newsics.com
ಚೀನಾ: ವೈದ್ಯರೊಬ್ಬರು ಬುದ್ಧಿ ಹಲ್ಲು ಕೀಳುವ ಬದಲು ಬೇರೆ ಆರೋಗ್ಯಕರವಾಗಿದ್ದ ಹಲ್ಲು ಕಿತ್ತಿದ್ದಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚೀನಾದ ಅನ್ಹುಯಿ ಪ್ರಾಂತ್ಯದ ಮುನ್ಸಿಪಲ್ ಆಸ್ಪತ್ರೆಯಲ್ಲಿ ನಡೆದಿದೆ.
ಆಕೆಗೆ ಬುದ್ಧಿ ಹಲ್ಲು ಬರುತ್ತಿದ್ದ ಕಾರಣ ತುಂಬಾ ನೋವು ಕಾಣಿಸಿಕೊಂಡಿತ್ತು. ಹಾಗಾಗಿ ಅದನ್ನು ಕೀಳಿಸಲು ಆಸ್ಪತ್ರೆಗೆ ಬಂದಿದ್ದಳು. ಆದರೆ ವೈದ್ಯರು ತಪ್ಪಾಗಿ ಅರ್ಥೈಸಿಕೊಂಡು ಆರೋಗ್ಯಕರ ಹಲ್ಲು ತೆಗೆದಿದ್ದರು. ಬಳಿಕ ತಪ್ಪನ್ನು ಅರಿತ ವೈದ್ಯರು ತಂತಿಹಾಕಿ ಆ ಹಲ್ಲನ್ನು ಅದೇ ಜಾಗದಲ್ಲಿ ಕೂರಿಸಿದ್ದರು. ಇದರಿಂದಾಗಿ ಆಕೆಗೆ ಅಪಾರ ನೋವು ಕಾಣಿಸಿಕೊಂಡಿತ್ತು. ಯಾವುದೇ ಇಂಜೆಕ್ಷನ್ ನೀಡದೆ ಒಂದೂವರೆ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಬಳಿಕ ಆಕೆಯ ಒಸಡಿನಲ್ಲಿ ಊತ ಕಾಣಿಸಿಕೊಂಡಿತ್ತು. ದಿನಗಟ್ಟಲೆ ಕೇವಲ ನೀರು ಹೊರತುಪಡಿಸಿ ಏನನ್ನೂ ತಿನ್ನಲು ಸಾಧ್ಯವಾಗಿರಲಿಲ್ಲ. ನಿದ್ರೆಯನ್ನು ಕೂಡ ಹಾಳು ಮಾಡಿತ್ತು. ಇದಕ್ಕೆ ಪರಿಹಾರ ಕೊಡಿ ನೋವು ಕಡಿಮೆ ಮಾಡಿ ಎಂದು ಕೇಳಿಕೊಂಡರೂ ವೈದ್ಯರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
ಬಳಿಕ ಆಕೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಳು. ಆದ್ರೆ ತಿರಸ್ಕಾರಕ್ಕೆ ಒಳಗಾದ ನಂತರ ಆಕೆ ಸಾಯುವ ನಿರ್ಧಾರ ಮಾಡಿದ್ದಾಳೆ ಎಂದು ಸಂಬಂಧಿಯೊಬ್ಬರು ಹೇಳಿದ್ದಾರೆ.
ನಂತರ ಆಸ್ಪತ್ರೆಯು ಭಾಗಿಯಾಗಿದ್ದ ವೈದ್ಯರನ್ನು ಅಮಾನತುಗೊಳಿಸಿತು, ಪೊಲೀಸರು ಮತ್ತು ಸ್ಥಳೀಯ ಆರೋಗ್ಯ ಇಲಾಖೆ ಎರಡೂ ತನಿಖೆಗಳನ್ನು ಪ್ರಾರಂಭಿಸಿವೆ.
Tax policy: ಟ್ರಂಪ್ ನಿಂದ ಮತ್ತೆ ಟ್ಯಾಕ್ಸ್ ವಾರ್ : ಏಪ್ರಿಲ್ 2 ರಿಂದ ವಿದೇಶಿ ಕಾರುಗಳ ಮೇಲೆ ಶೇ.25 ಸುಂಕ