newsics.com
ಮುಂಬೈ: ಮುಂದಿನ ಒಂದರಿಂದ ಒಂದೂವರೆ ವರ್ಷದಲ್ಲಿ ಬೆಳ್ಳಿ ದರ ಪ್ರತಿ ಕೆ.ಜಿ.ಗೆ 1,25,000 ರೂ. ಹಾಗೂ ಕಾಮೆಕ್ಸ್ನಲ್ಲಿ 40 ಡಾಲರ್‌ಗೆ ಏರಿಕೆಯಾಗುವ ಸಾಧ್ಯತೆಯಿದೆ.
ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ (ಎಂಒಎಫ್ಎಸ್ಎಲ್) ವರದಿಯ ಪ್ರಕಾರ, ಬೆಳ್ಳಿಯ ದರ ಇತ್ತೀಚೆಗೆ ಶೇಕಡಾ 40 ಕ್ಕಿಂತ ಅಧಿಕ (ವರ್ಷದಿಂದ ವರ್ಷಕ್ಕೆ) ಹೆಚ್ಚಳವಾಗಿದ್ದು, ದೇಶೀಯ ಮಾರುಕಟ್ಟೆಯಲ್ಲಿ 1 ಲಕ್ಷ ರೂಪಾಯಿ ತಲುಪುವ ಮೂಲಕ ಅತ್ಯುತ್ತಮ ಮಟ್ಟದ ಏರಿಕೆ ಕಂಡಿದೆ.
ಮಧ್ಯಮಾವಧಿಯಲ್ಲಿ ಚಿನ್ನದ ದರ 81,000 ರೂ. ಮತ್ತು ದೀರ್ಘಾವಧಿಯಲ್ಲಿ 86,000 ರೂ. ತಲುಪಬಹುದು ಎಂದು ಎಂಒಎಫ್ಎಸ್ಎಲ್ ಅಂದಾಜಿಸಿದೆ.
ಕಾಮೆಕ್ಸ್ನಲ್ಲಿ ಚಿನ್ನವು ಮಧ್ಯಮಾವಧಿಯಲ್ಲಿ 2,830 ಡಾಲರ್ ಮತ್ತು ದೀರ್ಘಾವಧಿಯಲ್ಲಿ 3,000 ಡಾಲರ್ ತಲುಪುವ ನಿರೀಕ್ಷೆಯಿದೆ.
ವರದಿಯ ಪ್ರಕಾರ, 2019 ರ ದೀಪಾವಳಿಯ ಸಮಯದಲ್ಲಿ ಯಾರಾದರೊಬ್ಬರು ಚಿನ್ನದ ಮೇಲೆ ಹೂಡಿಕೆ ಮಾಡಿದ್ದರೆ, ಈ ದೀಪಾವಳಿಯ ವೇಳೆಗೆ ಅವರು ತಮ್ಮ ದೇಶೀಯ ಚಿನ್ನದ ಹೂಡಿಕೆಯ ಮೇಲೆ ಶೇಕಡಾ 103 ರಷ್ಟು ಆದಾಯ ಪಡೆಯುತ್ತಾರೆ. 2011 ರಿಂದ, ದೀಪಾವಳಿಗೆ ಮುಂಚಿನ 30 ದಿನಗಳಲ್ಲಿ ಕೇವಲ ಎರಡು ಸಂದರ್ಭಗಳಲ್ಲಿ (2015 ಮತ್ತು 2016) ಮಾತ್ರ ಚಿನ್ನದ ದರ ಇಳಿಕೆಯನ್ನು ದಾಖಲಿಸಿತ್ತು.