newsics.com
ಮುಂಬೈ: ಬುಧವಾರ ಭಾರೀ ಹೆಚ್ಚಳ ಕಂಡಿದ್ದ ಚಿನ್ನದ ಬೆಲೆ ಇವತ್ತು ಸ್ವಲ್ಪ ಇಳಿಕೆ ಆಗಿದೆ. ಆಭರಣ ಚಿನ್ನದ ಬೆಲೆ ಗ್ರಾಮ್ಗೆ 12 ರೂ.ನಷ್ಟು ಇಳಿದರೆ, ಅಪರಂಜಿ ಚಿನ್ನದ ಬೆಲೆ 16 ರೂ.ನಷ್ಟು ಕಡಿಮೆ ಆಗಿದೆ. ಬೆಳ್ಳಿ ಬೆಲೆ ಈ ವಾರ ಸ್ಥಿರತೆ ಕಾಯ್ದುಕೊಂಡಿದೆ.
ಮುಂಬೈ ಮೊದಲಾದ ಮಾರುಕಟ್ಟೆಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 7,093 ರೂ ಆಗಿದೆ. ಬೆಂಗಳೂರಿನಲ್ಲಿ 7,090 ರೂ ಇದೆ. ಜೈಪುರ್, ಲಕ್ನೋ ಮೊದಲಾದೆಡೆ 7,121 ರೂ ಇದೆ. ಕತಾರ್ ಮೊದಲಾದ ಕೆಲ ಅರಬ್ ದೇಶಗಳಲ್ಲೂ ಚಿನ್ನದ ಬೆಲೆಯಲ್ಲಿ ಏರಿಕೆ ಆಗಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್‌ನ 22 ಕ್ಯಾರಟ್ ಚಿನ್ನದ ಬೆಲೆ 70,930 ರೂ. ಇದೆ. 24 ಕ್ಯಾರಟ್‌ನ ಅಪರಂಜಿ ಚಿನ್ನದ ಬೆಲೆ 77,350 ರೂ. ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,950 ರೂ.ಇದೆ.
ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 70,900 ರುಪಾಯಿ ಆಗಿದೆ, 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ: 70,930 ರೂ. 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ: 77,350 ರೂ. ಇದೆ.
ಬೆಳ್ಳಿ ಬೆಲೆಯಲ್ಲಿ ಈ ವಾರ ಹೆಚ್ಚೇನೂ ಬದಲಾವಣೆ ಆಗಿಲ್ಲ. ಭಾರತದಲ್ಲಿ ಒಂದು ಗ್ರಾಮ್‌ಗೆ 89.50 ರೂ. ಮತ್ತು 98 ರೂ. ದರ ಹೊಂದಿದೆ. ಬೆಳ್ಳಿ ಬೆಲೆ 100 ಗ್ರಾಮ್ಗೆ 8,950 ರೂ. ಇದೆ.
Different Bakery ಈ ಬೇಕರಿ ಹೆಸರೇ ‘ಜುಲೈ 30’! ಇದರ ಹಿಂದಿದೆ ಕರಾಳ ನೆನಪು… ಏನದು?