Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಖ್ಯಾತ ಜಾನಪದ ವಿದ್ವಾಂಸರಾದ ಡಾ.ಜಯಲಕ್ಷ್ಮೀ ಸೀತಾಪುರ ಇನ್ನಿಲ್ಲ
ಕರ್ನಾಟಕ

ಖ್ಯಾತ ಜಾನಪದ ವಿದ್ವಾಂಸರಾದ ಡಾ.ಜಯಲಕ್ಷ್ಮೀ ಸೀತಾಪುರ ಇನ್ನಿಲ್ಲ

Share
1 Min Read
SHARE

newsics.com

ಮೈಸೂರು: ಕರ್ನಾಟಕದ ಖ್ಯಾತ ಜಾನಪದ ವಿದ್ವಾಂಸರಾದ ಡಾ.ಜಯಲಕ್ಷ್ಮೀ ಸೀತಾಪುರ ಅಪಘಾತದಲ್ಲಿ ಸಾವನಪ್ಪಿದ್ದಾರೆ.

ಕಳೆದ ವಾರ ಅವರು ಬೆಂಗಳೂರಿಗೆ‌ ಕಾರಲ್ಲಿ ಹೊರಟಿದ್ದಾಗ ಇನ್ನೊಂದು ಕಾರು ಬಂದು‌ ಡಿಕ್ಕಿ ಹೊಡೆದ ಘಟನೆ ಮಂಡ್ಯದ ಬಳಿ ನಡೆದಿತ್ತು‌. ಗಾಯಗೊಂಡಿದ್ದ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಭಾನುವಾರ ಹೃದಯಾಘಾತದಿಂದ ನಿಧನರಾದರು ಎಂದು ಕುಟುಂಬದವರು ತಿಳಿಸಿದ್ದಾರೆ.

ಮೂಲತಃ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಸೀತಾಪುರದವರಾದ ಡಾ.ಜಯಲಕ್ಷ್ಮೀ ಅವರ ಪತಿ ಡಾ.ರಾಜಶೇಖರ್
ಜೆಎಸ್ಎಸ್ ಕಾನೂನು ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದು, ವಿದೇಶದಲ್ಲಿ ಇಬ್ಬರು ಪುತ್ರಿಯರು ಇದ್ದಾರೆ.

ಅವರ ಅಂತ್ಯಕ್ರಿಯೆ ಮಂಗಳವಾರ (ಜೂನ್ 18) ಮಧ್ಯಾಹ್ನ ಕುವೆಂಪು ನಗರದ ಕಾವೇರಿ ಶಾಲೆ ಹತ್ತಿರದ ಸ್ಮಶಾನದಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಡಾ.ಜಯಲಕ್ಷ್ಮೀ ಮೈಸೂರು ವಿಶ್ವವಿದ್ಯಾಲಯದಲ್ಲಿ ಜಾನಪದ ಎಂ.ಎ ಪದವಿ ಪಡೆದು, ಸಂಶೋಧನಾ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದರು. ನಂತರ ‘ಕನ್ನಡದಲ್ಲಿ ಐತಿಹಾಸಿಕ ಜಾನಪದ ಮಹಾಕಾವ್ಯಗಳು’ ಕುರಿತು ಪಿಎಚ್.ಡಿ ಪದವಿ ಪಡೆದರು. ಅಮೆರಿಕದ ಫೋರ್ಡ್ ಫೌಂಡೇಷನ್ ಫೆಲೋಶಿಪ್ ಗೆ ಆಯ್ಕೆಯಾಗಿದ್ದರು.

ನಂತರ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಜಾನಪದ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು.

ಮುದ್ದು ಮಾದಪ್ಪ ಪುರಸ್ಕಾರ, ಜಾನಪದ ಲೋಕ ಪ್ರಶಸ್ತಿ ಪುರಸ್ಕೃತರಾಗಿದ್ದ‌ ಡಾ.ಜಯಲಕ್ಷ್ಮೀ ಹಲವಾರು ವಿದ್ಯಾರ್ಥಿಗಳಿಗೆ ಪಿಎಚ್.ಡಿ ಅಧ್ಯಯನಕ್ಕೆ ಮಾರ್ಗದರ್ಶಕರಾಗಿದ್ದರು. ಇವರಿಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಜಿಶಂಪ ಪ್ರಶಸ್ತಿಯೂ ಲಭಿಸಿದೆ.

ಡಾ.ಪ್ರೀತಿ ಶುಭಚಂದ್ರ, ಡಾ.ಎಚ್.ಎಲ್.ಶೈಲಾ ಹಾಗೂ ಡಾ.ಎಚ್.ಗೌರಮ್ಮ ಅವರು ಸಂಪಾದಿಸಿದ ‘ಜಾನಪದ ಮಹಿಳಾಯಾನ’ ಕೃತಿಯನ್ನು ಅವರಿಗೆ ಸಮರ್ಪಿಸಲಾಗಿತ್ತು.

ಹುಡುಗಿ ವೇಷದಲ್ಲಿದ್ದಾಗ ತುಂಬಾ ಮುಜುಗರ ಆಗ್ತಿತ್ತು‌… ಎಲ್ಲರೂ ಅದನ್ನೇ ನೋಡ್ತಿದ್ರು…!

ಜುಲೈ 22ಕ್ಕೆ ಕೇಂದ್ರ ಬಜೆಟ್‌ ಮಂಡನೆ ಸಾಧ್ಯತೆ, ದಾಖಲೆ‌ ಮುರಿಯಲು ನಿರ್ಮಲಾ ಸೀತಾರಾಮನ್ ಸಜ್ಜು

ಹಾರ್ವರ್ಡ್ ವಿವಿ ಸಂಶೋಧಕರ ವರದಿಗೆ ಬೆಚ್ಚಿಬಿದ್ದ ಜಗತ್ತು: ನಮ್ಮ ನಡುವೆಯೇ ಅನ್ಯಗ್ರಹ ಜೀವಿಗಳ ವಾಸ!

TAGGED:#Renowned #folk scholar #Dr. Jayalakshmi Sitapur #passes away #newsics #karnataka #mysore
Share This Article
Facebook Twitter Copy Link Print
Previous Article ಸಾಗರ ಜೀವಿಗಳ ವಂಶಾಭಿವೃದ್ಧಿ: 2.15 ಲಕ್ಷ ಸಮುದ್ರ ಆಮೆ ಮರಿಗಳನ್ನು ಬಂಗಾಳ ಕೊಲ್ಲಿಗೆ ಬಿಟ್ಟ ತಮಿಳುನಾಡು
Next Article 80 ವರ್ಷದ ಅಜ್ಜನಿಗೆ 22 ವರ್ಷದ ಯುವತಿ ಮೇಲೆ ಪ್ರೀತಿ, ಸಂಸಾರ ಶುರು!

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeಕರ್ನಾಟಕ

Crime Case ಘೋರ ದುರಂತ; ಹೆಂಡತಿ, ಇಬ್ಬರು ಮಕ್ಕಳನ್ನು ಕೊಂದು ವ್ಯಕ್ತಿ ಆತ್ಮಹತ್ಯೆ; ಡೆತ್‌ನೋಟ್ ಪತ್ತೆ

1 Min Read
ಪ್ರಮುಖCrimeಕರ್ನಾಟಕ

Footpath Eviction ಪುಂಡರ ದೌರ್ಜನ್ಯ; ಜಿಬಿಎ ಅಧಿಕಾರಿಗಳ ಮೇಲೆ ಮಾರಣಾಂತಿಕ ದಾಳಿ, ಮಹಿಳಾ ಅಧಿಕಾರಿಗೆ ಪೆಪ್ಪರ್ ಸ್ಪ್ರೇ

2 Min Read
ಪ್ರಮುಖಕರ್ನಾಟಕ

DK Shivakumar ಡಿ.ಕೆ. ಶಿವಕುಮಾರ್ ಸಂಪುಟ ರೇಸ್; ಸಚಿವ ಸ್ಥಾನಕ್ಕಾಗಿ ಕ್ಯೂ ನಿಂತ ಶಾಸಕರು! ಯಾರಿಗೆ ಸಿಗಲಿದೆ ಸ್ಥಾನ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?