newsics.com
ನವದೆಹಲಿ : ಜೈಲಿನಿಂದ ಬಿಡುಗಡೆಯಾದ ಖುಷಿಯಲ್ಲಿ ಕೈದಿಯೊಬ್ಬ ಜೈಲಿನ ಹೊರಗೆ ಗೇಟ್ ಮುಂದೆ ಡ್ಯಾನ್ಸ್ ಮಾಡಿದ್ದಾನೆ. ಇದನ್ನು ನೋಡಿದ ಸ್ಥಳೀಯರು ಮತ್ತು ಜೈಲು ಸಿಬ್ಬಂದಿ ಕೂಡ ಆಶ್ಚರ್ಯಚಕಿತರಾದರು. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ಕನೌಜ್ ನಲ್ಲಿ ಈ ವಿಚಿತ್ರ ಘಟನೆ ನಡೆದಿದೆ.. 1,000 ದಂಡ ಕಟ್ಟದ ಯುವಕನಿಗೆ ಜೈಲು ಶಿಕ್ಷೆಯಾಗಿತ್ತು.ಈತ ಇತ್ತೀಚೆಗೆ ಬಿಡುಗಡೆಯಾದ. ಜೈಲಿನಿಂದ ಹೊರಬಂದ ಬಳಿಕ ಯುವಕ ಖುಷಿಯಿಂದ ಕುಣಿದಾಡಿದ್ದಾನೆ. ಜೈಲು ಸಿಬ್ಬಂದಿ ಕೂಡ ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ.
ಜೈಲಿನ ಮುಂದೆ ಡ್ಯಾನ್ಸ್ ಮಾಡುತ್ತಿದ್ದ ಯುವಕನ ಹೆಸರು ಶಿವ ನಗರ ಎನ್ನಲಾಗಿದೆ. ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಯುಪಿ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ನ್ಯಾಯಾಲಯ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ. 1000 ದಂಡ ವಿಧಿಸಲಾಗಿದೆ. ಆದರೆ, ದಂಡ ಕಟ್ಟಲು ಸಾಧ್ಯವಾಗಲಿಲ್ಲ. ಜೈಲು ಶಿಕ್ಷೆಯನ್ನು ಅನುಭವಿಸಬೇಕಾಯಿತು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಪ್ರಯತ್ನದಿಂದ ಅಂತಿಮವಾಗಿ ಸಂವಿಧಾನ ದಿನಾಚರಣೆಯಂದು ಬಿಡುಗಡೆಗೊಳಿಸಲಾಯಿತು.