newsics.com
ಬೆಂಗಳೂರು: ನಮ್ಮ ಮೆಟ್ರೋದಲ್ಲೂ ವ್ಯಕ್ತಿಯೊಬ್ಬ ಭಿಕ್ಷೆ ಬೇಡಿರುವುದು ಬೆಳಕಿಗೆ ಬಂದಿದೆ.
ನಮ್ಮ ಮೆಟ್ರೋ ಟ್ರೈನ್‌ನಲ್ಲಿ ವಿಶೇಷಚೇತನ ವ್ಯಕ್ತಿ ಒಬ್ಬ ಸಹ ಪ್ರಯಾಣಿಕರ ಬಳಿ ಭಿಕ್ಷೆ ಬೇಡಿರುವ ಘಟನೆ ನಡೆದಿದೆ.
ಚೆಲ್ಲಘಟ್ಟದಿಂದ ವೈಟ್ಫೀಲ್ಡ್‌ವರೆಗೆ ಮೆಟ್ರೋ ಟ್ರೈನ್ ಸಂಚರಿಸುತ್ತಿತ್ತು ಈ ವೇಳೆ ಪ್ರಯಾಣಿಕರ ಸೋಗಿನಲ್ಲಿ ಬಂದಂತಹ ವಿಶೇಷ ಚೇತನ ವ್ಯಕ್ತಿ ಒಬ್ಬ ಸಹ ಪ್ರಯಾಣಿಕರ ಬಳಿ ಭಿಕ್ಷೆ ಬೇಡಿದ್ದಾನೆ.
ತನ್ನ ದೈಹಿಕ ಊನವನ್ನು ತೋರಿಸಿ ಭಿಕ್ಷಾಟನೆ ಮಾಡಿದ್ದನ್ನು ಕಂಡು ಪ್ರಯಾಣಿಕರು ದಂಗಾಗಿದ್ದಾರೆ. ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಟಿಕೆಟ್ ಪಡೆದು ಭಿಕ್ಷೆ ಬೇಡಿದ್ದು ಹಲವರ ಅಚ್ಚರಿಗೆ ಕಾರಣವಾಗಿದೆ. ಈ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈಗ ನಮ್ಮ ಮೆಟ್ರೋದಲ್ಲೂ ಭಿಕ್ಷಾಟನೆ ಶುರುವಾಯಿತಾ ಎಂದು ಪ್ರಶ್ನಿಸಿದ್ದಾರೆ.
ಗಂಡು ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ: ಏರ್‌ಪೋರ್ಟ್ ಸಿಬ್ಬಂದಿ ವಿರುದ್ಧ ಪೋಕ್ಸೊ ಪ್ರಕರಣ ದಾಖಲು
Women like being alone ರೊಮ್ಯಾನ್ಸ್ ಟೈಮ್… ಒಂಟಿತನದಲ್ಲೇ ಮಹಿಳೆಯರು ಪುರುಷರಿಗಿಂತ ಹೆಚ್ಚು ತೃಪ್ತಿ ಕಾಣುತ್ತಾರಂತೆ!