Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Actor Dali- Dhanyata wedding ಮೈಸೂರಲ್ಲಿ ಸಪ್ತಪದಿ ತುಳಿದ ನಟ ಡಾಲಿ- ಧನ್ಯತಾ ಜೋಡಿ, ಮದುವೆ ಬಳಿಕ ಹೇಳಿದ್ದೇನು?
ಕರ್ನಾಟಕಪ್ರಮುಖಮನರಂಜನೆ

Actor Dali- Dhanyata wedding ಮೈಸೂರಲ್ಲಿ ಸಪ್ತಪದಿ ತುಳಿದ ನಟ ಡಾಲಿ- ಧನ್ಯತಾ ಜೋಡಿ, ಮದುವೆ ಬಳಿಕ ಹೇಳಿದ್ದೇನು?

Share
2 Min Read
SHARE

newsics.com

ಮೈಸೂರು: ನಟ ಡಾಲಿ ಧನಂಜಯ್ ಮತ್ತು ಧನ್ಯತಾ ಮದುವೆ ಸಮಾರಂಭ ಮೈಸೂರಿನ ವಸ್ತುಪ್ರದರ್ಶನ ಮೈದಾನದಲ್ಲಿ ಭಾನುವಾರ ಅದ್ಧೂರಿಯಾಗಿ ನೆರವೇರಿತು.

ಚಿತ್ರರಂಗದ ಹಲವು ಸೆಲೆಬ್ರಿಟಿಗಳು, ರಾಜಕಾರಣಿಗಳು ಮತ್ತು ಅಭಿಮಾನಿಗಳು ಆಗಮಿಸಿ ನವದಂಪತಿಗೆ ಶುಭ ಹಾರೈಸಿದರು.

ಸೆಂಚುರಿ ಸ್ಟಾರ್‌ ಶಿವರಾಜ್ ಕುಮಾರ್, ನಟ, ಶಾಸಕ ಸಾಧು ಕೋಕಿಲ, ಹಿರಿಯ ನಿರ್ದೇಶಕ ನಾಗಭರಣ, ಹಿರಿಯ ಕಲಾವಿದ ಮಂಡ್ಯ ರಮೇಶ್‌, ನಟ ಲೂಸ್‌ ಮಾದ, ನಟಿ ಸೋನು ಗೌಡ ಮತ್ತು ಸಿದ್ಲಿಂಗು ಪಾರ್ಟ್-2‌ ಚಿತ್ರತಂಡ, ತರುಣ್‌ ಸೋನಾಲ್‌, ಜೆಡಿಎಸ್‌ ಶಾಸಕ ಜಿ. ಟಿ. ದೇವೇಗೌಡ, ಅರಸೀಕೆರೆ ಶಾಸಕ ಶಿವಲಿಂಗೇ ಗೌಡ, ಶಾಸಕಿ ನಯನ ಮೋಟಮ್ಮ , ಸಚಿವ ಸತೀಶ್‌ ಜಾರಕಿಹೊಳಿ ಮತ್ತಿತರರು ಆಗಮಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಡಾಲಿ ಧನಂಜಯ್ ಮತ್ತು ಧನ್ಯತಾ ಜೋಡಿಗೆ ಶುಭಾಶಯ ಕೋರಿದರು.

ಸಪ್ತಪದಿ ತುಳಿದ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಡಾಲಿ- ಧನ್ಯತಾ ಜೋಡಿ, ಮೈಸೂರಿನಲ್ಲಿ ಬೆಳೆದ ಪ್ರತಿಯೊಬ್ಬರಿಗೂ, ಮೈಸೂರು ಒಂದು ಎಮೋಷನಲ್‌. ನನ್ನ ತಾಯಿಯ ನಂಬಿಕೆಯನ್ನು ಉಳಿಸಿಕೊಂಡಿದ್ದೇನೆ. ನನಗೆ ಜೀವನ ಕಟ್ಟಿಕೊಟ್ಟ ಮೈಸೂರಿನಲ್ಲೇ ಮದುವೆಯಾಗಿದ್ದಕ್ಕೆ ಬಹಳ ಖುಷಿಯಾಗಿದೆ. ಮೈಸೂರಿನ‌ ಸ್ನೇಹಿತರೆಲ್ಲರೂ ಬಂದು ಶುಭ ಹಾರೈಸಿದಕ್ಕೆ ಡಬಲ್‌ ಖುಷಿಯಾಗಿದೆ ಎಂದು ಡಾಲಿ ಧನಂಜಯ್‌ ಹೇಳಿದರು.

ಮದುವೆ ಸಂಭ್ರಮ ಚೆನ್ನಾಗಿ ನಡೆದಿದೆ. ಯಾವುದಾದರೂ ಸಣ್ಣ ಪುಟ್ಟ ತೊಂದರೆಗಳು ಆಗಿದ್ದರೆ ಕ್ಷಮೆ ಇರಲಿ. ವಿದ್ಯಾಪತಿ ದ್ವಾರದಿಂದ ಅಭಿಮಾನಿಗಳು ಬಂದು ಆಶೀರ್ವಾದ ಮಾಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದೆ. ನಮ್ಮ‌ ಮನೆಯವರು ಖುಷಿಯಾಗಿದ್ದಾರೆ. ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲೇ ಮದುವೆಗೆ ಬಂದಿದ್ದಾರೆ. ತುಂಬಾ ಸಮಯ ನಮಗಾಗಿ ಕಾದಿದ್ದಾರೆ. ಅಭಿಮಾನಿಗಳ ಪ್ರೀತಿ ದೊಡ್ಡದು ಎಂದರು ಡಾಲಿ.

ಅಭಿಮಾನಿಗಳಿಗೆ ಸಾಕಷ್ಟು ಗೌರವ ಕೊಡಬೇಕು. ನಾವು ನಿಗದಿಪಡಿಸಿದ ಸ್ಥಳದಲ್ಲಿ ಅವರನ್ನು ನೋಡಿ ಬಹಳ ಖುಷಿಯಾಯಿತು. ಚಿತ್ರರಂಗದ ಗೆಳೆಯರಿಗೂ ಧನ್ಯವಾದಗಳು. ಮದುವೆಯಿಂದ ನನಗೆ ಸಾಕಷ್ಟು ಜವಾಬ್ದಾರಿ ಹೆಚ್ಚಾಗಿದೆ. ಅಭಿಮಾನಿಗಳ ಮೇಲೆ ಗೌರವ ಇನ್ನೂ ಹೆಚ್ಚಿದೆ. ಈ ಜವಾಬ್ದಾರಿ ನಿಭಾಯಿಸಲೇಬೇಕು ಎಂದು ಹೇಳಿದರು.

ಮದುವೆ ಸಮಯದಲ್ಲಿ ಮಾಡಿದ ಎಲ್ಲಾ ಸಂಪ್ರದಾಯಗಳನ್ನು ನಾನು ಮಗುವಿನಂತೆ ಸಂಭ್ರಮಿಸಿದ್ದೇನೆ. ನನ್ನ ತಾಯಿಯ ನಂಬಿಕೆಯನ್ನು ನಾನು ಗೌರವಿಸಬೇಕು. ಮದುವೆ ಬಳಿಕ ಸ್ವಲ್ಪ ವಿರಾಮ ಇದ್ದೇ ಇರುತ್ತದೆ. ನಂತರ ಅವರವರು ಅವರ ವೃತ್ತಿ ಮಾಡ್ತಾರೆ. ನಾನು ಚಿತ್ರರಂಗದಲ್ಲಿ ಭಾಗಿಯಾಗುತ್ತೇನೆ ಎಂದರು.
ಧನ್ಯತಾ ಮಾತನಾಡಿ, ಅಭಿಮಾನಿಗಳ ಪ್ರೀತಿ ಕಂಡು ಮಾತೇ ಹೊರಡುತ್ತಿಲ್ಲ. ಅವರ ಪ್ರೀತಿಯನ್ನು ನೋಡಿ ನಾನು ತುಂಬಾ ಭಾವುಕಳಾದೆ. ನಮ್ಮಲ್ಲಿ ಯಾವುದೇ ಬದಲಾವಣೆ ಇಲ್ಲ. ನಮ್ಮ ಕುಟುಂಬ, ಅವರ ಕುಟುಂಬ ಎರಡೂ ಒಂದೇ. ಇಬ್ಬರೂ ತುಂಬಾ ಅನ್ಯೋನ್ಯತೆಯಿಂದ ಇರುತ್ತೇವೆ. ಎಲ್ಲವೂ ಚೆನ್ನಾಗಿ ಆಗಿದೆ ಎಂದು ಹೇಳಿದರು.

Relstionship ಗಂಡ-ಹೆಂಡತಿ ಸಂಬಂಧದಲ್ಲಿ ಬಿರುಕು ಇದ್ದರೆ ಈ ರೀತಿ ಮಾಡಿ

Relationship ಟಾಕ್ಸಿಕ್ ರಿಲೇಷನ್‌ಶಿಪ್‌ನಿಂದ ಹೊರಬರುವುದು ಹೇಗೆ?

TAGGED:Actor Dali- Dhanyatawhat said after the wedding?who was in Saptapadi in Mysore
Share This Article
Facebook Twitter Copy Link Print
Previous Article Drone hunting eagles ಗಿಡುಗ, ಹದ್ದುಗಳಿಂದ ಡ್ರೋನ್ ಬೇಟೆ: ಪೊಲೀಸರಿಂದ ಪಕ್ಷಿಗಳಿಗೆ ವಿಶೇಷ ತರಬೇತಿ, ವಿಡಿಯೋ‌ ನೋಡಿ
Next Article ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಭೀಕರ ಅಪಘಾತ: ಕಾರಿನ‌ ಮೇಲೇರಿ ನಿಂತ ಮತ್ತೊಂದು ಕಾರು!

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?