newsics.com
ಬೆಂಗಳೂರು: ಫಿಜಿ ದೇಶವು ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಜಾಗತಿಕ ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಅವರಿಗೆ ಪ್ರದಾನ ಮಾಡಿದೆ.
ಶಾಂತಿ, ಸಾಮರಸ್ಯ, ಮತ್ತು ಮಾನವೀಯ ಸೇವೆಗಳಿಗಾಗಿ ಈ ಗೌರವ ಸಂದಿದೆ. ಅವರ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಮೂಲಕ ಮಾನಸಿಕ ಆರೋಗ್ಯ, ಶಿಕ್ಷಣ ಮತ್ತು ಸಮುದಾಯ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದೆ.
ರವಿಶಂಕರ್ ಗುರೂಜಿಗೆ “ಹಾನರರಿ ಆಫಿಸರ್ ಆಫ್ ದಿ ಆರ್ಡರ್ ಆಫ್ ಫೀಜಿ” ಬಿರುದನ್ನು ಫಿಜಿ ರೀಪಬ್ಲಿಕ್ನ ಅಧ್ಯಕ್ಷ ಹೆಚ್.ಇ ರಟು ವಿಲ್ಲಿಯಮೆ ಎಂ. ಕಟೋನಿವೆರಿ ಅವರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಆ ಮೂಲಕ ರವಿಶಂಕರ್ ಗುರೂಜಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡುವತ್ತಿರುವ ಆರನೇ ದೇಶವಾಗಿ ಫಿಜಿ ಹೊರಹೊಮ್ಮದೆ.