newsics.com
ಬೆಂಗಳೂರು: ಮಹಿಳೆಯರ ಮೂರು ಪಂದ್ಯಗಳ ಏಕದಿನ ಸರಣಿ ಶುರುವಾಗಿದೆ.
ಭಾನುವಾರ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಿದ್ದವು.ಈ ಪಂದ್ಯದಲ್ಲಿ ಭಾರತ ವನಿತೆಯರು ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾದರು.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ವನಿತೆಯರ ತಂಡ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 265 ರನ್ ಕಲೆ ಹಾಕಿದ್ದರು. ಸ್ಮೃತಿ ಮಂದಣ್ಣ ಶತಕ ಬಾರಿಸುವ ಮೂಲಕ ತಂಡದ ಗೆಲುವಿನ ನೆರವಾದರು.
ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 266 ರನ್‌ಗಳ ಟಾರ್ಗೆಟ್ ಬೆನ್ನಟ್ಟಿತ್ತು.37.4 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡ ದಕ್ಷಿಣ ಆಫ್ರಿಕಾ ತಂಡ 122 ರನ್ ಕಲೆ ಹಾಕಲಷ್ಟೇ ಶಕ್ತವಾಯಿತು.
ಭಾರತದ ಸ್ಪಿನ್ನರ್‌ಗಳಾದ ದೀಪ್ತಿ ಶರ್ಮಾ ಹಗೂ ಆಶಾ ಶೋಭನಾ ಸ್ಪಿನ್ ದಾಳಿಯ ವಿರುದ್ಧ ಸೌತ್ ಆಫ್ರಿಕಾ ಬ್ಯಾಟರ್‌ಗಳು ಅಬ್ಬರಿಸಲು ಸಾಧ್ಯವಾಗಲಿಲ್ಲ.
ಆಶಾ ಶೋಭನಾ 4 ವಿಕೆಟ್ ಪಡೆದು ಕೇವಲ 21 ರನ್ ನೀಡಿದರು. 2 ವಿಕೆಟ್ ಪಡೆದ ದೀಪ್ತಿ ಶರ್ಮಾ 10 ರನ್ ನೀಡಿದರು. ಈ ಮೂಲಕ ಭಾರತ ತಂಡ 143 ರನ್‌ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿತು.
ಇನ್ನು ದಕ್ಷಿಣ ಆಫ್ರಿಕಾ ಮಹಿಳಾ ತಂಡದ ಅಯಂಬೋಗ ಖಾಕಾ 10 ಓವರ್‌ಗಳ ಬೌಲಿಂಗ್ ಮಾಡಿ 47 ರ್ ನೀಡಿ 3 ವಿಕೆಟ್ ಪಡೆದರು. ಮಸಬಟಾ ಕ್ಲಾಸ್ 10 ಓವರ್‌ಗಳಲ್ಲಿ 51 ರನ್ ನಿಡಿ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ನೊಂದುಮಿಸೋ ಶಂಗಾಸೆ, ಅನ್ನೇರಿ ಡೆರ್ಕ್ಸೆನ್, ನಾನ್ಕುಲುಲೇಕೋ ಮ್ಲಾಬಾ ತಲಾ ಒಂದು ವಿಕೆಟ್ ಪಡೆದರು.
ಮೂರು ಪಂದ್ಯಗಳ ಏಕದಿನ ಸರಣಿ ಇದಾಗಿದ್ದು ಭಾರತ 1-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇನ್ನೂ ಎರಡನೇ ಪಂದ್ಯ ಜೂನ್ 19 ರಂದು ನಡೆಯಲಿದೆ.
ಬಾಂಗ್ಲಾದೇಶದ ವಿಕೆಟ್ ಪತನ: ಸ್ವಿಮ್ಮಿಂಗ್ ಪೂಲ್‌ಗೆ ಜಿಗಿದ ನೇಪಾಳಿ ಅಭಿಮಾನಿ!
ಐರ್ಲೆಂಡ್ ವಿರುದ್ಧ ಪ್ರಯಾಸದ ಗೆಲುವು; ಟಿ20 ವಿಶ್ವಕಪ್‌ನಿಂದ ಪಾಕ್ ನಿರ್ಗಮನ
ನಟಿ ಆಲಿಯಾ ಭಟ್ ಮತ್ತೊಂದು ಡೀಪ್ ಫೇಕ್ ವಿಡಿಯೋ ವೈರಲ್, ಕೋಟಿ ಕೋಟಿ ವೀಕ್ಷಣೆ
ಸಿಕ್ಕಾಪಟ್ಟೆ ಬೋಲ್ಡ್, ಪಡ್ಡೆ ಹುಡುಗರ ಹೃದಯ ಕದ್ದ ಚೈತ್ರಾ ಆಚಾರ್, ವಿಡಿಯೋ ನೋಡಿ