newsics.com
ಮುಂಬೈ : ಮುಂಬೈನ ಬಾಂದ್ರಾದಲ್ಲಿರುವ ಸೈಫ್ ಅಲಿ ಖಾನ್ ಅವರ ಅಪಾರ್ಟ್ಮೆಂಟ್ಗೆ ಕಳ್ಳರು ನುಗ್ಗಿದ ಕೃತ್ಯಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಅನೇಕರಿಂದ ಹೇಳಿಕೆ ಪಡೆದುಕೊಳ್ಳುತ್ತಿದ್ದಾರೆ.
ಮಾಧ್ಯಮಗಳ ವರದಿಗಳ ಪ್ರಕಾರ, ಸೈಫ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಒಬ್ಬರು ಪೊಲೀಸರ ಎದುರು ಕೆಲವು ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಫೈರ್ ಎಕ್ಸಿಟ್ ಬಳಸಿಕೊಂಡು ಸೈಫ್ ಅಲಿ ಖಾನ್ ಅವರ ಮನೆಗೆ ಕಳ್ಳರು ನುಗ್ಗಿದರು. ಸೈಫ್ ಅಲಿ ಖಾನ್ ಪುತ್ರ ಜೇಹ್ ಅಲಿ ಖಾನ್ ಮಲಗಿದ್ದ ಕೋಣೆಗೆ ನುಗ್ಗಿದ ಕಳ್ಳನೊಬ್ಬ 1 ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟ ಎಂದು ನರ್ಸ್ ಹೇಳಿದ್ದಾರೆ.
ಆದರೆ ಅಷ್ಟು ಹಣವನ್ನು ನೀಡಲು ನರ್ಸ್ ನಿರಾಕರಿಸಿದರು. ಆಗ ಅವರ ಮೇಲೆ ಕಳ್ಳ ಅಟ್ಯಾಕ್ ಮಾಡಿದ. ಅದರಿಂದ ನರ್ಸ್ಗೆ ಸಾಕಷ್ಟು ಗಾಯಗಳಾದವು. ಚಾಕು ಮತ್ತು ಕೋಲನ್ನು ಆ ಖದೀಮ ಹಿಡಿದುಕೊಂಡಿದ್ದ. ಅಂದಾಜು 35 ವರ್ಷ ವಯಸ್ಸಿನ ಆ ವ್ಯಕ್ತಿಯ ಚಹರೆ ಹೇಗಿತ್ತು ಎಂಬುದನ್ನು ಪೊಲೀಸರ ಎದುರು ನರ್ಸ್ ಹೇಳಿದ್ದಾರೆ.