Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Shabarimale Ayyappa ಅಯ್ಯಪ್ಪ ಸ್ವಾಮಿ ಮೆಟ್ಟಿಲ ಮೇಲೆ 23 ಪೊಲೀಸರ ಫೋಟೋಶೂಟ್: ಹೈಕೋರ್ಟ್‌ಗೆ ಇಂದು ವರದಿ ಸಲ್ಲಿಕೆ
ದೇಶಪ್ರಮುಖವೈರಲ್

Shabarimale Ayyappa ಅಯ್ಯಪ್ಪ ಸ್ವಾಮಿ ಮೆಟ್ಟಿಲ ಮೇಲೆ 23 ಪೊಲೀಸರ ಫೋಟೋಶೂಟ್: ಹೈಕೋರ್ಟ್‌ಗೆ ಇಂದು ವರದಿ ಸಲ್ಲಿಕೆ

Share
1 Min Read
SHARE

newsics.com

ಶಬರಿಮಲೆ: ಶ್ರೀ ಅಯ್ಯಪ್ಪ ಸನ್ನಿಧಾನದ 18 ಮೆಟ್ಟಿಲಲ್ಲಿ ನಿಂತು ಫೋಟೋ ತೆಗೆಸಿಕೊಂಡ 23 ಪೊಲೀಸ್‌ ಅಧಿಕಾರಿಗಳಿಗೆ ಶಿಸ್ತಿನ ಕ್ರಮವಾಗಿ ಕಠಿಣ ತರಬೇತಿ ನೀಡುವ ಬಗ್ಗೆ ಎಡಿಜಿಪಿ ಎಸ್‌. ಶ್ರೀಜಿತ್‌ ಆದೇಶ ಹೊರಡಿಸಿದ್ದಾರೆ.

ಪೊಲೀಸರ ವಿರುದ್ಧ ಕೈಗೊಂಡಿರುವ ಕ್ರಮಗಳ ಕುರಿತು ತಿಳಿಸಿ ಎಡಿಜಿಪಿ ಗುರುವಾರ (ನ.28) ಹೈಕೋರ್ಟ್‌ಗೆ ವರದಿ ಸಲ್ಲಿಸಲಿದ್ದಾರೆ.

ಒಂದನೆ ಹಂತದ ಕರ್ತವ್ಯ ಮುಗಿಸಿದ ಎಸ್‌ಎಪಿ ಶಿಬಿರದ ಪೊಲೀಸರು ಕರ್ತವ್ಯದ ಕೊನೆಯ ದಿನವಾದ ಸೋಮವಾರ 18 ಮೆಟ್ಟಿಲುಗಳಲ್ಲಿ ನಿಂತು ಫೋಟೊ ತೆಗೆಸಿಕೊಂಡಿದ್ದರು. ಪೊಲೀಸರು ತೆಗೆಸಿಕೊಂಡಿದ್ದ ಫೋಟೋ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ವ್ಯಾಪಕ ಟೀಕೆಗೊಳಗಾಗಿತ್ತು.

ಹೈಕೋರ್ಟ್‌ ಮಧ್ಯ ಪ್ರವೇಶಿಸಿ ಘಟನೆ ಕುರಿತು ಶಬರಿಮಲೆ ಸಮನ್ವಯದ ಉಸ್ತುವಾರಿ ಹೊತ್ತಿದ್ದ ಎಡಿಜಿಪಿ ಅವರಿಂದ ವಿವರಣೆ ಕೇಳಿತ್ತು. ಎಡಿಜಿಪಿ ಸನ್ನಿಧಾನದ ಭದ್ರತೆಯ ಉಸ್ತುವಾರಿ ವಹಿಸಿರುವ ಶಬರಿಮಲೆ ವಿಶೇಷ ಅಧಿಕಾರಿ ಎಸ್‌ಪಿ ಕೆ.ಇ.ಬೈಜು ಅವರಿಂದ ವಿವರಣೆ ಕೇಳಿದ್ದರು.

ಶಬರಿಮಲೆಯಿಂದ ಇವರನ್ನು ಮನೆಗೆ ಹೋಗಲು ಬಿಡದೆ ಕಣ್ಣೂರಿನ ಕೆಎಪಿ-4 ಕ್ಯಾಂಪ್‌ನಲ್ಲಿ ಕಠಿಣ ತರಬೇತಿ ನೀಡಲಾಗುವುದು. ಮುಂದಿನ ಕ್ರಮಗಳ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.

18 ಮೆಟ್ಟಿಲಲ್ಲಿ ಫೋಟೊ ತೆಗೆಯಬಾರದು ಎಂದು ನಮಗೆ ತಿಳಿದಿರಲಿಲ್ಲ. ಇದು ಆಚಾರದ ಉಲ್ಲಂಘನೆ ಎಂಬುದು ಗೊತ್ತಿರಲಿಲ್ಲ ಎಂದು ಪೊಲೀಸರು ವಿವರಣೆ ನೀಡಿದ್ದರು. ಆದರೆ ಈ ಸ್ಪಷ್ಟನೆಯನ್ನು ಪೊಲೀಸ್‌ ಕೇಂದ್ರ ಕಚೇರಿ ತಿರಸ್ಕರಿಸಿದೆ.

ಸನ್ನಿಧಾನದಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಪೊಲೀಸರಿಗೆ ಇಂತಹ ವಿಷಯಗಳು ಗೊತ್ತಿರಬೇಕು ಎಂದು ಉನ್ನತ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಯಾರಿಗೂ ಅನುಮತಿಯಿಲ್ಲ:

ಪವಿತ್ರ ಇರುಮುಡಿಯಿಲ್ಲದೆ ಯಾರೂ 18ನೇ ಮೆಟ್ಟಿಲು ಏರುವಂತಿಲ್ಲ. ಪಂದಳಂ ರಾಜನ ಪ್ರತಿನಿಧಿಗೆ ಮಾತ್ರ ಇರುಮುಡಿ ಇಲ್ಲದೆ 18 ಮೆಟ್ಟಿಲು ಏರುವ ಹಕ್ಕಿದೆ. ಶಬರಿಮಲೆಯಂತೆ 18 ಮೆಟ್ಟಿಲು ಪವಿತ್ರವೆಂದು ಪರಿಗಣಿಸಲ್ಪಟ್ಟಿದೆ. ಶಬರಿಮಲೆಯ ಮುಖ್ಯ ಅರ್ಚಕರು ಸಹಿತ ಎಲ್ಲರೂ ಅಯ್ಯಪ್ಪನಿಗೆ ನಮಿಸಿಕೊಂಡು ಹಿಂದಕ್ಕೆ ಹೆಜ್ಜೆಯಿಡುತ್ತಾ 18 ಮೆಟ್ಟಿಲು ಇಳಿಯುತ್ತಾರೆ. ಭಕ್ತರನ್ನು 18 ಮೆಟ್ಟಿಲು ದಾಟಿಸಲು ಮೆಟ್ಟಿಲುಗಳ ಬದಿಗೆ ನಿಂತು ಪೊಲೀಸರು ಸಹಾಯ ಮಾಡುತ್ತಾರೆ. ಸನ್ನಿಧಾನದಲ್ಲಿ ಛಾಯಾಗ್ರಹಣವನ್ನು ನಿಷೇಧಿಸಲಾಗಿದೆ.

Different Bakery ಈ ಬೇಕರಿ ಹೆಸರೇ ‘ಜುಲೈ 30’! ಇದರ ಹಿಂದಿದೆ ಕರಾಳ ನೆನಪು… ಏನದು?

prisoner: ಜೈಲಿನಿಂದ ಹೊರಬಂದು ಗೇಟ್ ಮುಂದೆ ಡ್ಯಾನ್ಸ್ ಮಾಡಿದ ಖೈದಿ!

B.V Subbarao No More: ಮಲೆನಾಡಿನ ಮಿಡಿ ಮಾವು ತಜ್ಞ ಬಿ.ವಿ. ಸುಬ್ಬರಾವ್ ಇನ್ನಿಲ್ಲ

ನಾನ್ ವೆಜ್ ತಿನ್ನಬೇಡ ಎಂದಿದ್ದಕ್ಕೆ ಏರ್ ಇಂಡಿಯಾ ಪೈಲಟ್ ಆತ್ಮಹತ್ಯೆ!

TAGGED:Photo shoot of 23 policemen on Ayyappa Swamy steps: Report submitted to High Court today
Share This Article
Facebook Twitter Copy Link Print
Previous Article Different Bakery ಈ ಬೇಕರಿ ಹೆಸರೇ ‘ಜುಲೈ 30’! ಇದರ ಹಿಂದಿದೆ ಕರಾಳ ನೆನಪು… ಏನದು?
Next Article Cabinet Reshuffle ಸಂಪುಟಕ್ಕೆ ಸದ್ಯದಲ್ಲೇ ಭಾರೀ ಸರ್ಜರಿ, ಯಾರ‌್ಯಾರಿಗೆ ಕೊಕ್, ಯಾರ‌್ಯಾರಿಗೆ ಲಕ್?

Popular Posts

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

Dharmasthala Case ಎಸ್ಐಟಿ ರಚನೆಯಾದಾಗ ವೀರೇಂದ್ರ ಹೆಗ್ಗಡೆ ಜೈಲಿಗೆ ಹೋಗ್ತಾರೆಂದು ಬುರುಡೆ ಗ್ಯಾಂಗ್ ಸಂಭ್ರಮಿಸಿತ್ತು: ಚಿನ್ನಯ್ಯ

1 Min Read

ಧರ್ಮದ ಕಾರಣಕ್ಕೆ ಜಾಬ್ ರಿಜೆಕ್ಟ್: ಸೋಷಿಯಲ್ ಮೀಡಿಯಾದಲ್ಲಿ ಭಯಂಕರ ಚರ್ಚೆ!

1 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read
ಕರ್ನಾಟಕಪ್ರಮುಖ

ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಯತ್ನ

1 Min Read
ಕರ್ನಾಟಕಪ್ರಮುಖ

ಧಾರವಾಡ ಜೈಲು ಅಧಿಕಾರಿ ಆತ್ಮಹತ್ಯೆ: ಡಿಜಿಪಿ ಅಲೋಕ್ ಕುಮಾರ್ ಕಾರಣ ಎಂದು ಆರೋಪ

1 Min Read
ದೇಶಪ್ರಮುಖ

ಆಪರೇಷನ್​ಗೆ ದುಡ್ಡು ಕೊಟ್ಟಿಲ್ಲವೆಂದು ಬಾಲಕಿಯ ಕಾಲನ್ನೇ ಮುರಿದ ವೈದ್ಯರು?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?