newsics.com
ಲಿಫ್ಟ್ ನಲ್ಲಿ ಏರಿದಾಗ ಅಲ್ಲಿನ ಕನ್ನಡಿ ನೋಡಿ , ನಮ್ಮ ಹೇರ್ ಸ್ಟೈಲ್ ಸರಿ ಮಾಡಿಕೊಳ್ಳುತ್ತೇವೆ. ಉಟ್ಟಿರುವ ಧಿರಿಸನ್ನು ಸರಿಯಾಗಿ ಸೆಟ್ ಮಾಡಿಕೊಳ್ಳುತ್ತೇವೆ. ನಮ್ಮನ್ನು ನಾವೇ ನೋಡಿಕೊಂಡು ಸ್ವಯಂ ಪ್ರಶಂಸೆಪಡುತ್ತೇವೆ. ಆದರೆ ಲಿಫ್ಟ್ ನಲ್ಲಿ ಕನ್ನಡಿ ಅಳವಡಿಸಲು ಹಲವು ಕಾರಣಗಳಿವೆ.
ಹಲವರಿಗೆ ವಿಪರೀತ ಜನರು ಒಂದೇ ಕಡೆ ಸೇರಿದಾಗ ಒಂದು ರೀತಿಯ ಕಸಿವಿಸಿಯುಂಟಾಗುತ್ತದೆ. ಇನ್ನೂ ಕೆಲವರು ಬಾಗಿಲು ಮುಚ್ಚಿದ ಕೋಣೆಯಲ್ಲಿ ಉಂಟಾಗುವ ಆತಂಕಗಳ ರೀತಿ ಲಿಫ್ಟ್ ನಲ್ಲಿಯೂ ಅನುಭವಿಸುತ್ತಾರೆ. ಇಂತಹ ಭ್ರಮೆಗಳನ್ನು ನಿವಾರಿಸಲು ಹಾಗೂ ಆತಂಕಗಳನ್ನು ದೂರ ಮಾಡಲೆಂದೆ ಲಿಫ್ಟ್ನಲ್ಲಿ ಕನ್ನಡಿಗಳನ್ನು ಅಳವಡಿಸಿರುತ್ತಾರೆ. ಕನ್ನಡಿಯಲ್ಲಿ ತಮ್ಮನ್ನು ತಾವು ನೋಡಿಕೊಳ್ಳುತ್ತ ಇರುವಾಗಲೇ ಅಲ್ಲಿನ ಪುಟ್ಟದೊಂದು ಪ್ರಯಾಣ ಮುಗಿದು ಬಿಟ್ಟಿರುತ್ತದೆ. ಹೀಗಾಗಿ ಬೇರೆಯ ಕಡೆಗೆ ನಮ್ಮ ಗಮನ ಹರಿಯುವುದಿಲ್ಲ. ಲಿಫ್ಟ್ನಲ್ಲಿ ಕನ್ನಡಿ ಅಳವಡಿಸಲು ಇದು ಕೂಡ ಒಂದು ಕಾರಣ
ಕನ್ನಡಿಯಲ್ಲಿ ನಮ್ಮ ಸುತ್ತಮುತ್ತಲೂ ಇರುವವರ ನಡವಳಿಕೆಯನ್ನು ತಿಳಿಯಲು ಸಾಧ್ಯವಾಗುತ್ತದೆ. ಯಾರು ತಮ್ಮ ಹಿಂದೆ ಇದ್ದಾರೆ. ಏನು ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣುವುದರಿಂದ ನಮಗೊಂದು ಭದ್ರತೆಯ ಭಾವ ಉಂಟಾಗುತ್ತದೆ. ಹೀಗಾಗಿ ತಮ್ಮ ಸಹ ಪ್ರಯಾಣಿಕರ ಬಗ್ಗೆ ಒಂದು ಎಚ್ಚರಿಕೆಯಲ್ಲಿ ಜನರು ಲಿಫ್ಟ್ನಲ್ಲಿ ಪ್ರಯಾಣಿಸುತ್ತಾರೆ. ಅದು ಮಾತ್ರವಲ್ಲದೆ ಕನ್ನಡಿ ಇರುವುದರಿಂದ ಆ ಪ್ರಯಾಣ ಆದಷ್ಟು ಪಾರದರ್ಶಕ ಹಾಗೂ ಸುರಕ್ಷಿತ ಎಂಬ ಭಾವ ಜನರಲ್ಲಿ ಮೂಡುತ್ತದೆ.
ನಾವು ಸಾಮಾನ್ಯವಾಗಿ ಆಸ್ಪತ್ರೆಯ ಲಿಫ್ಟ್ಗಳಲ್ಲಿ ನೋಡಿರುತ್ತೇವೆ, ಅನೇಕ ರೋಗಿಗಳನ್ನು ವ್ಹೀಲ್ ಚೇರ್ ಮೇಲೆ ಕೂರಿಸಿಕೊಂಡು ಲಿಫ್ಟ್ನೊಳಗೆ ಅಲ್ಲಿನ ಸಿಬ್ಬಂದಿ ಬರುವುದು ಸರ್ವೆ ಸಾಮಾನ್ಯ. ಹೀಗೆ ಒಳಗೆ ಬಂದ ವ್ಹೀಲ್ ಚೇರ್ನ್ನು ವಾಪಸ್ ಹಿಂದಿನ ಬಂದಿಯಿಂದ ಎಳೆದುಕೊಂಡು ಹೋಗುವಾಗ ತಮ್ಮ ಹಿಂದೆ ಯಾರಿದ್ದಾರೆ. ಎಷ್ಟು ಗದ್ದಲವಿದೆ ಅನ್ನೋದು ವ್ಹೀಲ್ ಚೇರ್ ತಳ್ಳಿಕೊಂಡು ಬಂದವರಿಗೆ ಸ್ಪಷ್ಟವಾಗಿ ಗೊತ್ತಾಗುತ್ತದೆ.
ಇನ್ನು ಲಿಫ್ಟ್ನಲ್ಲಿ ಕನ್ನಡಿಯನ್ನು ಅಳವಡಿಸಲು ಶುರುವಾಗಿದ್ದು ಜಪಾನ್ನ ಎಲಿವೇಟರ್ ಅಸೋಸಿಯೇಷನ್ ಆಫ್ ಜಪಾನ್ ಎಂಬ ಸಂಸ್ಥೆಯ ಮಾರ್ಗದರ್ಶನದ ಮೇಲೆ. ಲಿಫ್ಟ್ನಲ್ಲಿ ಕನ್ನಡಿ ಅಳವಡಿಸುವುದರಿಂದ ಮಾನಸಿಕ ನಿರಾಳತೆಯ ಜೊತೆಗೆ ಅನೇಕ ವಿಚಾರಗಳಲ್ಲಿ ಒಂದು ನಿರಾಳತೆ ದೊರೆಯುತ್ತದೆ ಎಂದು ಅಧ್ಯಯನದಿಂದ ತಿಳಿದ ಈ ಸಂಸ್ಥೆ ಇಂತಹದೊಂದು ಮಾರ್ಗದರ್ಶನ ನೀಡಿತ್ತು. ಅದನ್ನು ಈಗಲೂ ಕೂಡ ಅಳವಡಿಸಿಕೊಂಡು ಬರಲಾಗುತ್ತಿದೆ.