Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Saliva ban Lifted ಬೌಲರ್‌ಗಳಿಗೆ ಸಿಹಿ ಸುದ್ದಿ: ಕ್ರಿಕೆಟ್ ಬಾಲ್‌ಗೆ ಎಂಜಲು ಉಜ್ಜುವ ನಿಯಮ ಮತ್ತೆ ಜಾರಿ
ದೇಶಪ್ರಮುಖ

Saliva ban Lifted ಬೌಲರ್‌ಗಳಿಗೆ ಸಿಹಿ ಸುದ್ದಿ: ಕ್ರಿಕೆಟ್ ಬಾಲ್‌ಗೆ ಎಂಜಲು ಉಜ್ಜುವ ನಿಯಮ ಮತ್ತೆ ಜಾರಿ

Share
2 Min Read
SHARE

newsics.com

ಮುಂಬಯಿ: ಐಪಿಎಲ್‌(IPL 2025) 18ನೇ ಆವೃತ್ತಿಯ ಪಂದ್ಯಾವಳಿ ಆರಂಭಕ್ಕೂ ಮುನ್ನವೇ ಬೌಲರ್‌ಗಳಿಗೆ ಸಿಹಿ ಸುದ್ದಿ ನೀಡಲು ಬಿಸಿಸಿಐ(BCCI) ಮುಂದಾಗಿದೆ.

ಕೋವಿಡ್ ಸಂದರ್ಭದಲ್ಲಿ ನಿಷೇಧಿಸಲಾಗಿದ್ದ ಚೆಂಡಿಗೆ ಎಂಜಲು ಹಾಕಿ ಉಜ್ಜುವ ನಿಯಮವನ್ನು(saliva ban) ಮತ್ತೆ ಜಾರಿಗೆ ತರಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮುಂದಾಗಿದೆ.

ಚೆಂಡಿನ ಹೊಳಪು ಹೆಚ್ಚಿಸಲು ಎಂಜಲು ಬಳಕೆ ಮಾಡುವುದರಿಂದ ಬೌಲರ್‌ಗಳಿಗೆ ಇದು ಸಹಕಾರಿಯಾಗಿದೆ. ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಸಮಯದಲ್ಲಿ ವೇಗಿ ಮೊಹಮ್ಮದ್‌ ಶಮಿ ಅವರು ಈ ನಿಯಮವನ್ನು ಮತ್ತೆ ಜಾರಿಗೊಳಿಸಿದರೆ ಬೌಲರ್‌ಗಳಿಗೆ ನೆರವಾಗುತ್ತದೆ ಎಂದು ಐಸಿಸಿಗೆ ಮನವಿ ಮಾಡಿದ್ದರು.

ಇದೀಗ ಬಿಸಿಸಿಐ ಐಪಿಎಲ್‌ ಮೂಲಕ ಈ ನಿಯಮವನ್ನು ಮರು ಜಾರಿಗೊಳಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಮುಂಬೈನಲ್ಲಿ ಗುರುವಾರ (ಮಾರ್ಚ್ 20) ನಡೆದ ಐಪಿಎಲ್ ತಂಡಗಳ ನಾಯಕರ ಸಭೆಯಲ್ಲಿ ಈ ಪ್ರಸ್ತಾವ ಇಡಲು ಬಿಸಿಸಿಐ ಸಿದ್ಧವಾಗಿದೆ.

2022ರಲ್ಲಿ ಐಸಿಸಿ (ಐಸಿಸಿ) ಕೋವಿಡ್ ತಡೆ ಮಾರ್ಗಸೂಚಿಯನ್ನು ಜಾರಿ ಮಾಡಿತ್ತು. ಆ ಸಂದರ್ಭದಲ್ಲಿ ಚೆಂಡಿಗೆ ಎಂಜಲು ಹಚ್ಚುವುದನ್ನು ನಿಷೇಧಿಸಿತ್ತು. ನಿಯಮ ಉಲ್ಲಂಘಿಸಿದ ಆಟಗಾರನನ್ನು ವಜಾಗೊಳಿಸುವ ಶಿಕ್ಷೆಯನ್ನೂ ಪ್ರಕಟಿಸಿತ್ತು. ಒಂದೊಮ್ಮೆ ಐಪಿಎಲ್‌ನಲ್ಲಿ ಎಂಜಲು ಬಳಕೆಯು ಆರಂಭವಾದರೆ ಐಸಿಸಿಯು ತನ್ನ ನಿಯಮವನ್ನು ಸಡಿಲಗೊಳಿಸುವ ಕುರಿತು ಮರುಪರಿಶೀಲನೆ ನಡೆಸುವ ಸಾಧ್ಯತೆ ಹೆಚ್ಚಲಿದೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಬಳಸಲಾಗುವ ಕೆಂಪು ಚೆಂಡಿನ ಹೊಳಪು ನಿರ್ವಹಿಸಲು ಎಂಜಲು ಬಳಕೆ ಅಗತ್ಯ. ಅದರಿಂದ ವೇಗಿಗಳಿಗೆ ರಿವರ್ಸ್ ಸ್ವಿಂಗ್ ಪ್ರಯೋಗವು ಸುಲಭವಾಗುತ್ತದೆ. ಆದರೆ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಬಳಸಲಾಗುವ ಬಿಳಿ ಚೆಂಡಿಗೆ ಎಂಜಲು ಬಳಕೆಯಿಂದ ಹೆಚ್ಚು ವ್ಯತ್ಯಾಸವಾಗುವುದಿಲ್ಲ.

ಗಾಯ ಮತ್ತಿತರ ಕಾರಣಗಳಿಂದಾಗಿ ಅಲಭ್ಯರಾಗುವ ಆಟಗಾರರ ಬದಲಿಗೆ ಬೇರೆ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುವ(replacement rules in IPL 2025) ನಿಯಮಾವಳಿಯಲ್ಲಿ ಬಿಸಿಸಿಐ ಕೆಲ ಪ್ರಮುಖ ಪರಿಷ್ಕರಣೆಗಳನ್ನು ಮಾಡಿದೆ.

ಹೊಸ ನಿಯಮದ ಪ್ರಕಾರ ತಂಡಗಳು ಇನ್ನು ಯಾರನ್ನು ಬೇಕಾದರೂ ಬದಲಿ ಆಟಗಾರನಾಗಿ ತಂಡ ಸೇರ್ಪಡೆಗೊಳಿಸುವಂತಿಲ್ಲ. ಗಾಯ ಅಥವಾ ಬೇರಾವುದೇ ಕಾರಣದಿಂದ ಟೂರ್ನಿಯಿಂದ ಹೊರಬಿದ್ದ ಆಟಗಾರ ಪಡೆಯುವ ಸಂಭಾವನೆಗಿಂತ ಅಧಿಕ ಮೊತ್ತಕ್ಕೆ ಬದಲಿ ಆಟಗಾರನನ್ನು ಸೇರಿಸಿಕೊಳ್ಳುವಂತಿಲ್ಲ ಎಂದೂ ಬಿಸಿಸಿಐ ಈ ಬಾರಿ ನಿಯಮ ಪರಿಷ್ಕರಣೆ ಮಾಡಿದೆ.

ಐಪಿಎಲ್ನಲ್ಲಿ ಈ ಮುನ್ನ ಟೂರ್ನಿ ಆರಂಭಗೊಂಡ ನಂತರ ಪ್ರತಿ ತಂಡ ಆರಂಭಿಕ 7 ಲೀಗ್ ಪಂದ್ಯಗಳನ್ನು ಆಡುವವರೆಗೆ ಮಾತ್ರ ಬದಲಿ ಆಟಗಾರರನ್ನು ಸೇರಿಸಿಕೊಳ್ಳಲು ಅವಕಾಶವಿತ್ತು. ಅದನ್ನು ಈ ಬಾರಿ 12ನೇ ಲೀಗ್ ಪಂದ್ಯದವರೆಗೂ ವಿಸ್ತರಿಸಲಾಗಿದೆ. ಇದರಿಂದ ಆಟಗಾರನೊಬ್ಬ 12ನೇ ಲೀಗ್ ಪಂದ್ಯದ ವೇಳೆ ಗಾಯಗೊಂಡರೂ ಆತನ ಬದಲಿಗೆ ಬೇರೆ ಆಟಗಾರರನ್ನು ಸೇರಿಸಿಕೊಳ್ಳಲು ಅವಕಾಶ ಲಭಿಸಲಿದೆ.

Karnataka Bandh ಕರ್ನಾಟಕ ಬಂದ್‌ ದಿನ ಶಾಲಾ-ಕಾಲೇಜುಗಳಿಗೆ ರಜೆ ಇರತ್ತಾ, ಪರೀಕ್ಷೆ ಕಥೆ ಏನು? ಏನಿರುತ್ತೆ? ಏನಿರಲ್ಲ?

Minister KN Rajanna ಹನಿಟ್ರ್ಯಾಪ್ ಸದ್ದು; 48 ರಾಜಕಾರಣಿಗಳ ಪೆನ್‌ಡ್ರೈವ್ ಬಹಿರಂಗ? ತನಿಖೆಗೆ ಆದೇಶ

High court ಎದೆ ಮುಟ್ಟುವುದು, ಪೈಜಾಮದ ದಾರ ಕೀಳುವುದು ಅತ್ಯಾಚಾರವಲ್ಲ : ಹೈಕೋರ್ಟ್ ತೀರ್ಪು

TAGGED:Good news for bowlers: The rule of applying residue to cricket balls may be reintroduced
Share This Article
Facebook Twitter Copy Link Print
Previous Article ಪಿಜಿಗೆ ನುಗ್ಗಿ ಪ್ರೀತ್ಸೆ ಪ್ರೀತ್ಸೆ ಎಂದ ಯುವಕ, ಪಾಗಲ್ ಪ್ರೇಮಿಯ ರಂಪಾಟಕ್ಕೆ ಬೆಚ್ಚಿದ ಯುವತಿಯರು! ವಿಡಿಯೋ ವೈರಲ್
Next Article ಮಹಿಳೆ ಅಶ್ಲೀಲ ಚಿತ್ರ ವೀಕ್ಷಿಸಿದರೆ, ಸ್ವ-ಸುಖದಲ್ಲಿ ತೊಡಗಿದರೆ ಅದು ಗಂಡನ ಮೇಲಿನ ಕ್ರೌರ್ಯವಲ್ಲ: ಹೈಕೋರ್ಟ್ ಅಭಿಪ್ರಾಯ

Popular Posts

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

You Might Also Like

ಕರ್ನಾಟಕಪ್ರಮುಖ

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read
ಕರ್ನಾಟಕಪ್ರಮುಖ

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read
ಕರ್ನಾಟಕಪ್ರಮುಖ

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read
ಕರ್ನಾಟಕಪ್ರಮುಖ

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?