Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ದರ್ಶನ್‌ ಭೇಟಿಗೆ ಮುಂದಾದ ನಟ, ನಟಿಯರು: ಬದಲಾಯ್ತಾ ಸ್ಯಾಂಡಲ್‌ವುಡ್ ಮಂದಿಯ ಧೋರಣೆ?
ಕರ್ನಾಟಕಮನರಂಜನೆ

ದರ್ಶನ್‌ ಭೇಟಿಗೆ ಮುಂದಾದ ನಟ, ನಟಿಯರು: ಬದಲಾಯ್ತಾ ಸ್ಯಾಂಡಲ್‌ವುಡ್ ಮಂದಿಯ ಧೋರಣೆ?

Share
2 Min Read
SHARE

newsics.com

ಬೆಂಗಳೂರು: ರೇಣುಕಾಸ್ವಾಮಿ‌ ಬರ್ಬರ ಕೊಲೆ ಪ್ರಕರಣದ ಬಳಿಕ ಸ್ಟಾರ್ ನಟ ದರ್ಶನ್ ಅವರಿಂದ ಅಂತರ ಕಾಯ್ದುಕೊಂಡಿದ್ದ ಸ್ಯಾಂಡಲ್‌ವುಡ್‌ನ ಹಲವರಲ್ಲಿ ಇದೀಗ ಒಬ್ಬೊಬ್ಬರೇ ದರ್ಶನ್ ಭೇಟಿ ಮಾಡುತ್ತಿರುವುದು ಕುತೂಹಲ ಹುಟ್ಟಿಸಿದೆ.

50ಕ್ಕಿಂತ ಹೆಚ್ಚು ಸಿನಿಮಾ ಮಾಡಿರುವ ನಟ ದರ್ಶನ್, ಕೋಟ್ಯಂತರ ಅಭಿಮಾನಿಗಳ ಮೆಚ್ಚಿನ ನಟ. ಆದರೆ, ಜೈಲಿನಲ್ಲಿ ಬಂಧಿಯಾಗಿರುವ ಅವರನ್ನು ನೋಡಲು ಹೆಂಡತಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಹೊರತಪಡಿಸಿದರೆ ಬೇರೆ ಯಾರೂ ಹೋಗಿಲ್ಲ ಎನ್ನಲಾಗುತ್ತಿತ್ತು. ಈ ಮಾತು ಚಾಲ್ತಿಯಲ್ಲಿ ಇರುವಾಗಲೇ ನಟ ದರ್ಶನ್ ಅವರನ್ನು ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ನಟ ವಿನೋದ್ ಪ್ರಭಾಕರ್ ಅವರು ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು.

ಸ್ಯಾಂಡಲ್‌ವುಡ್ ಲವ್ಲಿ ಸ್ಟಾರ್ ಪ್ರೇಮ್ ಸೇರಿದಂತೆ ಇದೀಗ ನಟ ದರ್ಶನ್ ನೋಡಲು ಪರಪ್ಪನ ಅಗ್ರಹಾರಕ್ಕೆ ನಟ-ನಿರ್ದೇಶಕ ಜೋಗಿ ಪ್ರೇಮ್, ಹಾಗೂ ರಕ್ಷಿತಾ ಪ್ರೇಮ್ ಹೋಗಿ ಬಂದಿದ್ದಾರೆ. ಇದು ಶನಿವಾರದ ಬೆಳವಣಿಗೆ.

ನಟಿ ರಕ್ಷಿತಾ ಅವರು ದರ್ಶನ್ ಆಪ್ತ ಸ್ನೇಹಿತೆಯಾಗಿದ್ದು, ಸ್ವತಃ ದರ್ಶನ್ ಅವರೇ ಬಂದು ಭೇಟಿಯಾಗುವಂತೆ ಹೇಳಿದ್ದರು ಎನ್ನಲಾಗಿದೆ. ಸ್ನೇಹಿತನ ನೋಡಲು ಹೊರಟ ರಕ್ಷಿತಾ ಪ್ರೇಮ್ ಹಾಗೂ ಪ್ರೇಮ್ ಅವರು ಶನಿವಾರ ಸಾಯಂಕಾಲ 4:30ಕ್ಕೆ ಜೈಲಿಗೆ ಭೇಟಿ ನೀಡಿ, ನಟ ದರ್ಶನ್ ಅವರನ್ನು ಮಾತನಾಡಿಸಿಕೊಂಡು ಬಂದಿದ್ದಾರೆ.

ನಟ ದರ್ಶನ್ ಭೇಟಿ ಬಳಿಕ ರಕ್ಷಿತಾ ಅವರು ಕಣ್ಣೀರು ಹಾಕಿದ್ದಾರೆ. ಈ ಬಗ್ಗೆ ರಕ್ಷಿತಾ ‘ಹದಿನೈದು ಇಪ್ಪತ್ತು ದಿನದಿಂದ ಆಗಿರುವುದು ದುರದೃಷ್ಟಕರ ಬೆಳವಣಿಗೆ. ನಮಗೆ ಈ ಪ್ರಕರಣದ ಬಗ್ಗೆ ಬೇಜಾರು ಇದೆ’ ಎಂದಷ್ಟೇ ಹೇಳಿ ಬೇಸರದಲ್ಲಿ ರಕ್ಷಿತಾ ಹೊರಟಿದ್ದಾರೆ.

ಪ್ರಕರಣ ನ್ಯಾಯಾಲಯದಲ್ಲಿದೆಯೆಂದು ಮಾತು ಆರಂಭಿಸಿದ ನಟ ಪ್ರೇಮ್ ‘ ನಾವು ಈ ಸಂದರ್ಭದಲ್ಲಿ ಪ್ರಕರಣದ ಬಗ್ಗೆ ಮಾತನಾಡುವುದು ಸರಿಯಲ್ಲ. ಜೈಲಿನಲ್ಲಿ ದರ್ಶನ್ ಜತೆ ನಡೆದ ಮಾತುಕತೆ ಬಗ್ಗೆ ನಾನು ಯಾವುದೇ ಮಾಹಿತಿ ನೀಡಲಾರೆ ಎಂದಿದ್ದಾರೆ.

ಒಂದು ವಾರದಲ್ಲಿ ಮೂವರ ಭೇಟಿಗೆ ಮಾತ್ರ ಅವಕಾಶ ಇರುತ್ತದೆ. ಈಗಾಗಲೇ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ಭೇಟಿ ಮಾಡಿದ್ದರು.
ವಿನೋದ್ ಪ್ರಭಾಕರ್ ದರ್ಶನ್ ಭೇಟಿ ಮಾಡಿದ್ದರು. ಪ್ರೇಮ್‌-ರಕ್ಷಿತಾ ಕೂಡ ಭೇಟಿಯಾಗಿದ್ದರು.

ಅಚ್ಚರಿ ಬೆಳವಣಿಗೆ ಎಂಬಂತೆ ಪರಪ್ಪನ ಅಗ್ರಹಾರ ಜೈಲಿನ ಬಳಿ, ನಟ ದರ್ಶನ್ ಅವರನ್ನು ನೋಡಲು ಚಿತ್ರರಂಗದಿಂದ ಒಬ್ಬೊಬ್ಬರಾಗಿ ಬರುತ್ತಿದ್ದಾರೆ. ಇಷ್ಟು ದಿನ ಮೌನವಾಗಿದ್ದ ಚಿತ್ರೋದ್ಯಮದ ಗಣ್ಯರು, ನಟ-ನಟಿಯರು, ಪ್ರಮುಖರು ನಿಧಾನವಾಗಿ ಮಾತನಾಡಲಾರಂಭಿಸಿದ್ದಾರೆ.

ದರ್ಶನ್ ಫ್ಯಾನ್ಸ್‌ಗಳಿಂದ ಬ್ಯಾಡ್ ಕಮೆಂಟ್ಸ್ ಟಾರ್ಚರ್; ಅಳಲು ತೋಡಿಕೊಂಡ ಸೋನು ಗೌಡ

ಶಾಂತಂ ಪಾಪಂ ಟೆಲಿ ಸರಣಿಯಲ್ಲಿ ನಟ ದರ್ಶನ್ ಕಥೆ! ಏನಿದು ಡೇರ್ ಡೆವಿಲ್ ದೇವದಾಸ್ ಕಹಾನಿ?

ಹಾಟ್ ಲುಕ್‌ನಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದ ‘ಟೋಬಿ’ ಚೆಲುವೆ ಚೈತ್ರ ಆಚಾರ್

TAGGED:Actorsactresses ready to visit Darshan Sandalwood people changed? entertainment newsics
Share This Article
Facebook Twitter Copy Link Print
Previous Article ದರ್ಶನ್ ಫ್ಯಾನ್ಸ್‌ಗಳಿಂದ ಬ್ಯಾಡ್ ಕಮೆಂಟ್ಸ್ ಟಾರ್ಚರ್; ಅಳಲು ತೋಡಿಕೊಂಡ ಸೋನು ಗೌಡ
Next Article Cow Dung Soup! ಈ ದೇಶದಲ್ಲಿ ಹಸುವಿನ ಸಗಣಿಯಿಂದ ತಯಾರಾಗುತ್ತೆ ವಿಶೇಷ್ ಸೂಪ್

Popular Posts

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read

You Might Also Like

ಕರ್ನಾಟಕಪ್ರಮುಖ

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read
ಕರ್ನಾಟಕಪ್ರಮುಖ

Dharmasthala Case ಎಸ್ಐಟಿ ರಚನೆಯಾದಾಗ ವೀರೇಂದ್ರ ಹೆಗ್ಗಡೆ ಜೈಲಿಗೆ ಹೋಗ್ತಾರೆಂದು ಬುರುಡೆ ಗ್ಯಾಂಗ್ ಸಂಭ್ರಮಿಸಿತ್ತು: ಚಿನ್ನಯ್ಯ

1 Min Read
ಕರ್ನಾಟಕಪ್ರಮುಖ

ಧರ್ಮದ ಕಾರಣಕ್ಕೆ ಜಾಬ್ ರಿಜೆಕ್ಟ್: ಸೋಷಿಯಲ್ ಮೀಡಿಯಾದಲ್ಲಿ ಭಯಂಕರ ಚರ್ಚೆ!

1 Min Read
ಕರ್ನಾಟಕಪ್ರಮುಖಮನರಂಜನೆ

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read

Social Networks

Facebook-f Instagram Twitter
Welcome Back!

Sign in to your account

Lost your password?