newsics.com
ಕೊಚ್ಚಿ: ದಕ್ಷಿಣ ಭಾರತದ ಖ್ಯಾತ ಯುವ ನಟಿ ನಿಖಿತಾ ನಯ್ಯಾರ್(21) ಅಪರೂಪದ ಕಾಯಿಲೆಯಿಂದ ಮೃತಪಟ್ಟಿದ್ದಾರೆ.
ಅತಿ ಚಿಕ್ಕ ವಯಸ್ಸಿಗೆ ಹಲವು ಸಾಧನೆಗಳನ್ನು ಮಾಡಿದ್ದ ನಟಿ ನಿಖಿತಾ ವಿರಳಾತಿವಿರಳ ಕಾಯಿಲೆಯಿಂದ ಬಳಲುತ್ತಿದ್ದರು. ನಿರಂತರವಾಗಿ ಚಿಕಿತ್ಸೆ ಪಡೆಯುತ್ತಿದ್ದರೂ, ಗುಣಮುಖರಾಗದೆ ಚಿಕ್ಕ ವಯಸ್ಸಿನಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಸೇಂಟ್ ತೆರೆಸಾಸ್ ಕಾಲೇಜಿನ ಮಾಜಿ ಅಧ್ಯಕ್ಷೆ ನಿಕಿತಾ ನಯ್ಯಾರ್ (21) ಎರಡನೇ ಶಸ್ತ್ರಚಿಕಿತ್ಸೆಯಾದ ವಾರದಲ್ಲೇ ಮೃತಪಟ್ಟರು. ಬಿ.ಎಸ್ಸಿ ಸೈಕಾಲಜಿ ವಿದ್ಯಾರ್ಥಿನಿಯಾಗಿದ್ದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.

ಕೊಲ್ಲಂ ಕರುನಾಗಪಳ್ಳಿ ಮೂಲದ ನಿಖಿತಾ, ಶಾಫಿ ನಿರ್ದೇಶನದ ಮೇರಿಕುಂಡೊರು ಕುಂಞಾಡು ಚಿತ್ರದಲ್ಲಿ ಬಾಲನಟಿಯಾಗಿ ನಟಿಸಿದ್ದರು. ವಿಲ್ಸನ್ಸ್ ಡಿಸೀಸ್ನಿಂದ ಬಳಲುತ್ತಿದ್ದ ಅವರಿಗೆ ಎರಡು ಬಾರಿ ಲಿವರ್ ಟ್ರಾನ್ಸ್ಪ್ಲಾಂಟ್ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಎರಡನೇ ಶಸ್ತ್ರಚಿಕಿತ್ಸೆಯಾದ ವಾರದಲ್ಲೇ ಅವರು ಕೊನೆಯುಸಿರೆಳೆದರು.
ನಿಖಿತಾ ಅವರಿಗೆ ತಾಯಿ ನಮಿತಾ ಮಾಧವನ್ ಕುಟ್ಟಿ (ಕಪ್ಪಾ ಟಿವಿ), ತಂದೆ ಡೋನಿ ಥಾಮಸ್ (ಯುಎಸ್ಎ) ಇದ್ದಾರೆ. ಸೋಮವಾರ ಬೆಳಿಗ್ಗೆ ಎಂಟರಿಂದ ಇಡಪಳ್ಳಿ ನೇತಾಜಿ ನಗರದಲ್ಲಿರುವ ಅವರ ಮನೆಯಲ್ಲಿ ಅಂತಿಮ ದರ್ಶನ ನಡೆಯಲಿದೆ. ಬಳಿಕ ಕೊಚ್ಚಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Monkeys attack | ಮಂಗಗಳ ದಾಳಿಗೆ ಟೆರೇಸ್ನಲ್ಲಿ ಓದುತ್ತಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಬಲಿ
Unified Pension Scheme ಏಪ್ರಿಲ್ 1ರಿಂದ ಏಕೀಕೃತ ಪಿಂಚಣಿ ಯೋಜನೆ ಜಾರಿ: ಕೇಂದ್ರ ಮಾಹಿತಿ
Tallest tower collapsed ವಿಜಯನಗರದಲ್ಲಿ ಕುಸಿದುಬಿದ್ದ ದೇಶದ ಅತಿ ಎತ್ತರದ ತಿರಂಗ ತನಿಖೆಗೆ ಸಚಿವ ಜಮೀರ್ ಆದೇಶ