newsics.com
ತುಮಕೂರು: ತುಮಕೂರಿನಲ್ಲಿ ಪಿಯು ವಿದ್ಯಾರ್ಥಿನಿ ಸ್ನೇಹಿತರ ಜೊತೆ ಮಾತನಾಡುವಾಗಲೇ ಹೃದಯಾಘಾತದಿಂದ ಹಠಾತ್ ಕುಸಿದು ಬಿದ್ದಿದ್ದಾನೆ.
ಗುಬ್ಬಿ ತಾಲೂಕು ನಿಟ್ಟೂರಿನ ವಿನಾಯಕ ಕಾಲೇಜಿನಲ್ಲಿ ಈ ದುರಂತ ನಡೆದಿದೆ. 17 ವರ್ಷದ ಶಮಂತ್ ಮೃತ ವಿದ್ಯಾರ್ಥಿ. ಪ್ರಥಮ ಪಿಯು ಓದುತ್ತಿದ್ದ ಶಮಂತ್, ಎಂದಿನಂತೆ ಇಂದು ಬೆಳಗ್ಗೆ ಕಾಲೇಜಿಗೆ ಬಂದಿದ್ದ. ಕಾಲೇಜು ಮುಂದೆ ಸ್ನೇಹಿತರ ಜೊತೆ ಮಾತನಾಡುವಾಗಲೇ ಕುಸಿದು ಬಿದ್ದಿದ್ದಾನೆ.
ಶಮಂತ್ ಕುಸಿದು ಬಿದ್ದಿದ್ದನ್ನು ನೋಡಿದ ಸಹಪಾಠಿಗಳು ಗಾಬರಿಯಾಗಿದ್ದಾರೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಮಾರ್ಗ ಮಧ್ಯೆ ಶಮಂತ್ ಉಸಿರು ಬಿಟ್ಟಿದ್ದಾರೆ. ಶಮಂತ್, ಸ್ನೇಹಿತರ ಜೊತೆ ಮಾತನಾಡುವಾಗಲೇ ಕುಸಿದು ಬಿದ್ದಿದ್ದು ಕಾಲೇಜು ವಿದ್ಯಾರ್ಥಿಗಳು ಬೆಚ್ಚಿ ಬೀಳುವಂತೆ ಮಾಡಿದೆ