newsics.com
ತೆಲಂಗಾಣ: ಮಹಿಳಾ ಹಾಸ್ಟೆಲ್ನಲ್ಲಿ ರಹಸ್ಯ ಕ್ಯಾಮೆರಾವನ್ನು ಅಳವಡಿಸಿ ಬೆತ್ತಲೆ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಹಾಸ್ಟೆಲ್ ವಾರ್ಡನ್ನನ್ನು ಪೊಲೀಸರು ಬಂಧಿಸಿದ್ದಾರೆ.
ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಕಿಸ್ತರೆಡ್ಡಿಪೇಟೆಯಲ್ಲಿರುವ ಖಾಸಗಿ ಹಾಸ್ಟೆಲ್‌ನಲ್ಲಿ ಈ ಪ್ರಕರಣ ನಡೆದಿದೆ. ಮಹೇಶ್ವರ್ ರಾವ್ ಬಂಧಿತ ವಾರ್ಡನ್.
ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಹಾಸ್ಟೆಲ್‌ನಲ್ಲಿಯೇ ಈ ಘಟನೆ ನಡೆದಿದ್ದು, ಸ್ಥಳೀಯರಲ್ಲಿ ಭಾರೀ ಆತಂಕ ಮೂಡಿಸಿದೆ.
ವಿಲ್ಲಾ ಸಂಖ್ಯೆ 75ರಲ್ಲಿರುವ ಹಾಸ್ಟೆಲ್‌ನಲ್ಲಿ ಕ್ಯಾಮೆರಾ ಪತ್ತೆಯಾಗಿದೆ. ವಿದ್ಯಾರ್ಥಿಗಳ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಅಮೀನ್‌ಪುರ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಯಾರು ಏನು ಮಾಡುತ್ತಿದ್ದಾರೆಂದು ತಿಳಿಯುವ ಚಪಲ ಹೊಂದಿದ್ದ ಮಹೇಶ್ವರ್ ರಾವ್, ಹಾಸ್ಟೆಲ್ ಅಡುಗೆಮನೆಯಲ್ಲಿ ಕ್ಯಾಮೆರಾ ಅಳವಡಿಸಿದ್ದ. ಅದೂ ಸಾಲದು ಎಂಬಂತೆ ಹುಡುಗಿಯರ ಕೋಣೆಯಲ್ಲಿಯೂ ಕ್ಯಾಮೆರಾ ಅಳವಡಿಸಿದ್ದ.
ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಫೋನ್ ಚಾರ್ಜರ್ ಒಳಗೆ ರಹಸ್ಯ ಕ್ಯಾಮೆರಾಗಳನ್ನು ಮರೆಮಾಡಲಾಗಿತ್ತು. ಕ್ಯಾಮೆರಾ ಒಳಗೆ ವಿಡಿಯೋಗಳು ಇರುವುದು ಪ್ರಾಥಮಿಕ ತಪಾಸಣೆಯಲ್ಲಿ ತಿಳಿದುಬಂದಿದೆ.
ಚಾರ್ಜರ್ ಅನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Elephant hair style ತನ್ನ ಹೇರ್ ಸ್ಟೈಲ್’ನಿಂದಲೇ ಗಮನ ಸೆಳೆಯುತ್ತಿದೆ ಈ ದೇಗುಲದ ಆನೆ