newsics.com
ನವದೆಹಲಿ: ಭಾರತೀಯ ರಾಷ್ಟ್ರೀಯ ಲೋಕದಳದ ಮುಖ್ಯಸ್ಥ ಮತ್ತು ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ(89) ಅವರು ಶುಕ್ರವಾರ ಗುರುಗ್ರಾಮದಲ್ಲಿ ಹೃದಯಾಘಾತದಿಂದ ನಿಧನರಾದರು.
ಪಕ್ಷದ ವಕ್ತಾರರು ಈ ಮಾಹಿತಿ ನೀಡಿದ್ದು, ವಯೋಸಹಜ ಸಮಸ್ಯೆಯಿಂದ ಓಂ ಪ್ರಕಾಶ್ ಚೌಟಾಲಾ ಅವರು ಬಳಲುತ್ತಿದ್ದರು. ಶುಕ್ರವಾರ ಗುರುಗ್ರಾಮದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಚೌಟಾಲಾ ಅವರು ಡಿಸೆಂಬರ್ 1989ರಿಂದ ಪ್ರಾರಂಭವಾಗಿ ದಾಖಲೆಯ ನಾಲ್ಕು ಅವಧಿಗೆ ಹರಿಯಾಣದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಅವರು ಕೊನೆಯ ಬಾರಿ ಅಂದರೆ 1999 ರಿಂದ 2005 ರವರೆಗೆ ಮುಖ್ಯಮಂತ್ರಿಯಾಗಿದ್ದರು.
ಕಳೆದ ಅಕ್ಟೋಬರ್ನಲ್ಲಿ ನಡೆದಿದ್ದ ಹರಿಯಾಣ ವಿಧಾನಸಭೆ ಚುನಾವಣೆ ವೇಳೆ ಚೌಟಾಲಾ ಅವರು ಬಹಿರಂಗವಾಗಿ ಕಾಣಿಸಿಕೊಂಡಿದ್ದರು. ಭಾರತದ ಮಾಜಿ ಉಪ ಪ್ರಧಾನಿ ಚೌಧರಿ ದೇವಿಲಾಲ್ ಅವರ ಪುತ್ರ.
C T Ravi ಕೋರ್ಟ್ ಹಾಲ್ನಲ್ಲಿ ಸಿ.ಟಿ ರವಿ ಕಣ್ಣೀರು – ಆದೇಶ ಕಾಯ್ದಿರಿಸಿದ ಕೊರ್ಟ್
Health Tips ಪುರುಷರ ಲೈಂಗಿಕ ಸಮಸ್ಯೆಗೆ ಈ ಎಣ್ಣೆ ಬಳಸಿದ್ರೆ ತಕ್ಷಣ ಒಳ್ಳೆಯ ರಿಸಲ್ಟ್ ಸಿಗುತ್ತೆ
house leased to 12 people ಒಂದೇ ಮನೆ 12 ಜನಕ್ಕೆ ಲೀಸ್: ಏನಿದು ಕೋಟಿ ವಂಚನೆ?
Basavaraja Horatti Clarification ಸಿ.ಟಿ ರವಿ ಬಳಸಿದ ಪದ ರೆಕಾರ್ಡ್ ಆಗಿಲ್ಲ : ಸಭಾಪತಿ ಬಸವರಾಜ ಹೊರಟ್ಟಿ ಸ್ಪಷ್ಟನೆ