newsics.com
ಪ್ರಯಾಗ್‌ರಾಜ್: ಮಹಾ ಕುಂಭದಲ್ಲಿ ಪ್ರತಿದಿನ ಲಕ್ಷಾಂತರ ಭಕ್ತರು ಪುಣ್ಯಸ್ನಾನ ಮಾಡುತ್ತಿದ್ದಾರೆ. ಈ ಮಹಾ ಕುಂಭ ಫೆಬ್ರವರಿ 26ರವರೆಗೆ ಮುಂದುವರಿಯಲಿದೆ. ಸುಮಾರು 45 ಕೋಟಿ ಜನ ಪುಣ್ಯಸ್ನಾನ ಮಾಡುವ ನಿರೀಕ್ಷೆಯಿದೆ.
ಯಾವುದೋ ಕಾರಣಕ್ಕಾಗಿ ನಿಮಗೆ ಮಹಾ ಕುಂಭಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲವಾ? ಅಂತಹವರು ಮನೆಯಲ್ಲೂ ಕುಂಭ ಸ್ನಾನದ ಫಲವನ್ನು ಪಡೆಯಬಹುದು.
ಧರ್ಮಗ್ರಂಥಗಳಲ್ಲಿ ಹೇಳಿರುವಂತೆ, ಸ್ನಾನ ಮಾಡುವಾಗ ಮಂತ್ರವೊಂದನ್ನು ಪಠಿಸಿದರೆ ಮನೆಯಲ್ಲೇ ಕುಂಭ ಸ್ನಾನದ ಫಲ ಪಡೆಯಬಹುದು. ಆದರೆ ಇದಕ್ಕೆ ಮನಸ್ಸಿನಲ್ಲಿ ಪೂರ್ಣ ನಂಬಿಕೆ, ಭಕ್ತಿ ಇರಬೇಕು. ಸ್ನಾನ ಮಾಡುವಾಗ ಮೊದಲು ಗಂಗೆಯನ್ನು ಸ್ಮರಿಸಿಕೊಂಡು, ಮೈಮೇಲೆ ನೀರು ಹಾಕಿಕೊಳ್ಳುತ್ತಾ ಈ ಮಂತ್ರವನ್ನು ಪಠಿಸಬೇಕು.
ಗಂಗೇ ಚ ಯಮುನೇಚೈವ ಗೋದಾವರಿ ಸರಸ್ವತಿ ।
ನರ್ಮದಾ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು।।
ನಿಮಗೆ ನೆನಪಿರಲಿ:
ಮನೆಯಲ್ಲಿ ಕುಂಭ ಸ್ನಾನದ ಫಲ ಪಡೆಯಲು ಕೆಲವು ವಿಷಯಗಳನ್ನು ನೆನಪಿನಲ್ಲಿಡಬೇಕು. ಸ್ನಾನ ಮಾಡುವಾಗ ಸೋಪ್ ಅಥವಾ ಶಾಂಪೂ ಬಳಸಬೇಡಿ.
ಸ್ನಾನದ ನಂತರ ಸೂರ್ಯ ದೇವನಿಗೆ ಅರ್ಘ್ಯ ಕೊಡಿ, ತುಳಸಿ ಗಿಡಕ್ಕೆ ನೀರು ಹಾಕಿ.
ಮಹಾ ಕುಂಭದಲ್ಲಿ ಸ್ನಾನದ ನಂತರ ಮಾಡಬೇಕಾದ ಪುಣ್ಯಕಾರ್ಯ ದಾನ ಮಾಡುವುದು. ಆದ್ದರಿಂದ ನೀವು ಈ ಸ್ನಾನ ಮಾಡುವ ದಿನ ಅಗತ್ಯವಿರುವವರಿಗೆ ಬಟ್ಟೆ, ಆಹಾರ ಮುಂತಾದವುಗಳನ್ನು ದಾನ ಮಾಡಿ.
ಈ ಸ್ನಾನ ಮಾಡುವ ದಿನ ಸಾತ್ವಿಕ ಆಹಾರ ಸೇವಿಸಿ. ಅಂದರೆ ಈರುಳ್ಳಿ, ಬೆಳ್ಳುಳ್ಳಿ ಮುಂತಾದವುಗಳನ್ನು ತಿನ್ನಬೇಡಿ.
ಕುಂಭ ಸ್ನಾನದ ಫಲ ಪಡೆಯಲು ದೈಹಿಕವಾಗಿ, ಮಾನಸಿಕವಾಗಿ ಶುದ್ಧವಾಗಿರಿ. ಈ ದಿನ ಯಾರನ್ನೂ ಬೈಯಬೇಡಿ. ಯಾರ ಬಗ್ಗೆಯೂ ಕೆಟ್ಟದಾಗಿ ಯೋಚಿಸಬೇಡಿ.
Kichcha Sudeepa ಬಾಲಕನಿಗೆ ಸುದೀಪ್ ಕೊಟ್ಟ ಬ್ರೇಸ್‌ಲೆಟ್ ಬೆಲೆ ಎಷ್ಟು?
Divorce case..ಪೋಷಕರು ವಿಚ್ಛೇದನ ನೀಡಿದರೆ.. ಮಕ್ಕಳಿಗೆ ಕಾಡುತ್ತದೆ ಈ ನೋವು…