newsics.com
ಮುಂಬೈ : ಗುರುವಾರ (ಜನವರಿ 16) ಬೆಳಗಿನ ಜಾವ 2.30ರ ಸುಮಾರಿಗೆ ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಸೈಫ್ ಅಲಿಖಾನ್ ಮನೆಗೆ ನುಗ್ಗಿದ ದುಷ್ಕರ್ಮಿ 6 ಬಾರಿ ಚಾಕುವಿನಿಂದ ಇರಿದಿದ್ದಾನೆ.ಸದ್ಯ ಸೈಫ್ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಹಿಂದೆಯೂ ಸೈಫ್ ಎರಡು ಬಾರಿ ಇದೇ ರೀತಿಯ ಪುಂಡರ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಸೈಫ್ ಮೇಲಿನ ಚಾಕು ದಾಳಿಯ ಬೆನ್ನಲ್ಲೇ ನಟನ ಹಳೇ ಕಥೆ ಮತ್ತೆ ಮುನ್ನೆಲೆಗೆ ಬಂದಿದೆ.
ದೆಹಲಿಯ ನೈಟ್ ಕ್ಲಬ್ ಒಂದರಲ್ಲಿ ಸೈಫ್ ಮೇಲೆ ಹಲ್ಲೆ ನಡೆದಿತ್ತು. ನೇಹಾ ಧೂಪಿಯಾ ಅವರ ಪಾಡ್ಕಾಸ್ಟ್ ಶೋ ‘ನೋ ಫಿಲ್ಟರ್ ನೇಹಾ’ ಕಾರ್ಯಕ್ರಮದಲ್ಲಿ ಸೈಫ್ ಅವರೇ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.
‘ನಾನು ದೆಹಲಿಯ ನೈಟ್ಕ್ಲಬ್ನಲ್ಲಿ ಕುಳಿತಿದ್ದಾಗ ಒಬ್ಬ ಹುಡುಗ ನನ್ನ ಬಳಿಗೆ ಬಂದನು. ದಯವಿಟ್ಟು ನನ್ನ ಗೆಳತಿಯೊಂದಿಗೆ ನೃತ್ಯ ಮಾಡಿ. ಅದಕ್ಕೆ ನಾನು ಇಲ್ಲ ಅಂದೆ. ನನಗೆ ಈ ರೀತಿಯ ವಿಷಯಗಳು ಹೊರಗೆ ಇಷ್ಟವಾಗುವುದಿಲ್ಲ’ ಎಂದು ನಾನು ಮೃದುವಾಗಿ ಹೇಳಿದೆ.
ಆ ಬಳಿಕ ನನ್ನ ಮೇಲೆ ದೌರ್ಜನ್ಯ ಎಸಗಲು ಆರಂಭಿಸಿದರು. ವಿಸ್ಕಿ ಬಾಟಲಿಯಿಂದ ನನ್ನ ತಲೆಗೂ ಹೊಡೆದರು. ಆಗ ನನ್ನ ತಲೆಯಲ್ಲಿ ರಕ್ತ ಬರತೊಡಗಿತು. ಅಲ್ಲಿಂದ ವಾಶ್ ರೂಮಿಗೆ ಹೋದೆ. ಅವನೂ ವಾಶ್ ರೂಂ ಪ್ರವೇಶಿಸಿದ. ನನ್ನ ತಲೆಯಲ್ಲಿ ವಿಪರೀತ ರಕ್ತ ಸುರಿಯುತ್ತಿತ್ತು. ನೀರಿನಿಂದ ಸ್ವಚ್ಛಗೊಳಿಸುತ್ತಿರುವಾಗ, ನಾನು ಆ ಮನುಷ್ಯನಿಗೆ ಹೇಳಿದೆ, ನೀವು ಏನು ಮಾಡಿದ್ದೀರಿ ಎಂದು ನೋಡು. ಅವರು ತುಂಬಾ ಕೋಪಗೊಂಡರು. ಆತ ಮತ್ತೆ ನನ್ನ ಮೇಲೆ ಹಲ್ಲೆ ಮಾಡಿದ. ಅವನು ಹುಚ್ಚನಾಗಿದ್ದಾನೆ. ನನ್ನನ್ನು ಸಾಯಿಸುತ್ತೇನೆ ಎಂದಿದ್ದನು ಎಂದು ಸೈಫ್ ಘಟನೆಯನ್ನು ಹಂಚಿಕೊಂಡಿದ್ದರು.