newsics.com
ಜಾರ್ಖಂಡ್: ಲಿವ್ ಇನ್ ರಿಲೇಶನ್ ಶಿಪ್‌ನಲ್ಲಿದ್ದ ಗೆಳತಿಯ ಮೇಲೆಯೇ ಅತ್ಯಾಚಾರಗೈದು, ಬಳಿಕ 40-50 ತುಂಡುಗಳಾಗಿ ಕತ್ತರಿಸಿ ಕಾಡಲ್ಲಿ ಬಿಸಾಡಿರುವ ಘಟನೆ ಜಾರ್ಖಂಡ್‌ನ ಕುಂತಿ ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ನರೇಶ್ ಭೇಂಗ್ರಾ ಸಂಗಾತಿಯನ್ನು ಭೀಕರವಾಗಿ ಕೊಲೆಗೈದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನ.24 ರಂದು ಜೋರ್ಡಾಗ್ ಗ್ರಾಮದ ಬಳಿ ಬೀದಿ ನಾಯಿಯ ದೇಹದೊಂದಿಗೆ ಮಾನವನ ದೇಹದ ಅಂಗಾಂಗಗಳು ಪತ್ತೆಯಾಗಿದ್ದು, ಪರಿಶೀಲನೆ ನಡೆಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ.
ಆರೋಪಿಯು ತನ್ನ ಗೆಳತಿಯೊಂದಿಗೆ ತಮಿಳುನಾಡಿನಲ್ಲಿ 2 ವರ್ಷಗಳ ಕಾಲ ಲಿವ್ ಇನ್ ರಿಲೇಶನ್ ಶಿಪ್‌ನಲ್ಲಿದ್ದ. ಅಲ್ಲಿಂದ ಜಾರ್ಖಂಡ್‌ನ ಖುಂಟಿಗೆ ಬಂದಿದ್ದ. ಆತ ತನ್ನ ಗೆಳತಿಗೆ ತಿಳಿಸದೇ ಬೇರೊಂದು ಮದುವೆಯಾಗಿದ್ದ. ಅದಾದ ಸ್ವಲ್ಪ ದಿನಗಳ ನಂತರ ಸಂತ್ರಸ್ತೆ ತನ್ನ ಗೆಳೆಯನ ಭೇಟಿಗಾಗಿ ಜಾರ್ಖಂಡ್‌ಗೆ ಹೋಗಿದ್ದಳು. ಇದೇ ಕೊಲೆಗೆ ಕಾರಣವಾಗಿದೆ.
ನ.8 ಜಾರ್ಖಂಡ್‌ಗೆ ಬಂದಿಳಿದಳು. ಮನೆಯಲ್ಲಿ ಹೆಂಡತಿಯಿದ್ದ ಕಾರಣ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಲು ಆರೋಪಿ ತಯಾರಿರಲಿಲ್ಲ. ಹಾಗಾಗಿ ಆಟೋರಿಕ್ಷಾದಲ್ಲಿ ಆಕೆಯನ್ನು ಕುಂತಿಗೆ ಕರೆದೊಯ್ದು ಮನೆಯ ಸಮೀಪ ನಿಲ್ಲಿಸಿ, ತಾನು ಮರಳಿ ಬರುವುದಾಗಿ ತಿಳಿಸಿ ಮನೆ ಕಡೆಗೆ ಹೋಗಿದ್ದಾನೆ. ಮನೆಯಿಂದ ಮರಳುವಾಗ ಆಯುಧಗಳೊಂದಿಗೆ ಹಿಂದಿರುಗಿದ್ದಾನೆ. ಆಕೆಯ ಮೇಲೆ ಆತ್ಯಾಚಾರ ಎಸಗಿ, ಬಳಿಕ ಕತ್ತು ಹಿಸುಕಿ ಸಾಯಿಸಿದ್ದಾನೆ. ನಂತರ ದೇಹವನ್ನು 40 ರಿಂದ 50 ತುಂಡುಗಳಾಗಿ ಕತ್ತರಿಸಿ ಬಿಸಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಂತಿ ಪೊಲೀಸ್ ವರಿಷ್ಠಾಧಿಕಾರಿ ಅಮನ್ ಕುಮಾರ್ ಮಾಹಿತಿ ಪ್ರಕಾರ, ಆರೋಪಿ ತಮಿಳುನಾಡಿನ ಮಾಂಸದಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಕೋಳಿಯನ್ನು ಕತ್ತರಿಸುವುದರಲ್ಲಿ ನಿಪುಣನಾಗಿದ್ದ. ನ.24 ರಂದು ಜೋರ್ಡಾಗ್ ಗ್ರಾಮದ ಬಳಿ ಬೀದಿ ನಾಯಿಯ ಕಳೇಬರದೊಂದಿಗೆ ಕೈಯೊಂದು ಕಾಣಿಸಿಕೊಂಡಿದ್ದು, ನಂತರ ಪೊಲೀಸರ ಪರಿಶೀಲನೆಯ ಬಳಿಕ ಹಲವು ಭಾಗಗಳನ್ನು ಪತ್ತೆಹಚ್ಚಿದ್ದಾರೆ ಎಂದು ತಿಳಿಸಿದರು.
Gold and Silver Price ಚಿನ್ನ ತುಸು ಅಗ್ಗ, ಬೆಳ್ಳಿ ಬೆಲೆಯಲ್ಲಿಲ್ಲ ವ್ಯತ್ಯಾಸ
Shabarimale Ayyappa ಅಯ್ಯಪ್ಪ ಸ್ವಾಮಿ ಮೆಟ್ಟಿಲ ಮೇಲೆ 23 ಪೊಲೀಸರ ಫೋಟೋಶೂಟ್: ಹೈಕೋರ್ಟ್‌ಗೆ ಇಂದು ವರದಿ ಸಲ್ಲಿಕೆ
Cabinet Reshuffle ಸಂಪುಟಕ್ಕೆ ಸದ್ಯದಲ್ಲೇ ಭಾರೀ ಸರ್ಜರಿ, ಯಾರ‌್ಯಾರಿಗೆ ಕೊಕ್, ಯಾರ‌್ಯಾರಿಗೆ ಲಕ್?
Different Bakery ಈ ಬೇಕರಿ ಹೆಸರೇ ‘ಜುಲೈ 30’! ಇದರ ಹಿಂದಿದೆ ಕರಾಳ ನೆನಪು… ಏನದು?