟ ವಿಜಯ್ ನೇತೃತ್ವದ ಟಿವಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಕರ್ನಾಟಕ ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

0 Min Read
ಕರ್ನಾಟಕಪ್ರಮುಖ

11 ಜಿಲ್ಲೆಗಳಲ್ಲಿ ನಾಳೆ ವರುಣಾರ್ಭಟ, ತೀವ್ರ ಗಾಳಿಯ ಎಚ್ಚರಿಕೆ

1 Min Read
ಕರ್ನಾಟಕಪ್ರಮುಖ

ದೇಶದ ನಂಬರ್‌ 1 ಶ್ರೀಮಂತ ಮುಖ್ಯಮಂತ್ರಿಯಾದ ಡಿ.ಕೆ.ಶಿವಕುಮಾರ್‌

3 Min Read
ಕರ್ನಾಟಕದೇಶಪ್ರಮುಖ

No women ministers ಮಹಿಳಾಪರ ‘ಗ್ಯಾರಂಟಿ’ಗಳಿದ್ದರೂ ಡಿಕೆ ಸಂಪುಟದಲ್ಲಿ ಮಹಿಳೆಗಿಲ್ಲ ಸ್ಥಾನ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?