newsics.com
ಚಿತ್ರದುರ್ಗ: ಮೊದಲ ಬಿಎಸ್‌ಸಿ ವಿದ್ಯಾರ್ಥಿನಿಯೊಬ್ಬಳು ಕಾಲೇಜು ಕಟ್ಟಡದ ಮೇಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ರದುರ್ಗದಲ್ಲಿ ಶುಕ್ರವಾರ ನಡೆದಿದೆ.
ಮೆದೇಹಳ್ಳಿ ನಿವಾಸಿ ಸುಧಾಕರ್ ಎಂಬುವರ ಪುತ್ರಿ ಪ್ರೇಮಾ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಬೆಳಗ್ಗೆ ಮನೆಯಿಂದ ಹೊರಟು ಕಾಲೇಜಿಗೆ ಬಂದಿದ್ದಳು. ಬಳಿಕ ಈ ಅನಾಹುತ ಸಂಭವಿಸಿದೆ. ಚಿತ್ರಡಾನ್ ಬಾಸ್ಕೋ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು.
ಈಕೆ ಕಾಲೇಜಿನ ಮೂರನೇ ಮಹಡಿಯಿಂದ ಜಿಗಿದಿದ್ದಾಳೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿಯನ್ನು ಕೂಡಲೇ ಬಸವೇಶ್ವರ ಆಸ್ಪತ್ತೆಗೆ ದಾಖಲಿಸಲಾಯಿತಾದರೂ ಪ್ರಯೋಜನವಾಗಲಿಲ್ಲ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಡಿಜಿಟಲ್ ಅರೆಸ್ಟ್‌ನಿಂದ ಬೆಚ್ಚಿ ಬೆತ್ತಲಾದ ಯುವತಿ! 5 ಲಕ್ಷ ಲಪಟಾಯಿಸಿದ ವರ್ಚುವಲ್ ವಂಚಕರು
ಬೆಂಗಳೂರಲ್ಲಿ ಕಸದಿಂದ ಕರೆಂಟ್ ಉತ್ಪಾದನೆ: ಶೀಘ್ರದಲ್ಲೇ ವಿದ್ಯುತ್ ಸ್ಥಾವರಕ್ಕೆ ಚಾಲನೆ