newsics.com
ಬೆಳಗಾವಿ : 2ನೇ ಹೆಂಡತಿಯನ್ನು ಬಿಟ್ಟು ತನ್ನ ಬಳಿಯೇ ಇರುವಂತೆ ಪೀಡಿಸುತ್ತಿದ್ದ ಮೊದಲ ಹೆಂಡ್ತಿಯನ್ನೇ ಪತಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಳಗಾವಿ (Belagavi) ಜಿಲ್ಲೆ ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ನಡೆದಿದೆ.
ಶಮಾ ರಿಯಾಜ್ ಪಠಾಣ್(25) ಕೊಲೆಯಾದ ಮೊದಲ ಹೆಂಡತಿ. ರಿಯಾಜ್ ಪಠಾಣ್(30) ಕೊಲೆ ಮಾಡಿದ ಪಾಪಿ ಗಂಡ.
ಎರಡನೇ ಹೆಂಡತಿ ಫರ್ಜಾನಾ ಪಠಾಣ್ ಮಾತು ಕೇಳಿ ರಿಯಾಜ್, ಮೊದಲ ಪತ್ನಿ ಶಮಾ ಮಲಗಿದ್ದಾಗ ಆಕೆಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆಗೈದಿದ್ದಾನೆ.
10 ವರ್ಷಗಳ ಹಿಂದೆ ಶಮಾಳೊಂದಿಗೆ ರಿಯಾಜ್ ಮದುವೆಯಾಗಿದ್ದ (Marriage). ಒಂದೂವರೆ ವರ್ಷದ ಹಿಂದೆ ಫರ್ಜಾನಾ ಜೊತೆಗೆ 2ನೇ ಮದುವೆಯಾಗಿದ್ದ. ಮೂರು ದಿನ ಮೊದಲ ಹೆಂಡತಿ, 4 ದಿನ 2ನೇ ಹೆಂಡತಿ ಮನೆಯಲ್ಲಿರುತ್ತಿದ್ದ. ಆದ್ರೆ ಶಮಾ 2ನೇ ಹೆಂಡತಿಯನ್ನು (Wife) ಬಿಟ್ಟು ತನ್ನ ಬಳಿಯೇ ಇರುವಂತೆ ಪದೇ ಪದೇ ಪೀಡಿಸುತ್ತಿದ್ದಳು. ಇದಕ್ಕೆ ಗಂಡ ಒಪ್ಪದೇ ಇದ್ದಿದ್ದಕ್ಕೆ ಶಮಾ ಮೇಂಟೆನೆನ್ಸ್ ಕೇಸ್ ಹಾಕುವುದಕ್ಕೆ ಪ್ಲ್ಯಾನ್ ಮಾಡಿಕೊಂಡಿದ್ದಳು ಎನ್ನಲಾಗಿದೆ. ಶಮಾ ತನ್ನ ವಿರುದ್ಧ ಕೇಸ್ ಹಾಕೋದಕ್ಕೆ ಪ್ಲ್ಯಾನ್ ಮಾಡಿದ್ದ ವಿಚಾರ ತಿಳಿದ ರಿಯಾಜ್ 2ನೇ ಹೆಂಡತಿಗೂ ಹೇಳಿದ್ದಾನೆ. ಬಳಿಕ ಫರ್ಜಾನಾ ಮಾತು ಕೇಳಿ ಶಮಾಳನ್ನ ಕೊಂದೇಬಿಟ್ಟಿದ್ದಾನೆ.