newsics.com
ಬಿಗ್ಬಾಸ್ ಸೀಸನ್ 11ರಲ್ಲಿ ಹನುಮಂತು ಫಿನಾಲೆಗೆ ಬಂದಿದ್ದು ಮೀಸಲಾತಿ ಗಿಫ್ಟ್ ಎಂಬ ಹೇಳಿಕೆಯಿಂದ ಭಾರೀ ಟ್ರೋಲ್ ಆದ ಬೆನ್ನಲ್ಲಿಯೇ ನಟಿ ಹಂಸ ನಾರಾಯಣಸ್ವಾಮಿ ಕ್ಷಮೆ ಕೇಳಿದ್ದಾರೆ.
ಈ ಸಂದರ್ಶನದ ತುಣುಕು ವೈರಲ್ ಆಗ್ತಿದ್ದಂತೆ ನಟಿ ಹಂಸ ಸೆಲ್ಫಿ ವಿಡಿಯೋ ಮಾಡಿ ಕ್ಷಮೆ ಕೇಳಿದ್ದಾರೆ.
‘ನಮಸ್ತೆ, ನಾನು ನಿಮ್ಮ ಹಂಸ ನಾರಾಯಣ ಸ್ವಾಮಿ. ನಾನು ಒಂದು ಚಾನೆಲ್ನಲ್ಲಿ ಕೊಟ್ಟ ಇಂಟರ್ವ್ಯೂನಲ್ಲಿ ಒಂದು ಸ್ಟೇಟ್ಮೆಂಟ್ ತುಂಬಾ ಕಾಂಟ್ರವರ್ಶಿಯಲ್ ಆಗಿ ತಿರುವನ್ನು ಪಡೆದುಕೊಂಡಿದೆ. ಖಂಡಿತವಾಗ್ಲೂ ನನ್ನ ಮಾತಿನ ಅರ್ಥ ಅದಾಗಿರಲಿಲ್ಲ ಎಂದಿದ್ದಾರೆ.‘
‘ಕೆಲವರು ಅದನ್ನು ಬೇರೆ ರೀತಿ ಅರ್ಥೈಸಿಕೊಂಡು ಬೇರೆ ಬೇರೆ ತಿರುವುಗಳನ್ನು ಕೊಡ್ತಿದ್ದಾರೆ. ನಾನು ನಿಮ್ಮಲ್ಲಿ ಕೇಳ್ಕೊಳ್ತಿರೋದು ಇಷ್ಟೆ. ನನ್ನ ಮಾತಿನಿಂದ ಯಾರಿಗೆಲ್ಲ ಬೇಸರ ಆಗಿದ್ಯೋ ಅವರೆಲ್ಲರ ಕ್ಷಮೆ ಕೇಳುತ್ತೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ. ದೊಡ್ಮನಸು ಮಾಡಿ ಕ್ಷಮಿಸಿ. ಈ ವಿಷಯ ಇಲ್ಲೇ ಬಿಟ್ಬಿಡಿ ಎಂದು ಕೇಳ್ಕೊಳ್ತೀನಿ. ತುಂಬಾ ಧನ್ಯವಾದಗಳು. ಥ್ಯಾಂಕ್ಯೂ ಸೋ ಮಚ್’ ಎಂದು ನಟಿ ವಿಡಿಯೋದಲ್ಲಿ ಹೇಳಿದ್ದಾರೆ.
ನಟಿ ಹಂಸ ಸಹ ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಆಗಿದ್ದರು. ಆದರೆ ಕೆಲವೇ ವಾರಕ್ಕೆ ಎಲಿಮಿನೇಟ್ ಆಗಿ ಶೋನಿಂದ ಹೊರನಡೆದಿದ್ದರು. ಇದೀಗ ಹನುಮಂತ, ಮೋಕ್ಷಿತಾ, ಮಂಜು, ತ್ರಿವಿಕ್ರಮ್, ಭವ್ಯಾ ಮತ್ತು ರಜತ್ ಬಿಗ್ ಬಾಸ್ ಫಿನಾಲೆಗೆ ಎಂಟ್ರಿ ಕೊಟ್ಟಿದ್ದಾರೆ. ಹನುಮಂತನಿಗೆ ಹೊರಗೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಫಾಲೋವರ್ಸ್ ಇದ್ದಾರೆ. ಈ ಬಾರಿ ಹನುಮಂತು ಫಿನಾಲೆ ತಲುಪಿದ್ದಾರೆ. ಎಲ್ಲರಿಗಿಂತ ಮೊದಲೇ ಹನುಮಂತು ಟಾಸ್ಕ್ ಗೆದ್ದು ಫಿನಾಲೆಗೆ ಎಂಟ್ರಿ ಕೊಟ್ಟಿದ್ದರು.
ಹನುಮಂತನ ಫಿನಾಲೆ ಎಂಟ್ರಿ ಬಗ್ಗೆ ನಟಿ ಹಂಸ ಮಾತನಾಡಿದ್ದು, ಹನುಮಂತನ ಬಿಗ್ ಬಾಸ್ ಜರ್ನಿಯನ್ನು ಮೀಸಲಾತಿ ವ್ಯವಸ್ಥೆಗೆ ಹೋಲಿಕೆ ಮಾಡಿದ್ದರು. ಹನುಮಂತು ಫಿನಾಲೆ ಎಂಟ್ರಿ ಮೀಸಲಾತಿಗೆ ಸಿಕ್ಕ ಗಿಫ್ಟ್ ಇದ್ದಂತೆ ಎಂಬಂತೆ ನಟಿ ಹಂಸ ಮಾತಾಡಿದ್ದರು.
ಸಂದರ್ಶನವೊಂದರಲ್ಲಿ ಮಾತಾಡಿದ ಹಂಸ, ನಾನು ಬಿಗ್ಬಾಸ್ ಮನೆಯಲ್ಲಿದ್ದಾಗ ಧನರಾಜ್ ಮತ್ತು ಹನುಮಂತು ಇಬ್ಬರೂ ಯಾವುದೋ ಮೂಲೆಯಲ್ಲಿ ಕೂರ್ತಿದ್ರು. ಯಾರ ಜತೆ ಕೂಡ ಸರಿಯಾಗಿ ಬೆರೆಯುತ್ತಿರಲಿಲ್ಲ. ಟಾಸ್ಕ್ನಲ್ಲಿ ಸಹ ಅಷ್ಟಕ್ಕಷ್ಟೆ ಎಂಬಂತಿದ್ರು ಎಂದು ಹಂಸ ಹೇಳಿದ್ದಾರೆ.
ಹನುಮಂತ ತಮ್ಮ ಲೋಕದಲ್ಲಿದ್ರು ಸದಾ ಎಲ್ಲೋ ಕಳೆದುಹೋಗಿರುತ್ತಿದ್ದರು. ಆದರೆ ಈಗ ಹನುಮಂತು ಫಿನಾಲೆಗೆ ಬಂದಿದ್ದಾರೆ. ಸೈಲೆಂಟ್ ಆಗಿ ಇದ್ದುಕೊಂಡೇ ಅವರು ಇಲ್ಲಿವರೆಗೆ ಬಂದಿದ್ದಾರೆ, ಆತ ಅದೃಷ್ಟವಂತ ಎಂದಿದ್ದಾರೆ ಹಂಸ.
ಯಾವುದೇ ಶ್ರಮವಿಲ್ಲದೆ ಸುಲಭವಾಗಿ ಹನುಮಂತು ಫಿನಾಲೆ ತಲುಪಿದ್ದಾರೆ ಎಂಬರ್ಥದಲ್ಲಿ ನಟಿ ಹಂಸ ಮಾತನಾಡಿದ್ದಾರೆ. ಜನರಿಗೆ ಆತನ ಮುಗ್ಧತೆ ಇಷ್ಟ ಆಗಿರಬೇಕು. ಸಿಂಪಥಿ ಇಲ್ಲಿ ವರ್ಕ್ ಆಗಿರಬೇಕು ಎಂದು ಹಂಸ ಹೇಳಿದ್ದಾರೆ.
ಜನ ಯಾರನ್ನಾದರೂ ಇಷ್ಟಪಟ್ರೆ ಅವರನ್ನು ತಲೆ ಮೇಲೆ ಎತ್ತಿಕೊಂಡು ಕುಣಿಸ್ತಾರೆ. ಆತನ ಮುಗ್ಧತೆ ಜನರನ್ನು ಸೆಳೆದಿದೆ. ಇಲ್ಲಿ ಸಿಂಪಥಿ ಪ್ಲಸ್ ಆಗಿರಬಹುದು. ಯಾವುದೇ ರಿಯಾಲಿಟಿ ಶೋ ಆದ್ರೂ ಈ ರೀತಿ ಆಗುತ್ತೆ. ಬಡವರು, ಹಳ್ಳಿಯಿಂದ ಬಂದಿರುವವರು ಸುಲಭವಾಗಿ ಫಿನಾಲೆವರೆಗೂ ಹೋಗ್ತಾರೆ ಎಂದು ಹಂಸ ಅಸಹನೆ ವ್ಯಕ್ತಪಡಿಸಿದ್ದರು.
https://www.instagram.com/reel/DFRZkinP57P/?igsh=bWpiYjhreDQ0NGs3
Shivarajkumar return ಅಮೆರಿಕದಿಂದ ತವರಿಗೆ ಮರಳಿದ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ಗೆ ಅದ್ಧೂರಿ ಸ್ವಾಗತ
BIGG BOSS KANNADA 11: 5 ಕೋಟಿಗೂ ಹೆಚ್ಚು ವೋಟ್ ಪಡೆದ ಬಿಗ್ ಬಾಸ್ ಕನ್ನಡ ವಿನ್ನರ್ ಯಾರು ಗೊತ್ತಾ?