newsics.com
ಹಾವೇರಿ: ಇಲ್ಲೊಬ್ಬ ಪಾಗಲ್ ಪ್ರೇಮಿ ಹಾಡುಹಗಲೇ ಲೇಡೀಸ್ ಪಿಜಿಗೆ ನುಗ್ಗಿ ಪ್ರೀತ್ಸೆ, ಪ್ರೀತ್ಸೆ ಎಂದು ಕೂಗುತ್ತಾ ಕಿರಿಕಿರಿ ಮಾಡಿದ ಘಟನೆ ನಡೆದಿದೆ.
ಹಾವೇರಿ ನಗರದಲ್ಲಿರುವ ಈ ಮಹಿಳೆಯರ ಪಿಜಿಗೆ ನುಗ್ಗಿ ಪ್ರೀತ್ಸೆ, ಪ್ರೀತ್ಸೆ ಎಂದು ಕೂಗುತ್ತಾ, ಕೈ ಮುಗಿತೀನಿ, ಕಾಲಿಗೆ ಬೀಳ್ತೀನಿ ಎಂದು ರಂಪಾಟ ಮಾಡಿದ್ದಾನೆ. ಈತನ ಕಿರುಕುಳ ತಾಳಲಾರದೆ ಪಿಜಿಯಲ್ಲಿನ ಮಹಿಳೆಯರು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಪಾಗಲ್ ಪ್ರೇಮಿ ಹೆಸರು ಪ್ರಮೋದ್ ಶರಣಪ್ಪ ಎಂದು ತಿಳಿದುಬಂದಿದೆ. ಯುವತಿಯೊಬ್ಬಳು ಈತನ ಪ್ರೀತಿಯನ್ನು ನಿರಾಕರಿಸಿದರೂ ಈತ ಬೆನ್ನು ಬಿದ್ದು ಕಾಟ ಕೊಡುತ್ತಿದ್ದ ಎನ್ನಲಾಗಿದೆ. ಈ ವಿಚಿತ್ರ ಪ್ರೇಮಿಯ ವರ್ತನೆಯನ್ನು ಸೆರೆಹಿಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಹಾವೇರಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಶರಣಪ್ಪನನ್ನು ವಿಚಾರಣೆಗೊಳಪಡಿಸಿದ್ದಾರೆ.
Relationship ಕೆಲ ಮಹಿಳೆಯರು ಸಂಗಾತಿಗೆ ಮೋಸ ಮಾಡೋದೇಕೆ? ಇಲ್ಲಿವೆ ಕಾರಣಗಳು…
High court ಎದೆ ಮುಟ್ಟುವುದು, ಪೈಜಾಮದ ದಾರ ಕೀಳುವುದು ಅತ್ಯಾಚಾರವಲ್ಲ : ಹೈಕೋರ್ಟ್ ತೀರ್ಪು