newsics.com
ಮೈಸೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿ ಜಾಮೀನಿನ ಮೇಲೆ ಬುಧವಾರ ಸಂಜೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿರುವ ನಟ ದರ್ಶನ್ ರಾಜಕೀಯ ಪ್ರವೇಶಿಸಲಿದ್ದಾರೆ ಎಂದು ಅರ್ಜುನ್ ಅವಧೂತ ಗುರೂಜಿ ಭವಿಷ್ಯ ನುಡಿದಿದ್ದಾರೆ.
ನಟ ದರ್ಶನ್ ರಾಜಕೀಯ ಪ್ರವೇಶದ ಬಗ್ಗೆ ಭವಿಷ್ಯ ನುಡಿದಿರುವ ಅರ್ಜುನ್ ಅವಧೂತ ಗುರೂಜಿ, ನಟ ದರ್ಶನ್‌ಗೆ ರಾಜಕೀಯಕ್ಕೆ ಬರುತ್ತಾರೆ. ಅವರು ಯಾರ ಮನೆ ಬಳಿಯೂ ಹೋಗಲ್ಲ. ರಾಜಕೀಯ ಪಕ್ಷಗಳೇ ಅವರನ್ನು ಹುಡುಕಿಕೊಂಡು ಬರುತ್ತವೆ ಎಂದು ಹೇಳಿದ್ದಾರೆ.
ದರ್ಶನ್ ರಾಜಕೀಯಕ್ಕೆ ಬರುತ್ತಾರೆ. ಅವರಿಗೆ ರಾಜಕೀಯದಲ್ಲಿ ಉತ್ತಮ ಭವಿಷ್ಯವಿದೆ. 2025ನೇ ಇಸವಿಯಲ್ಲಿ ದರ್ಶನ್ ಅವರಿಗೆ ಒಳ್ಳೆಯ ಭವಿಷ್ಯವಿದೆ. ದರ್ಶನ್ ರಿಲೀಸ್ ಆಗಿರುವುದು ಕನ್ನಡಿಗರಿಗೆ ಹಾಗೂ ಅವರ ಅಭಿಮಾನಿಗಳಿಗೆ ತುಂಬಾ ಸಂತಸ ತಂದಿದೆ. ಅದರಲ್ಲೂ ಅಭಿಮಾನಿಗಳ ಪ್ರಾರ್ಥನೆ, ವಿಜಯಲಕ್ಷ್ಮಿ ಅವರ ತಪಸ್ಸು ಹಾಗೂ ದಿನಕರ್ ತೂಗುದೀಪ ಅವರ ಪ್ರಯತ್ನದಿಂದ ಅವರು ದರ್ಶನ್ ಅವರು ರಿಲೀಸ್ ಆಗಿದ್ದಾರೆ. ಮುಂದಿನ ದಿನಗಳಲ್ಲಿ ದರ್ಶನ್ ಅವರಿಗೆ ಒಳ್ಳೆಯ ಭವಿಷ್ಯವಿದೆ ಎಂದು ಅರ್ಜುನ್ ಅವಧೂತ ಗುರೂಜಿ ಹೇಳಿದ್ದಾರೆ.
ಹಾವೇರಿಯಲ್ಲಿ ವಕ್ಫ್ ಗಲಾಟೆ: ಕಡಕೋಳ ಗ್ರಾಮದಲ್ಲಿ ಕಲ್ಲು ತೂರಾಟ, ಉದ್ವಿಗ್ನ ಸ್ಥಿತಿ, 32 ಮಂದಿ ಪೊಲೀಸ್ ವಶಕ್ಕೆ
ಇಂದಿನಿಂದ ಮನೆ-ಮನಗಳಲ್ಲಿ ದೀಪಾವಳಿ ಸಡಗರ: ಕಿರು ದೀಪಾವಳಿ, ಲಕ್ಷ್ಮೀ ಪೂಜೆ ಹೀಗೆ ಆಚರಿಸಿ