newsics.com
ಬೆಂಗಳೂರು: ನಗರದ ಟೀ ವ್ಯಾಪಾರಿಯ ಬ್ಯಾಂಕ್ ಖಾತೆಗೆ ಬರೋಬ್ಬರಿ 999 ಕೋಟಿ ರೂಪಾಯಿ ಜಮೆ ಆಗಿದೆ. ಇದೀಗ ಟೀ ವ್ಯಾಪಾರಿ ಖಾತೆಗೆ ಯಾಕಾದ್ರೂ ಇಷ್ಟು ಹಣ ಬಂತೆಂದು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.
ದಿ 420 ಡಾಟ್ ಕಾಮ್ ವರದಿ ಪ್ರಕಾರ, ಬೆಂಗಳೂರಿನ ಇಂಡಿಯನ್ ಇನ್ಸಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಕ್ಯಾಂಪಸ್ನಲ್ಲಿ ಟೀ ವ್ಯಾಪಾರಿ ಎಸ್.ಪ್ರಭಾಕರ್ ಖಾತೆಗೆ ಹಣ ಜಮೆಯಾಗಿದೆ.
ಹಣ ಜಮೆಯಾಗಿರುವ ಖಾತೆಯಿಂದಲೇ ಪ್ರಭಾಕರ್ ಪ್ರತಿನಿತ್ಯ ವ್ಯವಹಾರ ನಡೆಸುತ್ತಾರೆ. ತಮ್ಮ ಖಾತೆಗೆ 999 ಕೋಟಿ ರೂಪಾಯಿ ಹಣ ಜಮೆಯಾಗಿರುವ ಮೆಸೇಜ್ ನೋಡಿ ಪ್ರಭಾಕರ್ ಒಂದು ಕ್ಷಣ ಶಾಕ್ ಆಗಿದ್ದರು. ಮೊದಲಿಗೆ ಯಾವುದೋ ಫೇಕ್ ಮೆಸೇಜ್ ಅಂತಾನೇ ತಿಳಿದಿದ್ದರು. ನಂತರ ಪರಿಶೀಲಿಸಿದಾಗ ಹಣ ಜಮೆಯಾಗಿರುವುದು ದೃಢಪಟ್ಟಿತ್ತು. ಹಣ ಜಮೆಯಾದ ಮರುಕ್ಷಣದಿಂದಲೇ ಪ್ರಭಾಕರ್ ಅವರ ಬ್ಯಾಂಕ್ ಖಾತೆಯನ್ನು ಫ್ರೀಝ್ (ಸ್ಥಗಿತ) ಮಾಡಲಾಗಿದೆ.
ಎಸ್.ಪ್ರಭಾಕರ್ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿದ್ದು, ಹಣ ಜಮೆಯಾದ ಮರುಕ್ಷಣದಿಂದಲೇ ಯಾವುದೇ ಬ್ಯಾಂಕಿಂಗ್ ವ್ಯವಹಾರ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರಿದೆ ಎಂದು ಪ್ರಭಾಕರ್ ಹೇಳಿದ್ದಾರೆ.
ವರದಿ ಪ್ರಕಾರ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಸಿಬ್ಬಂದಿಯ ಎಡವಟ್ಟಿನಿಂದ ಪ್ರಭಾಕರ್ ಖಾತೆಗೆ 999 ಕೋಟಿ ರೂ. ಜಮೆಯಾಗಿದೆ. ತಮ್ಮ ತಪ್ಪು ಅರಿವಾಗುತ್ತಿದ್ದಂತೆ ಪ್ರಭಾಕರ್ ಖಾತೆ ಫ್ರೀಝ್ ಮಾಡಲಾಗಿದೆ.
ಬ್ಯಾಂಕ್ ಸಿಬ್ಬಂದಿ ಎಲ್ಲಿ ತಪ್ಪಾಗಿದೆ ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಪ್ರಭಾಕರ್ ಅವರನ್ನು ಸಹ ಪದೇ ಪದೇ ಬ್ಯಾಂಕ್ಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ.
ಇದೀಗ ಬ್ಯಾಂಕ್ ಸಿಬ್ಬಂದಿ ಪ್ರಭಾಕರ್ ಅವರ ಬಳಿ ಆಧಾರ್ ಕಾರ್ಡ್ ಸೇರಿದಂತೆ ಹಲವು ದಾಖಲೆಗಳನ್ನು ಕೇಳುತ್ತಿದ್ದಾರೆ. ಘಟನೆ ನಡೆದು ಮೂರು ದಿನ ಕಳೆದರೂ ಬ್ಯಾಂಕ್ ನಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ.
ಮಳೆಯ ನಡುವೆಯೂ ಮೈಸೂರಿನಲ್ಲಿ ಜಂಬೂಸವಾರಿ ವೈಭವ, ನಾಡ ಅಧಿದೇವತೆಯನ್ನು ಕಣ್ತುಂಬಿಕೊಂಡ ಲಕ್ಷ ಲಕ್ಷ ಜನ