newsics.com
ಬಿಜಾಪುರ(ಛತ್ತೀಸ್ಗಢ): ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಗುರುವಾರ ನಡೆಸಿದ ಎನ್ಕೌಂಟರ್ನಲ್ಲಿ 12 ನಕ್ಸಲರು ಜೀವ ಕಳೆದುಕೊಂಡಿದ್ದಾರೆ.
ಬಿಜಾಪುರ ಮತ್ತು ತೆಲಂಗಾಣದ ಗಡಿಯಲ್ಲಿರುವ ಮೂರು ಜಿಲ್ಲೆಗಳ ನಕ್ಸಲರ ವಿರುದ್ಧ ಸೈನಿಕರು ಪ್ರಮುಖ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಛತ್ತೀಸ್ಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿ ಮತ್ತು ನಕ್ಸಲರ ನಡುವೆ ಎನ್ಕೌಂಟರ್ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
ಛತ್ತೀಸ್ ಗಢದ ಬಿಜಾಪುರದ ಕಾಡಿನಲ್ಲಿ ಬೆಳಗ್ಗೆ 9 ಗಂಟೆ ವೇಳೆಗೆ ಭದ್ರತಾ ಸಿಬ್ಬಂದಿಯ ಜಂಟಿ ತಂಡ ನಕ್ಸಲ್ ವಿರೋಧಿ ಕಾರ್ಯಾಚರಣೆ ಸಿದ್ಧವಾಗುತ್ತಿದ್ದಾಗಲೇ ಗುಂಡಿನ ಚಕಮಕಿ ನಡೆಯಿತು ಎಂದು ಅವರು ಹೇಳಿದ್ದಾರೆ.
ಎನ್ಕೌಂಟರ್ನಲ್ಲಿ 12 ನಕ್ಸಲರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನೂ ಎನ್ಕೌಂಟರ್ ಕಾರ್ಯಾಚರಣೆ ಮುಂದುವರಿದಿದೆ. ಎನ್ಕೌಂಟರ್ ಸ್ಥಳದಿಂದ 1 ಎಸ್ಎಲ್ಆರ್ ಮತ್ತು ಇತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮಗುವಿನ ರೂಮಿಗೆ ನುಗ್ಗಿ 1 ಕೋಟಿ ರೂ. ಕೇಳಿದ ಕಳ್ಳ… saif ali khan case
ಸೈಫ್ ಅಲಿಖಾನ್ ಮೇಲೆ ದಾಳಿ : ಕೊನೆಗೂ ಆರೋಪಿ ಸುಳಿವು ಪತ್ತೆ.. Saif ali khan case
Saif Ali Khan: ಡಾನ್ಸ್ ಮಾಡಲು ನಿರಾಕರಿಸಿದ್ದಕ್ಕೆ ಸೈಫ್ ಅಲಿ ಖಾನ್ ಮೇಲೆ ನಡೆದಿತ್ತು ಹಲ್ಲೆ