Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಬೆಂಗಳೂರಿನ ಭಕ್ತೆಯನ್ನೇ ಮದುವೆಯಾದ ಸ್ವಾಮೀಜಿ,‌ ಭಕ್ತರ ಆಕ್ರೋಶ, ಪೀಠತ್ಯಾಗಕ್ಕೆ ಒಪ್ಪದ ಮಠಾಧೀಶ!
ದೇಶಪ್ರಮುಖ

ಬೆಂಗಳೂರಿನ ಭಕ್ತೆಯನ್ನೇ ಮದುವೆಯಾದ ಸ್ವಾಮೀಜಿ,‌ ಭಕ್ತರ ಆಕ್ರೋಶ, ಪೀಠತ್ಯಾಗಕ್ಕೆ ಒಪ್ಪದ ಮಠಾಧೀಶ!

Share
2 Min Read
SHARE

newsics.com

ಚೆನ್ನೈ: ಕುಂಭಕೋಣಂನಲ್ಲಿರುವ ಪ್ರಸಿದ್ಧ ಸೂರ್ಯನಾರ್ ದೇವಸ್ಥಾನದ ಮಠಾಧೀಶ 54 ವರ್ಷದ ಮಹಾಲಿಂಗ ಸ್ವಾಮೀಜಿ ಅವರು ತಮ್ಮ ಭಕ್ತೆ, ಬೆಂಗಳೂರಿನ 47 ವರ್ಷದ ಹೇಮಶ್ರೀ ಅವರನ್ನು ಮದುವೆಯಾಗಿದ್ದಾರೆ.

ಕಳೆದ ತಿಂಗಳೇ ಹೇಮಶ್ರೀ ಅವರನ್ನು ವಿವಾಹವಾಗುವ ಮೂಲಕ ಮಹಾಲಿಂಗ ಸ್ವಾಮೀಜಿ ಬ್ರಹ್ಮಚರ್ಯ ಮುರಿದಿದ್ದಾರೆ.

ಸ್ವಾಮೀಜಿಯವರು ದಾಂಪತ್ಯ ಜೀವನಕ್ಕೆ ದಿಢೀರ್ ಕಾಲಿಟ್ಟಿರುವ ಸಂಗತಿಯನ್ನು ವಾರಗಟ್ಟಲೆ ರಹಸ್ಯವಾಗಿಡಲಾಗಿತ್ತು. ವಿವಾಹ ವಿಚಾರ ಬಹಿರಂಗವಾಗುತ್ತಿದ್ದಂತೆ ದೊಡ್ಡ ವಿವಾದವಾಗಿದ್ದು, ನೂರಾರು ಕೋಟಿ ರೂಪಾಯಿ ಆಸ್ತಿ ಹೊಂದಿರುವ ಮಠದ ‘ಅಧೀನಂ’ (ಮಠದ ಮುಖ್ಯಸ್ಥ) ಸ್ಥಾನ ತೊರೆಯುವಂತೆ ಭಕ್ತರು ಸ್ವಾಮೀಜಿ ಮೇಲೆ ಒತ್ತಡ ಹೇರಿದ್ದಾರೆ.

ಸೂರ್ಯನಾರ್ ದೇವಾಲಯ ನಿರ್ವಹಿಸುವ ಗ್ರಾಮಸ್ಥರು ಮತ್ತು ಮಠದ ಅನುಯಾಯಿಗಳು ಮಂಗಳವಾರ ಮಹಾಲಿಂಗ ಸ್ವಾಮೀಜಿ ಅವರನ್ನು ಮಠದ ಪ್ರಧಾನ ಕಚೇರಿಯಿಂದ ಬಲವಂತವಾಗಿ ಹೊರಹಾಕಲು ಯತ್ನಿಸಿದರು. ಆದರೆ, ಅದು ಸಾಧ್ಯವಾಗಲಿಲ್ಲ. ವಿವಾಹವಾಗಿರುವುದನ್ನು ಪ್ರಶ್ನಿಸಿದ್ದಕ್ಕಾಗಿ ತಮ್ಮ ಶಿಷ್ಯ ಸ್ವಾಮಿನಾಥ ಸ್ವಾಮೀಜಿಯವರನ್ನು ವಜಾಗೊಳಿಸಿದ ಮಹಾಲಿಂಗ ಸ್ವಾಮೀಜಿ, ತಮಿಳುನಾಡು ಸರ್ಕಾರದ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ಪತ್ರ ಬರೆದು ಮಠದ ಆಡಳಿತವನ್ನು ಸುಪರ್ದಿಗೆ ಪಡೆಯುವಂತೆ ಕೋರಿದ್ದಾರೆ.

ತನ್ನ ಭಕ್ತೆಯೊಂದಿಗೆ ವಿವಾಹವಾಗಿರುವುದನ್ನು ಸಮರ್ಥಿಸಿಕೊಂಡಿರುವ ಮಹಾಲಿಂಗ ಸ್ವಾಮೀಜಿ, ‘ಈ ಹಿಂದೆ ಮಠಾಧೀಶರು ವಿವಾಹವಾದ ಸಾಕಷ್ಟು ಉದಾಹರಣೆಗಳಿವೆ. ನಾನು ಮದುವೆ ನೋಂದಾಯಿಸಿದ್ದು, ಇದು ಖಾಸಗಿ ವಿಚಾರ. ಮಠಾಧೀಶನಾಗಿಯೇ ಮುಂದುವರಿಯುವೆ’ ಎಂದು ಹೇಳಿದ್ದಾರೆ.

ಮಹಾಲಿಂಗ ಸ್ವಾಮೀಜಿ ಅವರು ಮಠದ ಕೇಂದ್ರ ಕಚೇರಿ ತೊರೆಯದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು, ತಕ್ಷಣವೇ ಮಠವನ್ನು ತೊರೆಯಬೇಕೆಂದು ಪಟ್ಟುಹಿಡಿದಿದ್ದಾರೆ. ಭಕ್ತರ ಒತ್ತಡಕ್ಕೆ ಸೊಪ್ಪು ಹಾಕದ ಸ್ವಾಮೀಜಿ, ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು, ಮಠದ ಆಡಳಿತವನ್ನು ಅವರ ಸುಪರ್ದಿಗೆ ಒಪ್ಪಿಸುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲವೆಂದು ಪಟ್ಟುಹಿಡಿದಿದ್ದಾರೆ.

ಕಾನೂನು ತಜ್ಞರ ಜತೆ ಚರ್ಚಿಸಿ ನಮ್ಮ ನಿರ್ಧಾರವನ್ನು ಶೀಘ್ರವೇ ಪ್ರಕಟಿಸುತ್ತೇವೆ. ಮಠಾಧೀಶರ ಒಡೆತನದ ಆಸ್ತಿಗಳ ವಿವರವಾದ ಮೌಲ್ಯಮಾಪನ ಕೂಡ ಮಾಡಲಾಗುವುದು ಎಂದು ಧಾರ್ಮಿಕ ದತ್ತಿ ಇಲಾಖೆ ಸಚಿವ ಪಿ.ಕೆ. ಶೇಖರ್‌ಬಾಬು ಹೇಳಿದ್ದಾರೆ.

ತಂಜಾವೂರು ಜಿಲ್ಲೆಯ ಕುಂಭಕೋಣಂನಲ್ಲಿರುವ ಸೂರ್ಯನಾರ್ ದೇವಸ್ಥಾನದ ‘ಅಧೀನಂ’ನ 28ನೇ ಮುಖ್ಯಸ್ಥರಾಗಿ 2022ರಲ್ಲಿ ಅಧಿಕಾರ ವಹಿಸಿಕೊಂಡ ಮಹಾಲಿಂಗ ಸ್ವಾಮೀಜಿ, ಕಳೆದ ಅಕ್ಟೋಬರ್ 10ರಂದು ಬೆಂಗಳೂರಿನಲ್ಲಿ ಹೇಮಶ್ರೀ ಅವರನ್ನು ವರಿಸಿದ್ದಾರೆ.

ತಮಿಳುನಾಡಿನಲ್ಲಿ ಶತಮಾನಗಳ ಹಿಂದೆ ಸ್ಥಾಪಿಸಲಾದ 18 ಶೈವ ಮಠಗಳಲ್ಲಿ ಸೂರ್ಯನಾರ್ ದೇವಾಲಯದ ಮಠವೂ ಒಂದಾಗಿದೆ.

ಕೀಟಗಳ ದಾಳಿಯಿಂದ ಭಾರತ-ಆಫ್ರಿಕಾ ಟಿ20 ಪಂದ್ಯ ತಾತ್ಕಾಲಿಕ ಸ್ಥಗಿತ

17 ವರ್ಷಗಳ ಬಳಿಕ ಮೊದಲ ಬಾರಿಗೆ ನೈಜೀರಿಯಾಕ್ಕೆ ಮೋದಿ ಭೇಟಿ!

ಸಚಿವ ಜಮೀರ್‌ಗೆ ಅವಹೇಳನ: ಪುನೀತ್ ಕೆರೆಹಳ್ಳಿ ಅರೆಸ್ಟ್

ರಿಲಯನ್ಸ್ ಸೆಂಟ್ರೋ ಸ್ಟೋರ್ ತಾತ್ಕಾಲಿಕ ಸ್ಥಗಿತಕ್ಕೆ ನಿರ್ಧಾರ: ಇದಕ್ಕೇನು ಕಾರಣ?

ಬಿಯರ್ ಕುಡಿಯುವುದರಿಂದ ಸೌಂದರ್ಯ ಹೆಚ್ಚುತ್ತದೆಯೇ? ಎಷ್ಟರ ಮಟ್ಟಿಗೆ ಸತ್ಯ..?

TAGGED:abbot who did not agree to sacrifice!Swamijiwho married a devotee of Bangalore
Share This Article
Facebook Twitter Copy Link Print
Previous Article ಕೀಟಗಳ ದಾಳಿಯಿಂದ ಭಾರತ-ಆಫ್ರಿಕಾ ಟಿ20 ಪಂದ್ಯ ತಾತ್ಕಾಲಿಕ ಸ್ಥಗಿತ
Next Article ರೀಲ್ಸ್ ಗಾಗಿ ‘ಪೆಟ್ರೋಲ್ ಬಾಂಬ್’ ಸ್ಪೋಟ: ಬೆಚ್ಚಿ ಬಿದ್ದ ಜನ!

Popular Posts

Footpath Driving Fine ಫುಟ್‌ಪಾತ್‌ನಲ್ಲಿ ಗಾಡಿ ಓಡಿಸಿದರೆ ಬೀಳಲಿದೆ ₹5,000 ದಂಡ! ಸಾರಿಗೆ ಸಚಿವರಿಗೆ ಸಚಿವ ಕೃಷ್ಣ ಬೈರೇಗೌಡ ಪತ್ರ

1 Min Read

Soujanya Case ಸೌಜನ್ಯ ಹತ್ಯೆ ಪ್ರಕರಣ; ಸಿಬಿಐ ತನಿಖೆಗೆ ಸುಪ್ರೀಂ ಅಸಮಾಧಾನ, ಮರುತನಿಖೆಯ ಆದೇಶ ಕಾಯ್ದಿರಿಸಿದ ಪೀಠ

1 Min Read

Smriti Mandhana ಎಲ್‌ಎಸ್‌ಜಿ ಜರ್ಸಿಯಲ್ಲಿ ಆರ್‌ಸಿಬಿ ನಾಯಕಿ? ಸ್ಮೃತಿ ಮಂದಾನಾ ಹೊಸ ಫೋಟೋ ವೈರಲ್‌

1 Min Read

Credit Card Limit ನಿಮಗೆ ಗೊತ್ತಾಗದಂತೆ ಕ್ರೆಡಿಟ್‌ ಕಾರ್ಡ್‌ ಲಿಮಿಟ್‌ ಕಟ್‌ ಆಯ್ತಾ? ಬ್ಯಾಂಕುಗಳ ಈ ನಿರ್ಧಾರಕ್ಕೆ ಅಸಲಿ ಕಾರಣ ಇಲ್ಲಿದೆ

2 Min Read

You Might Also Like

ಪ್ರಮುಖದೇಶಮನರಂಜನೆ

Spider-Man: Brand New Day ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಹೊಸ ದಾಖಲೆ ಬರೆದ ‘ಸ್ಪೈಡರ್‌ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’

1 Min Read
ಪ್ರಮುಖಮನರಂಜನೆವಿದೇಶ

Kaylee Hottle no more ಗಾಡ್ಜಿಲ್ಲಾ ಚಿತ್ರದ 18 ವರ್ಷದ ನಟಿ ಕಾರು ಅಪಘಾತದಲ್ಲಿ ಸಾವು

1 Min Read
ಪ್ರಮುಖಲೈಫ್‌ಸ್ಟೈಲ್

Pan Card ನಿಮ್ಮ ಪ್ರಮುಖ ಪ್ಯಾನ್‌ ಕಾರ್ಡ್ ಕಳೆದುಹೋದರೆ ತಕ್ಷಣ ಏನು ಮಾಡಬೇಕು? ಇಲ್ಲಿದೆ ಕಂಪ್ಲೀಟ್ ಗೈಡ್

1 Min Read
ಪ್ರಮುಖಲೈಫ್‌ಸ್ಟೈಲ್

Gold Ornaments ನಿಮ್ಮ ಹಳೆಯ ಚಿನ್ನದ ಆಭರಣಗಳು ಮತ್ತೆ ಹೊಸದರಂತೆ ಹೊಳೆಯಬೇಕೇ? ಇಲ್ಲಿದೆ ಸೂಪರ್ ಟಿಪ್ಸ್

2 Min Read

Social Networks

Facebook-f Instagram Twitter
Welcome Back!

Sign in to your account

Lost your password?