newsics.com
ಹೈದ್ರಾಬಾದ್: ಬಡ್‌ವೈಸರ್ ಬಿಯರ್ ಬಾಟಲಿಯಲ್ಲಿ ಹಲ್ಲಿ ಪತ್ತೆಯಾಗಿದೆ ಎನ್ನಲಾದ ವೀಡಿಯೊ ವೈರಲ್ ಆಗಿದೆ. ತೆಲಂಗಾಣದ ವಿಕಾರಾಬಾದ್‌ನಲ್ಲಿ ಈ ಘಟನೆ ನಡೆದಿದೆ.
ವೀಡಿಯೋದಲ್ಲಿ ಕಾಣಿಸುವಂತೆ ಬಡ್ವೈಸರ್ ಬೀರ್ ಬಾಟಲ್‌ನಲ್ಲಿ ಹಲ್ಲಿ ತೇಲಾಡುತ್ತಿರುವುದು ಕಾಣಿಸುತ್ತಿದೆ. ಅದರೆ ಅದು ಸೀಲ್ಡ್ ಬಾಟಲ್ ಅಥವಾ ತೆರೆದ ಬಾಟಲ ಎಂಬುದು ಸ್ಪಷ್ಟವಾಗಿಲ್ಲ. ವರದಿಯ ಪ್ರಕಾರ, ತೆಲಂಗಾಣದ ಕರೇಲಿ ಗ್ರಾಮದ ಲಕ್ಷ್ಮಿಕಾಂತ್ ರೆಡ್ಡಿ ಹಾಗೂ ಅನಂತಯ್ಯ ಅವರು ಈ ಬೀರ್ ಬಾಟಲನ್ನು ಖರೀದಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಹಂಚುವುದಕ್ಕಾಗಿ ಧರುರ್‌ನ ಲೋಕಲ್ ವೈನ್ ಶಾಪೊಂದರಲ್ಲಿ ಅವರು ಒಟ್ಟು 4 ಸಾವಿರ ರೂಪಾಯಿ ಮೌಲ್ಯದ ಬೀರನ್ನು ಖರೀದಿಸಿದ್ದಾರೆ. ಆದರೆ ಸಂಜೆ ಟೈಮ್ ಬಾಟಲ್ ಒಪನ್ ಮಾಡುವ ವೇಳೆ ಅದರೊಳಗೆ ಏನೋ ಒಂದು ಹರಿದಾಡುತ್ತಿರುವುದು ಅವರ ಗಮನಕ್ಕೆ ಬಂದಿದೆ. ಅವರಲ್ಲೊಬ್ಬ ವ್ಯಕ್ತಿ ಬಾಟಲನ್ನು ಶೇಕ್ ಮಾಡಿ ಹಲ್ಲಿ ಹಾಗೂ ಬಾಟಲ್‌ನ್ನು ಕ್ಯಾಮರಾಗೆ ಕಾಣುವಂತೆ ಝೂಮ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
https://www.instagram.com/reel/DBmJsEBgWYH/?igsh=M3J0Znp5dnB1c3B5