newsics.com
ಕೊರೊನಾ ಅವಧಿ ನಂತರ ವರ್ಕ್ ಫ್ರಮ್ ಹೋಂ ಸಂಸ್ಕೃತಿ ಹೆಚ್ಚಾಗಿದೆ. ಸದ್ಯ ನಿಮ್ಮ ಪರಿಸ್ಥಿತಿ ಕೂಡ ಅದೇ ಆಗಿದ್ದರೆ ಇಂದೇ ಜಾಗರೂಕರಾಗಿರಿ. ಇಲ್ಲದಿದ್ದರೆ ಡೆಡ್ ಬಡ್ ಸಿಂಡ್ರೋಮ್‌ಗೆ ಬಲಿಯಾಗಬಹುದು!
ಒಂದೇ ಸ್ಥಳದಲ್ಲಿ ದೀರ್ಘ ಕಾಲ ಕುಳಿತುಕೊಳ್ಳುವುದರಿಂದ ಸೊಂಟವು ಕೆಲಸ ಮಾಡುವುದನ್ನು ಮರೆತುಬಿಡುತ್ತದೆ. ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ ಡೆಡ್ ಬಟ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಅಂದರೆ ಮನೆಯಲ್ಲಿ ಅಥವಾ ಕಚೇರಿಯಲ್ಲಿ ದೀರ್ಘಕಾಲದವರೆಗೆ ನಿರಂತರವಾಗಿ ಕೆಲಸ ಮಾಡೋದು ಅಪಾಯಕಾರಿ. 45 ನಿಮಿಷಗಳಿಗಿಂತ ಹೆಚ್ಚು ಕಾಲ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದು ಡೇಂಜರ್. ಇದರಿಂದ ಹಲವು ರೀತಿಯ ಸಮಸ್ಯೆಗಳು ಉಂಟಾಗುತ್ತವೆ. ಇವುಗಳಲ್ಲಿ ಡೆಡ್ ಬಟ್ ಸಿಂಡ್ರೋಮ್ ಕೂಡ ಒಂದು.
ಲಕ್ಷಣಗಳು ಏನೇನು..?
– ಬೆನ್ನು, ಮೊಣಕಾಲುಗಳಲ್ಲಿ ತೀವ್ರ ನೋವು
– ಸೊಂಟದ ಕೆಳಗಿನ ಭಾಗದಲ್ಲಿ ಝುಮ್ಮೆನಿಸುವಿಕೆ
– ಸೊಂಟದ ಸುತ್ತಲೂ ಮರಗಟ್ಟುವಿಕೆ, ಸುಡುವಿಕೆ ಮತ್ತು ನೋವು
ಪರಿಹಾರ ಏನು?
– ಕಚೇರಿಯಲ್ಲಿ ಮೆಟ್ಟಿಲುಗಳನ್ನು ಬಳಸಿ, ಲಿಫ್ಟ್‌ನಿಂದ ದೂರ ಇರಿ
– ಪ್ರತಿ 30-45 ನಿಮಿಷಗಳಿಗೊಮ್ಮೆ ಆಸನದಿಂದ ಎದ್ದು ನಿಂತು ಓಡಾಡಿ.
– ಕಾಲು ಚಾಚಿ ಕುಳಿತುಕೊಳ್ಳುವುದು ಪ್ರಯೋಜನಕಾರಿಯಾಗಿದೆ
– ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ನಡೆಯಿರಿ
– ಕಚೇರಿಯಲ್ಲಿ ಸಮಯ ಸಿಕ್ಕಾಗ ಆಗಾಗ ಸ್ವಲ್ಪ ನಡೆಯಿರಿ.