Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > ಇಂದು ನರಕ ಚತುರ್ದಶಿ, ಯಮ ದೀಪ ಬೆಳಗುವ ಮುನ್ನ ಹೀಗೆ ಮಾಡಿ…
ಅನಾವರಣಈ ದಿನಪ್ರಮುಖ

ಇಂದು ನರಕ ಚತುರ್ದಶಿ, ಯಮ ದೀಪ ಬೆಳಗುವ ಮುನ್ನ ಹೀಗೆ ಮಾಡಿ…

Share
2 Min Read
SHARE

newsics.com

ದೀಪಾವಳಿಯ ನರಕಚತುರ್ದಶಿಯಂದು ಮಾತ್ರ ಯಮರಾಜನಿಗೆ ಪೂಜೆ ಸಲ್ಲಿಸಲಾಗುತ್ತದೆ. ಆಯುಷ್ಯ, ಒಳಿತಿಗಾಗಿ ನರಕ ಚತುರ್ದಶಿಯಂದು ಯಮ ದೇವರ ಪೂಜೆಯನ್ನು ಮಾಡಲಾಗುತ್ತದೆ. ನರಕ ಚತುರ್ದಶಿಯಂದು ಯಮನ ಆರಾಧನೆ ನಡೆಯುತ್ತದೆ.

ನರಕ ಚತುರ್ದಶಿಯ ಆಚರಣೆಯಲ್ಲಿ ಪ್ರಮುಖವಾಗಿರುವುದು ಯಮನ ಪೂಜೆ. ದೀರ್ಘಾಯುಷ್ಯ ಮತ್ತು ಪಾಪ ಕರ್ಮಗಳ ನಿವಾರಣೆಗೆ ಈ ದಿನ ಯಮನಿಗೆ ದೀಪ ಹಚ್ಚಿ ಬೆಳಗುವ ಮೂಲಕ ಪ್ರಾರ್ಥನೆ ಸಲ್ಲಿಸಲಾಗುತ್ತದೆ.

ನರಕ ಚತುರ್ದಶಿಯಂದು ಹಚ್ಚುವ ಈ ದೀಪ ಅತ್ಯಂತ ಮಹತ್ವ ಹೊಂದಿದ್ದು, ಯಮ ದೀಪ ಹಚ್ಚುವಾಗ ಕೆಲ ವಿಧಿ-ವಿಧಾನಗಳನ್ನು ಅನುಸರಿಸಲೇಬೇಕು.

ದೀಪ ಹಚ್ಚುವ ಸಮಯ
ನರಕ ಚತುರ್ದಶಿಯಂದು ಯಮ ದೇವರಿಗೆ ಸಂಜೆ ಹೊತ್ತು ದೀಪ ಹಚ್ಚುವುದು ಅತ್ಯಂತ ಮಂಗಳಕರವಾಗಿದೆ. ಈ ಬಾರಿ ಅಕ್ಟೋಬರ್ 31ರಂದು ನೀವು ಸಂಜೆ 5:30 ರಿಂದ 6:45 ರವರೆಗೆ ಈ ಯಮದೀಪ ಹಚ್ಚುವುದು ಒಳ್ಳೆಯದು.

ದೀಪ ಹಚ್ಚುವ ಸ್ಥಳ
ಯಮ ದೀಪವನ್ನು ಮನೆಯ ಮುಂಬಾಗಿಲಲ್ಲಿ ದಕ್ಷಿಣಾಭಿಮುಖವಾಗಿ ಇಡುವುದು ವಾಡಿಕೆ. ವೈದಿಕ ಜ್ಯೋತಿಷ್ಯದಲ್ಲಿ, ದಕ್ಷಿಣ ದಿಕ್ಕನ್ನು ಯಮನ ದಿಕ್ಕು ಎನ್ನಲಾಗಿದೆ. ಹೀಗಾಗಿ ಈ ದಿಕ್ಕಿನಲ್ಲಿ ದೀಪ ಬೆಳಗುವುದು ನಿಮಗೆ ಆಯುಷ್ಯ, ನೆಮ್ಮದಿ, ಅದೃಷ್ಟವನ್ನು ಕರುಣಿಸುತ್ತದೆ.
ದೀಪವನ್ನು ಮನೆಯ ಹೊರಗೆ, ಮುಂಭಾಗದ ಬಾಗಿಲಿನ ಬಳಿ ಇಡುವುದು ಮನೆಯನ್ನು ಕೆಟ್ಟ ಶಕ್ತಿಗಳು ಮತ್ತು ದುಷ್ಟ ಶಕ್ತಿಗಳಿಂದ ರಕ್ಷಿಸುತ್ತದೆ.
ಯಮನಿಗೆ ದೀಪ ಹಚ್ಚುವಾಗ ಮಣ್ಣಿನ ದೀಪಗಳನ್ನು ಆರಿಸಿಕೊಳ್ಳಬೇಕು. ಈ ದೀಪಕ್ಕೆ ನೀವು ಸಾಸಿವೆ ಎಣ್ಣೆ ಅಥವಾ ಎಳ್ಳಿನ ಎಣ್ಣೆಯನ್ನು ಹಾಕಿ ದೀಪ ಬೆಳಗಿಸಬೇಕು.
ಸಾಸಿವೆ ಎಣ್ಣೆ ಅಥವಾ ಎಳ್ಳಿನ ಎಣ್ಣೆಯು ಹಿಂದಿನಿಂದ ಆಚರಣೆಯಲ್ಲಿವೆ ಮತ್ತು ಇವು ಹೆಚ್ಚು ಹೊತ್ತು ದೀಪ ಉರಿಯಲು ಸಹಾಯ ಮಾಡುತ್ತವೆ. ಆದ್ದರಿಂದ ಇವೆರಡನ್ನು ದೀಪಕ್ಕೆ ಬಳಸೋದು ಉತ್ತಮ.
ಹತ್ತಿ ಬತ್ತಿಯನ್ನೇ ಬಳಸಬೇಕು. ಕೆಲವರು ಬಾಳೆ ಮರದಿಂದ ಮಾಡಿದ ದಾರವನ್ನು ಸಹ ಬಳಸುತ್ತಾರೆ, ಇದು ಕೂಡ ಒಳ್ಳೆಯದು.

ಪ್ರಾರ್ಥನೆ
ದೀಪ ಬೆಳಗಿಸಿ ಭಕ್ತಿಯಿಂದ ಯಮನ ಆರಾಧನೆ, ಪೂಜೆ ಮಾಡಬೇಕು. ಸಮೃದ್ಧಿ, ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಯಮರಾಯನಿಗೆ ಪ್ರಾರ್ಥನೆ ಸಲ್ಲಿಸಬೇಕು.
ಮೃತ್ಯುನಾ ಪಾಶಹಸ್ತೇನ ಕಾಲಃ ಕಾರಯಾಣಃ ಸ್ಮೃತಃ
ಯಮಾಯ ಧರ್ಮರಾಜಾಯ ಮೃತ್ಯವೇ ಚ ಅಂತಕಾಯ ಚ
ದೀಪ ಹಚ್ಚಿ ಈ ಮಂತ್ರವನ್ನು ಜಪಿಸಿ ಯಮನ ಆಶೀರ್ವಾದ ಪಡೆಯಬಹುದು. ದೀಪಾವಳಿಯ ಸಮಯದಲ್ಲಿ ಸಂಪತ್ತು ಮತ್ತು ಯಶಸ್ಸಿನ ದೇವತೆಯಾದ ಲಕ್ಷ್ಮಿ ಪೂಜೆಯನ್ನು ಮಾಡುವುದರಿಂದ ದೀಪಾವಳಿಗೂ ಮುನ್ನ ಮನೆ ಸ್ವಚ್ಛ ಮಾಡಬೇಕು.

ದೀಪ ಹಚ್ಚುವಾಗ ಮನೆಯ ಸ್ವಚ್ಛತೆ ಜತೆ ಮನೆಯಲ್ಲಿ ಶಾಂತಿ ನೆಲೆಸಿರುವಂತೆ ನೋಡಿಕೊಳ್ಳಬೇಕು. ವಾದ ಮಾಡುವುದು, ಕೋಪಗೊಳ್ಳುವುದು ಅಥವಾ ನಕಾರಾತ್ಮಕ ನಡವಳಿಕೆಯನ್ನು ತೋರಿಸಬಾರದು.

TAGGED:do this before Yama Deepa lights up...Today Naraka Chaturdashi
Share This Article
Facebook Twitter Copy Link Print
Previous Article newsics ದಿನ ಭವಿಷ್ಯ… 31-10-2024, ಗುರುವಾರ, ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ?
Next Article ಇಂದಿನಿಂದ ಮನೆ-ಮನಗಳಲ್ಲಿ ದೀಪಾವಳಿ ಸಡಗರ: ಕಿರು ದೀಪಾವಳಿ, ಲಕ್ಷ್ಮೀ‌ ಪೂಜೆ ಹೀಗೆ ಆಚರಿಸಿ

Popular Posts

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read

Ind vs Zim ಟೀಮ್ ಇಂಡಿಯಾದಲ್ಲಿ ಭಾರೀ ಸರ್ಜರಿ! 6 ಮಂದಿ ಔಟ್‌, ಯಾರೆಲ್ಲ ಸೇರಿದ್ರು?

2 Min Read

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read

Toll Price Hike ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸವಾರರಿಗೆ ಶಾಕ್; ವರ್ಷದಲ್ಲೇ 2ನೇ ಬಾರಿ ಸದ್ದಿಲ್ಲದೇ ಟೋಲ್ ದರ ಹೆಚ್ಚಿಸಿದ ಹೆದ್ದಾರಿ ಪ್ರಾಧಿಕಾರ

1 Min Read

You Might Also Like

ಕರ್ನಾಟಕಪ್ರಮುಖ

Scholl van tragedy ಶಾಲಾ ವಾಹನದ ಮೇಲೆ ಮರ ಬಿದ್ದು ಬಾಲಕಿ ಸಾವು, ಮಗು ಸ್ಥಿತಿ‌ ಗಂಭೀರ

1 Min Read
ಪ್ರಮುಖಕರ್ನಾಟಕ

Footpath Driving Fine ಫುಟ್‌ಪಾತ್‌ನಲ್ಲಿ ಗಾಡಿ ಓಡಿಸಿದರೆ ಬೀಳಲಿದೆ ₹5,000 ದಂಡ! ಸಾರಿಗೆ ಸಚಿವರಿಗೆ ಸಚಿವ ಕೃಷ್ಣ ಬೈರೇಗೌಡ ಪತ್ರ

1 Min Read
ಪ್ರಮುಖCrimeಕರ್ನಾಟಕ

Soujanya Case ಸೌಜನ್ಯ ಹತ್ಯೆ ಪ್ರಕರಣ; ಸಿಬಿಐ ತನಿಖೆಗೆ ಸುಪ್ರೀಂ ಅಸಮಾಧಾನ, ಮರುತನಿಖೆಯ ಆದೇಶ ಕಾಯ್ದಿರಿಸಿದ ಪೀಠ

1 Min Read
ಪ್ರಮುಖದೇಶ

Smriti Mandhana ಎಲ್‌ಎಸ್‌ಜಿ ಜರ್ಸಿಯಲ್ಲಿ ಆರ್‌ಸಿಬಿ ನಾಯಕಿ? ಸ್ಮೃತಿ ಮಂದಾನಾ ಹೊಸ ಫೋಟೋ ವೈರಲ್‌

1 Min Read

Social Networks

Facebook-f Instagram Twitter
Welcome Back!

Sign in to your account

Lost your password?