newsics.com
ರಾಮನಗರ: ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಿಚಾರಣೆಗೆ ಹಾಜರಾಗದ ಪೊಲೀಸರ ವಿರುದ್ಧ ಆಕ್ರೋಶಗೊಂಡ ನ್ಯಾಯಾಧೀಶರು ಕೊಲೆ ಆರೋಪಿಗಳನ್ನೇ ಬಿಟ್ಟು ಕಳುಹಿಸಿದ್ದಾರೆ.
ಚಂದು, ಮುರಳಿ, ನಾಗೇಶ್ ಜೈಲಿನಿಂದ ಹೊರ ಬಂದ ಆರೋಪಿಗಳು. ರಾಮನಗರ ಹೊರವಲಯದಲ್ಲಿ 21 ವರ್ಷದ ಬಿಕಾಂ ವಿದ್ಯಾರ್ಥಿ ಪುನೀತ್ ಕೊಲೆ ಆಗಿತ್ತು
ನವೆಂಬರ್ 26 ರಂದು ಕೆಲ ವಿದ್ಯಾರ್ಥಿಗಳು ಬ್ಯಾಚುಲರ್ ಪಾರ್ಟಿಗಾಗಿ ರಾಮನಗರ ಹೊರವಲಯದಲ್ಲಿನ ರೆಸಾರ್ಟ್ಗೆ ಬಂದಿದ್ದರು. ಈ ವೇಳೆ ರೆಸಾರ್ಟ್ ಒಳಗೆ ಮೂವರು ಆರೋಪಿಗಳು ನುಗ್ಗಿದ್ದರು. ಎ1 ಚಂದು ಎಂಬಾತ ಪುನೀತ್ ಮೇಲೆ ಹಲ್ಲೆ ಮಾಡಿದ್ದ. ಬಳಿಕ ಮೂವರು ಸೇರಿಕೊಂಡು ಪುನೀತ್ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದರು. ಹಲ್ಲೆ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು.
ಹಲ್ಲೆ ಆರೋಪದಲ್ಲಿ ಚಂದ್ರು, ಮುರಳಿ ಮತ್ತು ನಾಗೇಶ್ನನ್ನು ರಾಮನಗರ ಗ್ರಾಮಾಂತರ ಪೊಲೀಸರು ಬಂಧಿಸಿದ್ದರು. ಆರೋಪಿಗಳನ್ನು ಕಸ್ಟಡಿಗೆ ಪಡೆಯಲು ಪೊಲೀಸರು ರಿಮ್ಯಾಂಡ್ (ಪೊಲೀಸ್ ಬಂಧನ ವಿಸ್ತರಣಾ) ಅರ್ಜಿಯನ್ನು ರಾಮನಗರದ ಸೀನಿಯರ್ ಸಿವಿಲ್ ನ್ಯಾಯಾಲಯಕ್ಕೆ ಸಲ್ಲಿಸಬೇಕಿತ್ತು.
ರಿಮ್ಯಾಂಡ್ ಅರ್ಜಿಯನ್ನು ಸಲ್ಲಿಸಲು ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಮತ್ತು ನ್ಯಾಯಾಲಯದ ಕಲಾಪ ಪ್ರಾರಂಭವಾದರೂ ಪಬ್ಲಿಕ್ ಪ್ರಾಸಿಕ್ಯೂಟರ್ ಹಾಗೂ ಪೊಲೀಸರು ಹಾಜರಾಗಲಿಲ್ಲ. ಇದರಿಂದ ಕೋಪಗೊಂಡು ತನಿಖೆ ಯಾಕೆ ಬೇಕು ಎಂದು ಕೊಲೆ ಆರೋಪ ಎದುರಿಸುತ್ತಿದ್ದ ಮೂವರನ್ನೂ ಬಿಟ್ಟು ಕಳುಹಿಸುವಂತೆ ನ್ಯಾಯಾಧೀಶ ಗುಲ್ಜಾರ್ ಲಾಲ್ ಡಿ ಮಹಾವರ್ಕರ್ ಅವರು ಡಿಸೆಂಬರ್ 6 ರಂದು ಆದೇಶ ಹೊರಡಿಸಿದರು.
ಇದೇ ವೇಳೆ, ಪೊಲೀಸರು ಅರ್ಜಿ ಸಲ್ಲಿಸಿದರೆ ಆಗ ಬಂಧಿಸುವಂತೆ ಆದೇಶಿಸಿದರು. ನ್ಯಾಯಾಲಯದ ಆದೇಶ ಸಿಕ್ಕ ಬೆನ್ನಲ್ಲೇ ಮೂವರು ಕೊಲೆ ಆರೋಪಿಗಳನ್ನು ರಾಮನಗರ ಜೈಲು ಅಧಿಕಾರಿಗಳು ಬಿಟ್ಟು ಕಳುಹಿಸಿದ್ದಾರೆ. ಜಾಮೀನಿಗೆ ಅರ್ಜಿ ಸಲ್ಲಿಸದೆಯೇ ಮೂವರು ಆರೋಪಿಗಳು ಜೈಲಿನಿಂದ ಹೊರಬಂದಿದ್ದಾರೆ. ನ್ಯಾಯಾದೀಶರ ಈ ಆದೇಶ ದೇಶದಲ್ಲೇ ಅತಿ ಅಪರೂಪ ಎನ್ನಲಾಗಿದೆ.
Richest King ಈತ ಅತಿ ಶ್ರೀಮಂತ ರಾಜ, 38 ವಿಮಾನ, 52 ಹಡಗು, 98 ಕೋಟಿ ಮೌಲ್ಯದ ವಜ್ರ, 300ಕ್ಕೂ ಹೆಚ್ಚು ಕಾರು!
Reels whim ರೀಲ್ಸ್ ಹುಚ್ಚಾಟ, ರೈಲಿನ ಬಾಗಿಲಿಗೆ ನೇತಾಡಿದ ಯುವತಿಗೇನಾಯ್ತು? ವೈರಲ್ ವಿಡಿಯೋ ನೋಡಿ…
Torture by wife ಬೆಂಗಳೂರಲ್ಲಿ ಮತ್ತೊಂದು ಘಟನೆ: ಪತ್ನಿ, ಮಾವನ ಕಾಟ ತಾಳಲಾರದೆ ಹೆಡ್ ಕಾನ್ಸ್ಟೆಬಲ್ ಆತ್ಮಹ*ತ್ಯೆ!