newsics.com
ತುಮಕೂರು: ನಿರಂತರ ಮಳೆಯಿಂದಾಗಿ ಮನೆ ಗೋಡೆ ಕುಸಿದು ಬಿದ್ದು ಮಹಿಳೆಯೊಬ್ಬರು ಮೃತ ಪಟ್ಟಿದ್ದಾರೆ. ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಜಿ.ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ಜಿ. ಹೊಸಹಳ್ಳಿ ನಿವಾಸಿ ಸಹನಾ (27) ಮೃತ ದುರ್ದೈವಿ. ಬೆಳಗ್ಗೆ ಸ್ನಾನಕ್ಕೆ ಹಳೆಯ ಮನೆಗೆ ತೆರಳಿದ್ದ ವೇಳೆ ಗೋಡೆ ಕುಸಿದು ಸಹನಾ ಮಣ್ಣಿನಡಿ ಸಿಲುಕಿದ್ದರು.
ಮಣ್ಣಿನಡಿ ಸಿಲುಕಿದ್ದ ಸಹನಾಳನ್ನ ಗ್ರಾಮಸ್ಥರು ರಕ್ಷಣೆ ಮಾಡಿ, ಪ್ರಜ್ಞಾಹೀನ ಸ್ಥಿತಿಯಲ್ಲಿ ಗುಬ್ಬಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನ್ನಪ್ಪಿದ್ದಾಳೆ.
ಡೆಡ್ ಬಟ್ ಸಿಂಡ್ರೋಮ್ ಬಗ್ಗೆ ನಿಮಗೆ ಗೊತ್ತಾ? ಇದರಿಂದ ದೂರ ಇರೋದು ಹೇಗೆ..?