newsics.com
ಬೆಂಗಳೂರು: ಕಸದಿಂದ ವಿದ್ಯುತ್ ಉತ್ಪಾದಿಸುವ ಬಿಬಿಎಂಪಿ ಹಾಗೂ ಕೆಪಿಸಿಎಲ್ನ ಪ್ರಾಯೋಗಿಕ ಯೋಜನೆ ಬಹುತೇಕ ಯಶಸ್ವಿಯಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಈ ಘಟಕಕ್ಕೆ ಚಾಲನೆ ಸಿಗಲಿದೆ.
ಘಟಕದಲ್ಲಿ ನಿತ್ಯ 11.6 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ. ಇದರಿಂದಾಗಿ ತ್ಯಾಜ್ಯ ಸಂಸ್ಕರಣೆಯ ಸಮಸ್ಯೆಗೆ ಪರಿಹಾರ ಸಿಗುವ ಜೊತೆಗೆ ಹೆಚ್ಚುವರಿ ವಿದ್ಯುತ್ ಲಭಿಸಲಿದೆ.
ಈ ಹಿಂದೆ ಗೌರವ್ ಗುಪ್ತಾ ಬಿಬಿಎಂಪಿಯ ವಿಶೇಷ ಆಯುಕ್ತರಾಗಿದ್ದಾಗ ಈ ಚಿಂತನೆ ಪ್ರಾರಂಭವಾಗಿತ್ತು. ಆದರೆ ಆಗ ಹಲವು ಖಾಸಗಿ ಕಂಪನಿಗಳು ಹಿಂದೇಟು ಹಾಕಿದ್ದವು. ಬಳಿಕ ಕೆಪಿಸಿಎಲ್ ಸಹಯೋಗದಲ್ಲಿ ಈಗ ಯೋಜನೆ ಯಶಸ್ವಿಯಾಗಿ ಪೂರ್ಣಗೊಂಡಿದೆ.