newsics.com
ನಟ ದರ್ಶನ್‌ಗೆ ಮತ್ತೊಂದು ಬಿಗ್ ರಿಲೀಫ್ ಸಿಕ್ಕಿದೆ.. ಬೆಂಗಳೂರು ಬಿಟ್ಟು ಹೋಗದಂತೆ ಇದ್ದ ಷರತ್ತು ಸಡಿಲಿಕೆ ಆಗಿದೆ. ವಿದೇಶಕ್ಕೆ ಹೋಗುವುದಾದರೆ ಮಾತ್ರ ಕೋರ್ಟ್ ಅನುಮತಿ ಬೇಕು.. ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಆದೇಶ ಮಾಡಲಾಗಿದೆ. ಷರತ್ತು ಸಡಿಲಿಸುವಂತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ದರ್ಶನ್ ಮನವಿಗೆ ಸ್ಪಂದಿಸಿದ ಹೈಕೋರ್ಟ್ ಈ ಸಡಿಲಿಕೆ ನೀಡಿದೆ.
ನ್ಯಾ. ವಿಶ್ವಜಿತ್ ಶೆಟ್ಟಿ ಅವರಿಂದ ಆದೇಶ.. ಕೇವಲ ದರ್ಶನ್ ಗೆ ಮಾತ್ರ ಷರತ್ತು ಸಡಿಸಿ ಆದೇಶಿಸಿದ ಹೈಕೋರ್ಟ್.. ಸಿನಿಮಾ ನಟನಾಗಿದ್ದು ಚಿತ್ರಿಕರಣಕ್ಕಾಗಿ ಬೆಂಗಳೂರು ಬಿಟ್ಟು ಬೇರೆಡೆ ಹೋಗಲು ಅವಕಾಶಕ್ಕೆ ಮನವಿ ಮಾಡಿದ್ದ ದರ್ಶನ್ ಅವರಿಗೆ ಸದ್ಯ ಬೆಂಗಳೂರು ಬಿಟ್ಟು ಹೋಗಲು ಹೈಕೋರ್ಟ್ ಅವಕಾಶ ನೀಡಿದೆ.
ವಿದೇಶಕ್ಕೆ ಹೊಗಲು ಸೆಷನ್ಸ್ ಕೋರ್ಟ್ ಅನುಮತಿ ಅಗತ್ಯ, ವಿಚಾರಣೆ ವೇಳೆ ಸಿನಿಮಾ ಶೂಟಿಂಗ್ ವಿಚಾರ ಪ್ರಸ್ತಾಪಿಸಿದ್ದ ದರ್ಶನ್ ವಕೀಲರು, 8 ವಾರಗಳ ಹಿಂದೆ ನಿಲ್ಲಲು ಸಾಧವಿಲ್ಲ ಎಂದು ಹೇಳಿದ್ರು. ಈಗ ಸಿನಿಮಾ ಶೂಟಿಂಗ್ ಗಾಗಿ ಅವಕಾಶ ಕೇಳುತ್ತಿರುವುದು ಸರಿಯಲ್ಲ ಎಂದು ಎಸ್ಪಿಪಿ ಆಕ್ಷೇಪಿಸಿದ್ರು.. ಅಂತಿಮವಾಗಿ ಷರತ್ತು ಸಡಿಸಿಲಿ ಹೈಕೋರ್ಟ್ ಆದೇಶ ನೀಡಿದೆ.