newsics.com
ಮೈಸೂರು: ನಮ್ಮ ಅನ್ನದ ತಟ್ಟೆಗೆ ಕೈ ಹಾಕಿದರೆ ಕೈ ಕತ್ತರಿಸುತ್ತೇವೆ ಎಂದು ಹಿಂದುಳಿದ ಚರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಬಸವ ಜಯಮೃತ್ಯುಂಜಯ ಸ್ವಾಮೀಜಿಗೆ ಎಚ್ಚರಿಕೆ ನೀಡಿದ್ದಾರೆ.
ಮೀಸಲಾತಿ ಹೋರಾಟ ವಿಚಾರವಾಗಿ ಮೈಸೂರಿನಲ್ಲಿ ಮಾತನಾಡಿದ ಅವರು, ಜಯಮೃತ್ಯುಂಜಯ ಸ್ವಾಮೀಜಿ ಹೋರಾಟವನ್ನು ಖಂಡಿಸುತ್ತಿದ್ದೇವೆ. ಸ್ವಾಮೀಜಿಗಳು ರಾಜಕೀಯ ಪುಢಾರಿ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಜಯಮೃತ್ಯುಂಜಯ ಸ್ವಾಮೀಜಿ ಅವಹೇಳನಕಾರಿಯಾಗಿ ಮಾತನಾಡುತ್ತಾರೆ. ಅವರು ಸನ್ಯಾಸಿಯಾಗಿ ಒಂದು ಜಾತಿ ಪರವಾಗಿ ಕೆಲಸ ಮಾಡುವುದು ಸರಿಯಲ್ಲ. ಸ್ವಾಮೀಜಿಯಾಗಲು ನಾಲಾಯಕ್. ಕಾವಿ ಬಟ್ಟೆ ಬಿಚ್ವಿಟ್ಟು ಬರುವುದು ಉತ್ತಮ ಎಂದು ಕೆಎಸ್ ಶಿವರಾಮು ಹೇಳಿದ್ದಾರೆ.
ಕಾವಿ ಬಟ್ಟೆಗೆ ನಾವು ಗೌರವ ಕೊಡುತ್ತಾ ಇದ್ದೇವೆ. ಅದನ್ನು ಉಳಿಸಿಕೊಳ್ಳಿ. ಮೀಸಲಾತಿ ವಿಚಾರ ಸುಪ್ರೀಂ ಕೋರ್ಟ್ನಲ್ಲಿ ಇದೆ. ಸ್ವಾಮೀಜಿಯಾಗಿ ಹಿಂಸಾಚಾರಕ್ಕೆ ಕುಮ್ಮಕ್ಕು ಕೊಡುತ್ತಾ ಇದ್ದೀರಿ. ಇದೇನಾ ನಿಮ್ಮ ರೀತಿ ನೀತಿ? ಹಿಂದುಳಿದ ವರ್ಗಗಳು ವೀರಶೈವರು, ಲಿಂಗಾಯತರು ಒಂದಾಗಿ ಇದ್ದೇವೆ. ನಮ್ಮಗಳ ಮಧ್ಯೆ ಜಗಳ ತಂದು ಹಾಕುತ್ತಾ ಇದ್ದೀರಿ ಎಂದು ಶಿವರಾಮು ಕಿಡಿಕಾರಿದರು.
ಜಯಮೃತ್ಯುಂಜಯ ಸ್ವಾಮೀಜಿ ಬಿಜೆಪಿ ಏಜೆಂಟ್ ರೀತಿ ಕೆಲಸ ಮಾಡುತ್ತಿದ್ದಾರೆ. ಸಿಎಂ ಹುದ್ದೆಯಿಂದ ಸಿದ್ದರಾಮಯ್ಯರನ್ನು ಕೆಳಗಿಳಿಸಲು ಸುಪಾರಿ ಪಡೆದುಕೊಂಡಿದ್ದಾರೆ ಎಂದು ಶಿವರಾಮು ಆರೋಪಿಸಿದರು.
ಗಂಡು ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ: ಏರ್‌ಪೋರ್ಟ್ ಸಿಬ್ಬಂದಿ ವಿರುದ್ಧ ಪೋಕ್ಸೊ ಪ್ರಕರಣ ದಾಖಲು