newsics.com
ಬೆಂಗಳೂರು: ವಕ್ಫ್ ವಿವಾದ ಸಂಬಂಧ ಬೆಂಗಳೂರಿನಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರನ್ನು ಶುಕ್ರವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನಲ್ಲಿ ವಕ್ಫ್ ವಿರುದ್ಧ ಶ್ರೀರಾಮ ಸೇನೆಯಿಂದ ಶುಕ್ರವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಗೂ ಮುನ್ನ ಚಾಮರಾಜಪೇಟೆಯ ಮಹದೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಲಾಯಿತು. ಪೂಜೆಯ ಬಳಿಕ ಶಾಸಕ ಜಮೀರ್ ಕಚೇರಿಯವರೆಗೂ ಶ್ರೀಮರಾಮ ಸೇನೆ ಪಾದಯಾತ್ರೆ ನಡೆಸಿತು. ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ರ್ಯಾಲಿ ನಡೆಯಿತು.
ಈ ವೇಳೆ ಸಚಿವ ಜಮೀರ್ ಅಹ್ಮದ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಮುತಾಲಿಕ್ಗೆ ತಡೆ ಒಡ್ಡಲಾಯಿತು. ರ್ಯಾಲಿ ಬೇಡ ವಾಹನದಲ್ಲಿ ತೆರಳಿ ಮನವಿಪತ್ರ ಸಲ್ಲಿಸುವಂತೆ ಈ ವೇಳೆ ಪೊಲೀಸರು ಸೂಚನೆ ನೀಡಿದರು. ಮನವೊಲಿಕೆಗೆ ಒಪ್ಪದ ಹಿನ್ನೆಲೆಯಲ್ಲಿ ಪೊಲೀಸರು ಮುತಾಲಿಕ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Good news for women ಗರ್ಭನಿರೋಧಕ ಮಾತ್ರೆ ಬಳಸುವ ಮಹಿಳೆಯರಿಗೆ ಖುಷಿ ಸುದ್ದಿ: ಹೊಸ ಸಂಶೋಧನೆ ಹೇಳಿದ್ದೇನು?
Stylish jeans pant ಸ್ಟೈಲಿಶ್ ಜೀನ್ಸ್ಗೆ ಬೀದಿಯಲ್ಲೇ ಹೊಲಿಗೆ: ಆತ್ಮಹತ್ಯೆಗೆ ಯತ್ನಿಸಿದ ಯುವಕ
BPL CARD ಬಿಪಿಎಲ್ ಕಾರ್ಡ್ ಪರಿಷ್ಕರಣೆ ಸ್ಥಗಿತ: ರದ್ದಾದ ಕಾರ್ಡ್ ಗಳಿಗೂ ರೇಷನ್